ರೈತರು ಆತಂಕಗೊಳ್ಳುವ ಅಗತ್ಯವಿಲ್ಲ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಕಾನೂನುಬದ್ಧವಾಗಿ ಸಕ್ರಮಗೊಳಿಸುವ ಕರ್ನಾಟಕ ಗ್ರಾಮೀಣ ಯೋಜನಾ ಕಾಯ್ದೆಗೆ ಶೀಘ್ರದಲ್ಲೇ ಬದಲಾವಣೆ ಮಾಡಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಯ್ದೆಗೆ ತಿದ್ದುಪಡಿ ಮಾಡುವ ಸಂಬAಧ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ನೀಡುವ ವರದಿ ಆಧಾರದಲ್ಲಿ ಕಾನೂನಿಗೆ ತಿದ್ದುಪಡಿ ತಂದು ಅಕ್ರಮ, ಸಕ್ರಮ ಕಾಯ್ದೆಯನ್ನು ರಾಜ್ಯಾದ್ಯಂತ ಜಾರಿ ಮಾಡುವುದಾಗಿ ತಿಳಿಸಿದರು. ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ಉದ್ದೇಶದಲ್ಲಿ ರೈತರ ಹಿತಾಸಕ್ತಿ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಕಾಯ್ದೆ ತಿದ್ದುಪಡಿಯಾದ ಯಾರೊಬ್ಬರು ಆತಂಕಗೊಳ್ಳುವ ಅಗತ್ಯವಿಲ್ಲ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಸದುದ್ದೇಶದಿಂದಲೇ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ತಿದ್ದುಪಡಿ ಮಾಡುವುದರಿಂದ ರೈತರ ಜಮೀನನ್ನು ಕಬಳಿಸುವ ಇಲ್ಲವೇ, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ ಇದರಲ್ಲಿ ಅಡಗಿಲ್ಲ ಎಂದು ಹೇಳಿದರು.

Please follow and like us:

Next Post

ಅಕ್ಷಯ್ ಕುಮಾರ್ ಹಾಡಿಗೆ ಸ್ಟೆಪ್ ಹಾಕಿದ ವಾರ್ನರ್

Sun Jun 14 , 2020
ಕೋವಿಡ್-19 ಲಾಕ್ಡೌನ್ ವೇಳೆಯಲ್ಲಿ ಒಂದರ ನಂತರ ಒಂದು ಟಿಕ್ ಟಾಕ್ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳನ್ನು ಮನರಂಜಿಸುತ್ತಿರುವ ವಾರ್ನರ್, ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ. ಈ ಹಿಂದೆ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಹಲವು ನಟರ ಸಿನಿಮಾಗಳ ಡೈಲಾಗ್ ಗಳಿಗೆ ಅಭಿನಯಿಸಿ ಮನರಂಜಿಸಿದ್ದ ವಾರ್ನರ್, ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಒಬ್ಬರೇ ಸ್ಟೆಪ್ ಹಾಕಿ ವಿಡಿಯೋ ಹರಿಬಿಟ್ಟಿದ್ದ ವಿಡಿಯೋಗಳು ತುಂಬಾ ವೈರಲ್ ಆಗಿದ್ದವು. ಆದರೆ ವಿಶೇಷವೆಂದರೆ ಈ ಬಾರಿ ಮತ್ತೆ […]

Advertisement

Wordpress Social Share Plugin powered by Ultimatelysocial