ಪ್ರತಿ ದಿನ ಸ್ಕಿಪಿಂಗ್ ಮಾಡಿ ತೂಕ ಇಳಿಸಿಕೊಳ್ಳಿ

ಪ್ರತಿ ದಿನ ಸ್ಕಿಪಿಂಗ್ ಮಾಡಿ ತೂಕ ಇಳಿಸಿಕೊಳ್ಳಿ

ಹೆಚ್ಚುತ್ತಿರುವ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಜಿಮ್, ಡಯೆಟ್ ಎಂದೆಲ್ಲಾ ಮೊರೆ ಹೋಗುತ್ತಾರೆ. ಆದರೆ ಎಲ್ಲರಿಗೂ ಜಿಮ್ ಗೆ ಹೋಗಿ ಮೈ ದಂಡಿಸುವುದಕ್ಕೆ ಆಗುವುದಿಲ್ಲ. ಅಂತವರು ಮನೆಯಲ್ಲಿಯೇ ಸುಲಭವಾಗಿ ತಮ್ಮ ದೇಹ ತೂಕ ಇಳಿಸಿಕೊಳ್ಳಬಹುದು. ಸ್ಕಿಪಿಂಗ್ ಮಾಡುವುದರ ಮೂಲಕ ತೂಕ ಇಳಿಕೆಯಾಗುತ್ತದೆ ಜತೆಗೆ ಕಾಲುಗಳ ಸ್ನಾಯುಗಳಿಗೂ ಸರಿಯಾದ ರೀತಿಯಲ್ಲಿ ಬಲ ಸಿಗುತ್ತದೆ.

ಸ್ಕಿಪಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.ಸ್ಕಿಪಿಂಗ್ ಇದು ಒಳ್ಳೆಯ ಕಾರ್ಡಿಯೋ ವ್ಯಾಯಾಮ. ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಉಸಿರಾಟದ ತೊಂದರೆಯನ್ನು ಕೂಡ ಕಡಿಮೆ ಮಾಡುತ್ತದೆ.ದಿನಾ ಸ್ಕಿಪಿಂಗ್ ಮಾಡುವುದರಿಂದ ನಿಮ್ಮ ಕಾಲುಗಳ ಸ್ನಾಯುಗಳಲ್ಲಿ ಬಲ ಹೆಚ್ಚಾಗುತ್ತದೆ. ಹಾಗೇ ರಕ್ತ ಸಂಚಾರ ಸುಗುಮವಾಗುತ್ತದೆ.ಇನ್ನು ತೂಕ ಇಳಿಕೆ ಮಾಡುವವರಿಗೂ ಇದು ಒಳ್ಳೆಯ ವ್ಯಾಯಾಮವಾಗಿದೆ. ದಿನಾ ಅರ್ಧ ಗಂಟೆ ಸ್ಕಿಪಿಂಗ್ ಮಾಡಿದರೆ 300 ಕ್ಯಾಲೋರಿಯನ್ನು ನೀವು ಬರ್ನ್ ಮಾಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಥೈರಾಯ್ಡ್ ಮಾತ್ರೆ ಸೇವಿಸುವವರು ಈ ತಪ್ಪು ಮಾಡಬೇಡಿ

Mon Dec 20 , 2021
ನಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುವುದೇ ಥೈರಾಯ್ಡ್ ಗೃಂಥಿ. ಹಾರ್ಮೋನ್ ಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಶರೀರದಲ್ಲಿ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಒಮ್ಮೆ ಥೈರಾಯ್ಡ್ ಸಮಸ್ಯೆ ಶುರುವಾಯಿತೆಂದರೆ ನೀವು ನಿಯಮಿತವಾಗಿ ಔಷಧಿಯ ಸೇವನೆ ಮಾಡಬೇಕಾಗುತ್ತದೆ. ಔಷಧಿ ಸೇವಿಸಿದ ಮಾತ್ರಕ್ಕೆ ಥೈರಾಯ್ಡ್ ಪೂರ್ತಿಯಾಗಿ ಗುಣಮುಖವಾಗುವುದಿಲ್ಲ. ನಮ್ಮ ಆಹಾರ, ಜೀವನಕ್ರಿಯೆ ಇವುಗಳ ಮೂಲಕವೇ ನಾವು ಥೈರಾಯ್ಡ್ ಅನ್ನು ಒಂದು ಹಂತಕ್ಕೆ ನಿಯಂತ್ರಿಸಲು ಸಾಧ್ಯ. ಥೈರಾಯ್ಡ್ ಸಮಸ್ಯೆಯಿಂದ ಥೈರಾಯ್ಡ್ ಗ್ರಂಥಿಯು ಅಗತ್ಯಕ್ಕಿಂತ […]

Advertisement

Wordpress Social Share Plugin powered by Ultimatelysocial