ಅಕ್ಷಯ್ ಕುಮಾರ್ ಹಾಡಿಗೆ ಸ್ಟೆಪ್ ಹಾಕಿದ ವಾರ್ನರ್

ಕೋವಿಡ್-19 ಲಾಕ್ಡೌನ್ ವೇಳೆಯಲ್ಲಿ ಒಂದರ ನಂತರ ಒಂದು ಟಿಕ್ ಟಾಕ್ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳನ್ನು ಮನರಂಜಿಸುತ್ತಿರುವ ವಾರ್ನರ್, ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ. ಈ ಹಿಂದೆ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಹಲವು ನಟರ ಸಿನಿಮಾಗಳ ಡೈಲಾಗ್ ಗಳಿಗೆ ಅಭಿನಯಿಸಿ ಮನರಂಜಿಸಿದ್ದ ವಾರ್ನರ್, ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಒಬ್ಬರೇ ಸ್ಟೆಪ್ ಹಾಕಿ ವಿಡಿಯೋ ಹರಿಬಿಟ್ಟಿದ್ದ ವಿಡಿಯೋಗಳು ತುಂಬಾ ವೈರಲ್ ಆಗಿದ್ದವು. ಆದರೆ ವಿಶೇಷವೆಂದರೆ ಈ ಬಾರಿ ಮತ್ತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ ಹಾಡಿಗೆ ಟಿಕ್ ಟಾಕ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ತಾವಷ್ಟೇ ಅಲ್ಲದೆ, ಜೊತೆಯಲ್ಲಿ ಇಬ್ಬರೂ ಚಿಕ್ಕಮಕ್ಕಳೂ ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆ ಗಳಿಸಿದೆ. ಹಾಗೆಯೇ ಅಕ್ಷಯ್ ಕುಮಾರ್ ಅವರನ್ನೂ ಟ್ಯಾಗ್ ಮಾಡಿ ಬಾಲ ಡ್ಯಾನ್ಸ್ ಎಂದೂ ಕರೆದುಕೊಂಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ರಾಯಭಾಗ ತಾಲೂಕಿನ ಪರಮಾನಂದವಾಡಿಯಲ್ಲಿ ಘಟನೆ

Sun Jun 14 , 2020
ನಮ್ಮ ದ್ವಜ ನಮ್ಮ ಹೆಮ್ಮೆ ಅದರಂತೆ ಒಂದು ದೇಶದ ರಾಷ್ಟದ್ವಜವನ್ನು ಅರ್ದಕ್ಕೆ ಇಳಿಸಬೇಕಾದರೆ,  ದೇಶದ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಅಸುನಿಗಿದಾಗ ಅಥವಾ ಯಾವುದೋ ಒಂದು ಪರಿಸ್ಥಿತಿಯಲ್ಲಿ ರಾಷ್ಟ್ರದ ದ್ವಜವನ್ನು ಅರ್ದಕ್ಕೆ ಇಳಿಸುತ್ತಾರೆ. ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿಯಲ್ಲಿ ಇವತ್ತು ಮುಂಜಾನೆ ಹೊತ್ತಿನಲ್ಲಿ ಗ್ರಾಮ ಪಂಚಾಯತಿಯ ಕಾರ್ಯಾಲಯದ ಕಂಬಕ್ಕೆ  ರಾಷ್ಟç ದ್ವಜವನ್ನು ಅರ್ದಕ್ಕೆ ಇಳಿಸಿ ಇಲ್ಲಿನ ಅಧಿಕಾರಿಗಳು ತಮ್ಮ ನಿರ್ಲಕ್ಷ ತೋರಿದ್ದಾರೆ, ತಮಗೇನೂ ಸಂಬAದವಿಲ್ಲದAತೆ ನಡೆದುಕೊಂಡಿರುವ ಇಲ್ಲಿನ ಅಧಿಕಾರಿ ಮತ್ತು […]

Advertisement

Wordpress Social Share Plugin powered by Ultimatelysocial