ಸಿನಿಮಾ ರಂಗದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾದ ನಟಿ ದೀಪಿಕಾ ದಾಸ್.

 

ದೀಪಿಕಾ ದಾಸ್ ಸಿನಿಮಾ ರಂಗದ ಮೂಲಕವೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ದೂಧ್ ಸಾಗರ್, ಈ ಮನಸೇ, ಡ್ರೀಮ್ ಗರ್ಲ್ ಹೀಗೆ ಕೆಲವು ಸಿನಿಮಾಗಳನ್ನು ಮಾಡಿದರು. ಎಷ್ಟೇ ಸಿನಿಮಾಗಳನ್ನು ಮಾಡಿದರೂ ಸಿನಿಮಾ ರಂಗ ಮಾತ್ರ ಕೈ ಹಿಡಿಯಲಿಲ್ಲ. ಕನ್ನಡದಲ್ಲಿ ಮಾತ್ರವಲ್ಲ ತೆಲುಗಿಗೂ ಹೋಗಿ ಬಂದಿದ್ದು ಇದೀಗ ದೀಪಿಕಾ ದಾಸ್ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ಸಿನಿಮಾ ರಂಗ ಕೈ ಹಿಡಿಯದಿದ್ರು ಕಿರುತೆರೆಯಲ್ಲಿ ದೀಪಿಕಾ ದಾಸ್ ಸಾಕಷ್ಟು ಹೆಸರು ಮಾಡಿದ್ದರು. ನಾಗಿಣಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾದರು. ಕಿರುತೆರೆಯಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಪರಿಣಾಮ ಬಿಗ್ ಬಾಸ್ ಗೂ ಎಂಟ್ರಿಕೊಟ್ಟು ಬಂದಿದ್ದರು.ಬಿಗ್ ಬಾಸ್ ಮನೆಯಲ್ಲಿ ಎರಡೆರಡು ಬಾರಿ ಪ್ರವೇಶ ಮಾಡಿದ ಕೆಲವೇ ಕೆಲವು ನಟಿಯರಲ್ಲಿ ದೀಪಿಕಾ ದಾಸ್ ಕೂಡ ಒಬ್ಬರು. ಎರಡು ಬಾರಿ ಹೋದಾಗಲೂ ದೀಪಿಕಾ ಫಿನಾಲೆಗೆ ಬರುತ್ತಾರೆ, ಅವರೇ ಟ್ರೋಫಿ ವಿನ್ ಆಗುತ್ತಾರೆ ಎಂದೆಲ್ಲ ಸುದ್ದಿ ಆಯಿತು. ಅದು ನಿಜ ಎನ್ನುವಂತೆ ಅವರನ್ನು ಸಪೋರ್ಟ್ ಮಾಡಿದರು ವೀಕ್ಷಕರು. ಆದರೆ, ಫಿನಾಲೆಗೆ ಬಂದರೂ ಬಿಗ್ ಬಾಸ್ ಪಟ್ಟ ಮಾತ್ರ ದಕ್ಕಲಿಲ್ಲ.ಇದೀಗ ದೀಪಿಕಾ ದಾಸ್ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಅವರು ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಅಂದು ದೀಪಿಕಾ ನಟಿಸಬೇಕಿರುವ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಮೂಲಕ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀಲಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಅನುಪಮಾಗೌಡ ಫುಲ್ ಮಿಂಚಿಂಗ್.

Sun Feb 26 , 2023
‘ಅಕ್ಕ’ ಧಾರಾವಾಹಿಯ ಮೂಲಕ ಪ್ರಮುಖ ಪಾತ್ರಧಾರಿ ಆಗಿ ಕಾಣಿಸಿಕೊಂಡ ಅನುಪಮಾ ಗೌಡ ತಮ್ಮ ಪ್ರತಿಭೆಯಿಂದಲೇ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ‘ಅಕ್ಕ’ ಧಾರವಾಹಿಯ ನಂತರ ಅವರ ಲಕ್ ಬದಲಾಗಿತ್ತು. ಅಲ್ಲಿಂದ ಹೊಸ ಹೊಸ ಅವಕಾಶಗಳು ನಟಿಯನ್ನು ಹರಸಿ ಬಂದವು.ಹಲವಾರು ಕಾರ್ಯಕ್ರಮಗಳನ್ನು ಅನುಪಮಾ ಗೌಡ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಕನ್ನಡದಲ್ಲಿ ಹಲವಾರು ಶೋಗಳ ಜವಾಬ್ದಾರಿಯನ್ನು ಅನುಪಮಾ ಅವರೇ ಹೊತ್ತಿದ್ದರು. ಕೆಲ ಶೋಗಳನ್ನು ನಿರೂಪಣೆ ಮಾಡಿ ಕಾರ್ಯಕ್ರಮ ಮುಗಿಸಿದ […]

Advertisement

Wordpress Social Share Plugin powered by Ultimatelysocial