ಲಕ್ಷ್ಮೇಶ್ವರ . ಸ್ಮಾರ್ಟ್ ಕ್ಲಾಸ ಉದ್ಘಾಟನೆ.

ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಕಲಿಕೆ ಯೋಜನೆಯಡಿಯಲ್ಲಿ ಐಸಿಟಿ/ಸ್ಮಾರ್ಟ್ ಕ್ಲಾಸ್ ರೂಮ್‍ಗಳ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಮ್.ಮುಂದಿನ ನೆರವೇರಿಸಿದರು.

ನಂತರ ಮಾತನಾಡಿದ ಅವರು ಪ್ರಸ್ತುತ ಶಿಕ್ಷಣದ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದು ಅದಕ್ಕನುಗುಣವಾಗಿ ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ಸಾಕಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಡಿಜಿಟಲ್ ಕಲಿಕೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಮಾರ್ಟ್ ಕ್ಲಾಸ್ ಅತ್ಯವಶ್ಯಕವಾಗಿದ್ದು ಇದರ ಪ್ರಯೋಜನ ವಿದ್ಯಾರ್ಥಿಗಳು ಪಡೆದುಕೊಳ್ಳಲಿ, ಎಂದು ಹಾರೈಸಿದರು.

ವಿದ್ಯಾರ್ಥಿಗಳಿಗೆ ಆಯಾ ವಿಷಯದ ಪಠ್ಯವನ್ನು ಚಿತ್ರದೊಂದಿಗೆ ಶಿಕ್ಷ ಕರು ಗಣಕಯಂತ್ರದ ಸಹಾಯದಿಂದ ಸುಲಲಿತವಾಗಿ ಗೋಡೆಯ ಮೇಲೆ ತೋರಿಸಿ ಪಾಠ ಮಾಡುವುದರಿಂದ ಮಕ್ಕಳಿಗೆ ಮನನ ಮಾಡಿಕೊಳ್ಳಲು ಅನುಕೂಲವಾಗಲಿದೆ. ಇದೇ ರೀತಿ ತಾಲೂಕಿನ ಬಹುತೇಕ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಮಾಡುವ ವಿಧಾನ ಅನುಸರಿಸಲು ಮುಂದಾದರೇ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೇರಳದ ವೈನಾಡುವಿನಲ್ಲಿ ಕಡಿಮೆಯಾದ ಮಳೆ.

Thu Jul 21 , 2022
ಮೈಸೂರು :ಕಬಿನಿ ಜಲಾಶಯ ಭರ್ತಿ. ಕೇರಳದ ವೈನಾಡುವಿನಲ್ಲಿ ಕಡಿಮೆಯಾದ ಮಳೆ. ಹೆಚ್.ಡಿ.ಕೋಟೆ ಕಬಿನಿ ಅಣೆಕಟ್ಟು ಭರ್ತಿ. ಜಲಾಶಯಕ್ಕೆ ಹರಿದು ಬರುತ್ತಿದೆ 12765 ಕ್ಯೂಸೆಕ್ಸ್ ನೀರು. 10063 ಕ್ಯೂಸೆಕ್ಸ್ ನೀರು ಕಬಿನಿಯಿಂದ ಹೊರಕ್ಕೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಇಂದಿನ ಮಟ್ಟ 2284 ನೀರು ಸಂಗ್ರಹ. ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ. ಜಲಾಶಯದಲ್ಲಿ ಇಂದು 19.52 ಟಿಎಂಸಿ ನೀರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial