Aarti Dayal : ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಕಿಂಗ್‌ಪಿನ್ ಆರತಿ ದಯಾಳ್‌ ಬೆಂಗಳೂರಲ್ಲಿ ಅರೆಸ್ಟ್‌; ಎಂಥೆಂಥವರನ್ನೆಲ್ಲ ಮಲಗಿಸಿದ್ದಳು!

ಬೆಂಗಳೂರು: ಮಧ್ಯಪ್ರದೇಶದಲ್ಲಿ (Madhyapradesh) ಅನೇಕ ರಾಜಕಾರಣಿಗಳು, ಮಂತ್ರಿಗಳು, ಸಂಸದರು, ಅಧಿಕಾರಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದ, ದೇಶದ ಹೈಪ್ರೊಫೈಲ್‌ ಹನಿಟ್ರ್ಯಾಪ್‌ (Honey trap) ಕಿಂಗ್‌ಪಿನ್‌ ಆರತಿ ದಯಾಳ್‌ (Aarti dayal) ಬೆಂಗಳೂರಿನಲ್ಲಿ ಅರೆಸ್ಟ್‌ ಆಗಿದ್ದಾಳೆ!

(Arrested in Bangalore)

2019ರಲ್ಲಿ ಇಡೀ ಮಧ್ಯಪ್ರದೇಶವನ್ನು ನಡುಗಿಸಿದ್ದ, ಭಾರಿ ಚರ್ಚೆಗೆ ಕಾರಣವಾಗಿದ್ದ ಹನಿ ಟ್ರ್ಯಾಪ್‌ ಸುಂದರಿಯನ್ನು ಆಗ ಬಂಧಿಸಲಾಗಿತ್ತು. ಬಳಿಕ 2020ರಲ್ಲಿ ಜಾಮೀನು ಪಡೆದು ನಾಪತ್ತೆಯಾಗಿದ್ದ ಆಕೆ ಎಲ್ಲಿದ್ದಾಳೆ ಎಂದು ಇತ್ತೀಚೆಗೆ ಮಧ್ಯ ಪ್ರದೇಶ ಹೈಕೋರ್ಟೇ ಪ್ರಶ್ನೆ ಮಾಡಿತ್ತು. ಇದೀಗ ಬೆಂಗಳೂರಿನ ಮಹದೇವಪುರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಒಂದು ಕಾಲದಲ್ಲಿ ಹನಿಟ್ರ್ಯಾಪ್‌ ಮಾಡುತ್ತಿದ್ದ ಆಕೆ ಈಗ ಹೈಪ್ರೊಫೈಲ್‌ ಮತ್ತು ಚಿಲ್ಲರೆ ಎರಡೂ ಕಳ್ಳತನ ಪ್ರಕರಣಗಳಲ್ಲಿ ಆಕ್ಟಿವ್‌ ಆಗಿದ್ದಳು. ಈಗ ಸಿಕ್ಕಿಬಿದ್ದಿರುವುದು ಅಂತಹುದೇ ಎಂದು ಪ್ರಕರಣದಲ್ಲಿ!

ಅವಳ ಅರೆಸ್ಟ್‌ ಬಗ್ಗೆ ತಿಳಿಯುವ ಮೊದಲು ಒಂದಿಷ್ಟು ಹಿಸ್ಟರಿ ತಿಳಿದುಕೊಳ್ಳೋಣ

ಹನಿಟ್ರ್ಯಾಪ್ ಕಿಂಗ್​ ಪಿನ್​ ಆರತಿ ದಯಾಳ್

‌ಆರತಿ ದಯಾಳ್‌ ಬಡ ಕುಟುಂಬದಿಂದ ಬಂದವಳಾದರೂ ರೂಪದಲ್ಲಿ ಶ್ರೀಮಂತೆ. ಹೀಗಾಗಿ ತನ್ನ ರೂಪವನ್ನೇ ಬಂಡವಾಳ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಮೊದ ಮೊದಲು ತಾನೇ ದೊಡ್ಡ ದೊಡ್ಡ ನಾಯಕರು ಮತ್ತು ಅಧಿಕಾರಿಗಳಿಗೆ ಸೆರಗು ಹಾಸುತ್ತಿದ್ದ ಆಕೆ ಬಳಿಕ ಅದನ್ನೇ ಒಂದು ಉದ್ಯಮವನ್ನಾಗಿ ಮಾಡಿಕೊಂಡಳು. ಬಡ ಕುಟುಂಬದಿಂದ ಬಂದ ಕಾಲೇಜು ಯುವತಿಯರಿಗೆ ಐಷಾರಾಮಿ ಜೀವನವನ್ನು ಪರಿಚಯಿಸಿ ಅವರನ್ನು ಸೆಕ್ಸ್‌ ದಂಧೆಗೆ ತಳ್ಳುತ್ತಿದ್ದಳು. ಆದರೆ, ಅದೆಲ್ಲವೂ ಹೈಪ್ರೊಫೈಲ್‌ ವ್ಯಕ್ತಿಗಳ ಜತೆಗಿನ ಒಡನಾಟವಾಗಿದ್ದರಿಂದ ಆ ಯುವತಿಯರು ಕೂಡಾ ಅದನ್ನು ಒಪ್ಪಿಕೊಂಡಿದ್ದರು.

ಒಂದು ಹಂತದವರೆಗೆ ಉನ್ನತ ನಾಯಕರಿಗೆ, ಉದ್ಯಮಿಗಳ ರಿಲ್ಯಾಕ್ಸ್‌ಗೆ ಹೆಣ್ಣು ಮಕ್ಕಳನ್ನು ಪೂರೈಸುತ್ತಿದ್ದ ಆಕಗೆ ಸಾಕಷ್ಟು ದುಡ್ಡು ಬರುತ್ತಿತ್ತು. ಈ ನಡುವೆ ಸರ್ಕಾರದ ಮಟ್ಟದಲ್ಲಿ ಉತ್ತಮ ಕನೆಕ್ಷನ್‌ ಹೊಂದಿದ್ದ ಶ್ವೇತಾ ಎಂಬಾಕೆ ಆಕೆಗೆ ಪರಿಚಯವಾಗಿದ್ದರಿಂದ ಆಕೆಯ ʻಉದ್ಯಮʼ ಹಿಗ್ಗಿತು!

ರಾಜಕಾರಣಿಗಳು ತಮಗೆ ಕಾಲೇಜು ಹುಡುಗಿಯರೇ ಬೇಕು ಎಂದು ಬೇಡಿಕೆ ಇಡುತ್ತಿದ್ದುದರಿಂದ ಅವರೊಂದು ಟೀಮನ್ನೇ ರೆಡಿ ಮಾಡಿ ಇಟ್ಟಿದ್ದರು. ಜತೆಗೆ 40 ಜನ ವೇಶ್ಯೆಯರನ್ನೂ ಬಾಡಿಗೆ ಆಧಾರದಲ್ಲಿ ಇಟ್ಟುಕೊಂಡಿದ್ದಳು! ಇವರ ಜಾಲ ಎಷ್ಟು ದೊಡ್ಡದಿತ್ತೆಂದರೆ ಮಧ್ಯಪ್ರದೇಶದ ಒಬ್ಬ ಮಾಜಿ ಮುಖ್ಯಮಂತ್ರಿಗೂ ಇವರು ಹುಡುಗಿಯರನ್ನು ಒದಗಿಸಿದ್ದರು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.

ಈ ದಂಧೆಯಿಂದ ಇವರಿಗೆ ಸಾಕಷ್ಟು ದುಡ್ಡು ಬರುತ್ತಿತ್ತು. ಆದರೆ, ಇಡೀ ರಾಜಕಾರಣ, ಅಧಿಕಾರಿ ವಲಯ ತಮ್ಮ ಮುಷ್ಠಿಯಲ್ಲಿದೆ ಎಂಬಂತೆ ಆಡತೊಡಗಿದ ಶ್ವೇತಾ ಮತ್ತು ಆರತಿ ದಯಾಳ್‌ ಇಬ್ಬರೂ ಹುಡುಗಿಯರ ಜತೆಗೆ ಕ್ಯಾಮೆರಾವನ್ನೂ ಗುಪ್ತವಾಗಿ ಕಳುಹಿಸಿ ಅವರ ಆತ್ಮೀಯ ಕ್ಷಣಗಳನ್ನು ಸೆರೆ ಹಿಡಿಯುತ್ತಿದ್ದರು. ಬಳಿಕ ಅದನ್ನು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಅದೆಷ್ಟೋ ಮಂದಿ ಈ ರೀತಿ ಹಣ ಕೊಟ್ಟು ತಮ್ಮ ಕೃತ್ಯಗಳನ್ನು ಮುಚ್ಚಿಕೊಂಡಿದ್ದರು.

ಆದರೆ, ತಿರುಗಿಬಿದ್ದಿದ್ದು ಅದೊಬ್ಬ ಎಂಜಿನಿಯರ್!‌

ಹಲವಾರು ಮಂದಿಯನ್ನು ಈ ರೀತಿ ಹನಿ ಟ್ರ್ಯಾಪ್‌ ಬಲೆಗೆ ಕೆಡವಿದ್ದ ಆರತಿ ದಯಾಳ್‌ ಇಂದೋರ್‌ ಪುರಸಭೆಯ ಎಂಜಿನಿಯರ್‌ ಹರ್ಬಜನ್‌ ಸಿಂಗ್‌ ಎಂಬವರಿಗೂ ಬಲೆ ಬೀಸಿದ್ದಳು. ಆತನ ಜತೆ ಹುಡುಗಿಯರ ಸರಸದ ವಿಡಿಯೋ ಇಟ್ಟುಕೊಂಡು ಆರತಿ ದಯಾಳ್‌ ಮತ್ತು ಮೋನಿಯಾ ಯಾದವ್‌ 3 ಕೋಟಿ ರೂ. ಹಫ್ತಾ ಬೇಡಿಕೆ ಇಟ್ಟಿದ್ದರು. ಆದರೆ, ಹರ್ಭಜನ್‌ ಮಾತ್ರ ಮರ್ಯಾದೆ ಹೋದರೂ ಹೋಗಲಿ, ಹಣ ಕೊಡುವುದಿಲ್ಲ ಎಂದು ಗಟ್ಟಿಯಾಗಿ ನಿಂತ. ಆತ ನೀಡಿದ ಪೊಲೀಸ್‌ ಕೇಸಿನ ಆಧಾರದಲ್ಲಿ ಮಧ್ಯಪ್ರದೇಶದ ಅತಿ ದೊಡ್ಡ ಹನಿ ಟ್ರ್ಯಾಪ್‌ ಪ್ರಕರಣ ಬಯಲಿಗೆ ಬಂದಿತ್ತು. ಆರತಿ ಜೈಲು ಸೇರಿದ್ದಳು.2019ರಲ್ಲಿ ಆರತಿ ದಯಾಳ್‌ ಬಂಧನ ನಡೆದಾಗ..

ಆವತ್ತು ಎಸ್‌ಐಟಿ ನಡೆಸಿದ ತನಿಖೆ ಮತ್ತು ಶೋಧ ಕಾರ್ಯದ ವೇಳೆ 1000ಕ್ಕೂ ಅಧಿಕ ವಿಡಿಯೋ ಕ್ಲಿಪ್ಪಿಂಗ್​ಗಳು, ಸೆಕ್ಸ್​ ಚಾಟ್​ಗಳು, ಬ್ಲಾಕ್​ಮೇಲ್ ಮಾಡಲು ಇಟ್ಟುಕೊಂಡಿದ್ದ ವಿಡಿಯೋಗಳು ಸಿಕ್ಕಿದ್ದವು. ಅದೆಷ್ಟೋ ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಅಧಿಕಾರಿಗಳ ಜೊತೆಗಿನ ಸೆಕ್ಸ್​ ವಿಡಿಯೋಗಳೂ ಇದ್ದವು ಎಂದರೆ ನೀವು ನಂಬಲೇಬೇಕು.

ಮುಂದೆಲ್ಲಿ ಹೋದಳು ಆರತಿ ದಯಾಳ್‌?

2019ರಲ್ಲಿ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಆರತಿ ದಯಾಳ್‌ ಬಂಧನವಾಗಿತ್ತು. ಆವತ್ತು ತನ್ನೆಲ್ಲ ಕಥೆಗಳನ್ನು ಹೇಳಿಕೊಂಡಿದ್ದ ದಯಾಳ್‌ ಜತೆಗೆ ವ್ಯವಸ್ಥೆಯ ಕಪ್ಪು ಮುಖಗಳನ್ನು ಬಯಲಿಗೆ ಎಳೆದಿದ್ದರು. ಈ ನಡುವೆ 2020ರಲ್ಲಿ ಆಕೆಗೆ ಜಾಮೀನು ಸಿಕ್ಕಿತು. ಅಲ್ಲಿಂದ ಆಕೆ ನಾಪತ್ತೆಯಾಗಿ ಬಿಟ್ಟಿದ್ದಳು.

ಆಕೆಯ ಪ್ರಭಾವ ಎಷ್ಟರ ಮಟ್ಟಿಗೆ ಇದೆಯೆಂದರೆ ಕೆಲವು ಸಮಯದ ಹಿಂದೆ ಆರತಿ ದಯಾಳ್‌ ಎಲ್ಲಿದ್ದಾಳೆ? ಜಾಮೀನು ಪಡೆದುಕೊಂಡು ಹೋದವಳು ಎಲ್ಲಿದ್ದಾಳೆ ಎನ್ನುವ ಮಾಹಿತಿ ಇದೆಯಾ? ಆಕೆ ಬದುಕಿದ್ದಾಳಾ? ಸತ್ತಿದ್ದಾಳಾ ಎಂದೆಲ್ಲ ಕೇಳಿತ್ತು.

ಹಾಗಿದ್ದರೆ ಆರತಿ ದಯಾಳ್‌ ಇದ್ದಿದ್ದೆಲ್ಲಿ?!

ಒಂದು ಕಾಲದ ಹನಿಟ್ರ್ಯಾಪ್‌ ಸ್ಟಾರ್‌ ಆರತಿ ದಯಾಳ್‌ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ತನ್ನ ಪ್ರೊಫೆಷನ್‌ ಬದಲಾಯಿಸಿದ್ದಳು. ಬಳಿಕ ಆಕೆ ಆಗಿದ್ದು ಹೈಪ್ರೊಫೈಲ್‌ ಕಳ್ಳಿ!

ಬೆಂಗಳೂರು ಚೆನ್ನೈ ಸೇರಿ ಹಲವು ಕಡೆಗಳಲ್ಲಿ ಕೆಲಸ ಮಾಡಿದ್ದಳು. ದೇಹಕ್ಕೆ ಮಸಾಜ್‌ ಮಾಡುವ ಕೆಲಸ ಆಕೆಗೆ ಚೆನ್ನಾಗಿ ಗೊತ್ತಿತ್ತು. ಮತ್ತು ಸೌಂದರ್ಯವೂ ಇತ್ತು. ಹೀಗಾಗಿ ಆಕೆಗೆ ಸ್ಪಾಗಳಲ್ಲಿ ಸುಲಭವಾಗಿ ಕೆಲಸ ಸಿಗುತ್ತಿತ್ತು. ಅಲ್ಲಿ ಕೆಲಸಕ್ಕೆ ಸೇರುತ್ತಿದ್ದ ಆಕೆ ಅಲ್ಲಿ ಕೆಲಸ ಮಾಡುವ ಯುವತಿಯರ ಸ್ನೇಹ ಸಂಪಾದಿಸುತ್ತಿದ್ದಳು. ಅಲ್ಲಿಗೆ ಬರುವ ಕಸ್ಟಮರ್‌ಗಳ ಜತೆಗೂ ಸಂಪರ್ಕ ಇರುತ್ತಿತ್ತು. ಸ್ಪಾದಲ್ಲಿ ಕೆಲಸ ಮಾಡುವ ಶ್ರೀಮಂತ ಹುಡುಗಿಯರ ಮನೆ, ಪಿಜಿಗಳಿಗೆ ಹೋಗಿ ಉಳಿಯುತ್ತಿದ್ದ ಆಕೆ ಕೆಲವು ದಿನಗಳ ಬಳಿಕ ಅವರ ಹಣ ಮತ್ತು ಬಂಗಾರವನ್ನು ಕದ್ದು ಎಸ್ಕೇಪ್‌ ಆಗುತ್ತಿದ್ದಳು.

ಸೋನು. ಸಮಂತಾ, ಆರತಿ ಅಗರ್ವಾಲ್ ಹೀಗೆ ಬೇರೆ ಬೇರೆ ಹೆಸರು ಹೇಳಿಕೊಂಡು ಬೇರೆ ಬೇರೆ ಕಡೆ ಕಳವು ಮಾಡಿದ್ದಳು. ಬೆಂಗಳೂರಿನ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಆಕೆಯ ಮೇಲೆ ಇಂಥಹುದೇ ಒಂದು ದೂರು ದಾಖಲಾಗಿತ್ತು. ಆಕೆಯ ಬೆನ್ನು ಬಿದ್ದ ಪೊಲೀಸರು ಆಕೆಯನ್ನು ವಿಜಯವಾಡದಲ್ಲಿ ಬಂಧಿಸಿ ಕರೆತಂದಿದ್ದಾರೆ. ಆಕೆಯ ಮೇಲೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಪ್ರಧಾನ ಪ್ರಕರಣ ಇರುವುದರಿಂದ ಅಲ್ಲಿನ ಪೊಲೀಸರಿಗೂ ಮಾಹಿತಿಯನ್ನು ನೀಡಲಾಗಿದೆ.

The post Aarti Dayal : ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಕಿಂಗ್‌ಪಿನ್ ಆರತಿ ದಯಾಳ್‌ ಬೆಂಗಳೂರಲ್ಲಿ ಅರೆಸ್ಟ್‌; ಎಂಥೆಂಥವರನ್ನೆಲ್ಲ ಮಲಗಿಸಿದ್ದಳು!

Please follow and like us:

tmadmin

Leave a Reply

Your email address will not be published. Required fields are marked *

Next Post

ಸನಾತನ ಧರ್ಮದ ಕುರಿತು ಹೇಳಿಕೆ: ಮುಂಬೈನಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್‌ಐಆರ್ ದಾಖಲು

Wed Sep 13 , 2023
ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಸಲ್ಲಿಕೆಯಾಗಿರುವ ದೂರಿನ ಮೇರೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಇಲ್ಲಿನ ಮೀರಾ ರೋಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಥಾಣೆ: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಸಲ್ಲಿಕೆಯಾಗಿರುವ ದೂರಿನ ಮೇರೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಇಲ್ಲಿನ ಮೀರಾ ರೋಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಡಿಎಂಕೆ ನಾಯಕ ಉದಯನಿಧಿ […]

Advertisement

Wordpress Social Share Plugin powered by Ultimatelysocial