ಪಂಜಾಬ್ ಶಾಲಾ ಪ್ರಾಚಾರ್ಯರಿಗೆ ಸಿಂಗಾಪುರ ಪ್ರವಾಸ ಭಾಗ್ಯ!

ಚಂಡೀಗಢ: ಶಿಕ್ಷಕರಿಗೆ ವಿದೇಶಗಳಲ್ಲಿ ತರಬೇತಿ ನೀಡುವ ಯೋಜನೆ ಅನುಷ್ಠಾನಕ್ಕೆ ಪಂಜಾಬ್ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

ಈ ಯೋಜನೆಯಡಿ ಶಾಲಾ ಶಿಕ್ಷಣ ಇಲಾಖೆ 2022-23ನೇ ಹಣಕಾಸು ವರ್ಷದಲ್ಲಿ 36 ಮಂದಿ ಪ್ರಾಚಾರ್ಯರ ತಂಡವನ್ನು ಸಿಂಗಾಪುರದ ಪ್ರಿನ್ಸಿಪಾಲ್ಸ್ ಅಕಾಡೆಮಿಗೆ ಹಾಗೂ 30 ಮಂದಿಯನ್ನು ಸಿಂಗಾಪುರದ ನನ್ಯಾಂಗ್ ಟೆಕ್ನಿಕಲ್ ಯೂನಿವರ್ಸಿಟಿಯ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್‌ಗೆ ಕಳುಹಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

“ಈ ತರಬೇತಿಯು ಇಲ್ಲಿನ ಶಿಕ್ಷಕರಿಗೆ ಅತ್ಯಾಧುನಿಕ ಬೋಧನಾ ವಿಧಾನಗಳು, ನಾಯಕತ್ವ ಕೌಶಲಗಳು, ಬೋಧನಾ ಮತ್ತು ಕಲಿಕಾ ಸಾಮಗ್ರಿಗಳು ಹಾಗೂ ದೃಶ್ಯ-ಶ್ರವ್ಯ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗಲಿದೆ” ಎಂದು ಪ್ರಕಟಣೆ ತಿಳಿಸಿದೆ.

ಸಾಂಕ್ರಾಮಿಕ ಬಳಿಕದ ಜಗತ್ತಿನಲ್ಲಿ ಶಿಕ್ಷಣದ ಗುರಿಗಳನ್ನು ಕಂಡುಕೊಳ್ಳಲು ಇದು ನೆರವಾಗುವ ಜತೆಗೆ ಅಗತ್ಯ ಪ್ರಮುಖ ವ್ಯವಸ್ಥಾಪನೆ, ಶಾಲಾ ಸಂಸ್ಕೃತಿಯನ್ನು ರೂಪಿಸುವುದು, ಶಿಕ್ಷಕರ ವೃತ್ತಿಪರ ಬಂಡಾವಳವನ್ನು ನಿಮಿಸುವುದು, ಪಠ್ಯಕ್ರಮದ ನಾಯಕತ್ವ, ಮೇಲ್ವಿಚಾರಣೆ, ಪಾಠಗಳ ನಿಗಾ ಕೌಶಲಗಳು, ಬೋಧನೆ ಮತ್ತು ಕಲಿಕಾ ಅನುಶೋಧನೆಗಳು ಮತ್ತು ಪರಿಣಾಮಕಾರಿ ಸಂವಹನಕ್ಕೆ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವ ಜನಪ್ರಿಯ ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ 'ನಂಬರ್ 1'

Sat Feb 4 , 2023
ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ವಿಶ್ವ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶೇಕಡಾ 78 ರಷ್ಟು ರೇಟಿಂಗ್ ಪಡೆದುಕೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಮೆಕ್ಸಿಕೋ ಅಧ್ಯಕ್ಷ ಲೊಪೆಜ್ ಒಬ್ರಾಡಾರ್ ಎರಡನೇ ಸ್ಥಾನದಲ್ಲಿದ್ದು ಅವರಿಗೆ ಶೇಕಡಾ 68 ರಷ್ಟು ರೇಟಿಂಗ್ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬಾನಿಸ್ ಅವರಿಗೆ ಶೇಕಡ 58 ರಷ್ಟು ರೇಟಿಂಗ್ ಲಭಿಸಿದೆ. ಮಹತ್ವದ ಸಂಗತಿ ಎಂದರೆ ಅಮೆರಿಕ ಅಧ್ಯಕ್ಷ […]

Advertisement

Wordpress Social Share Plugin powered by Ultimatelysocial