2022ರ ಬಜೆಟ್‌ಗಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಮತ್ತಷ್ಟು ರಿಯಾಯಿತಿ ಸಾಧ್ಯತೆ;

2022ರ ಬಜೆಟ್‌ಗಾಗಿ ಸರ್ಕಾರ ತಯಾರಿ ನಡೆಸುತ್ತಿದೆ. ಇತರ ಕೈಗಾರಿಕೆಗಳ ಜೊತೆಗೆ ಆಟೋ ಉದ್ಯಮವೂ ಈ ಬಾರಿ ಬಜೆಟ್ ನಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿದೆ. ಫೆಬ್ರವರಿ 1, 2022 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ.

ಇ-ವಾಹನಗಳಿಗೆ ಉತ್ತೇಜನ ನೀಡಲು ಸರ್ಕಾರ ಈ ಬಜೆಟ್‌ನಲ್ಲಿ FAME-2 ನೀತಿಯ ಅಡಿಯಲ್ಲಿ ಸಬ್ಸಿಡಿ ಮತ್ತು ತೆರಿಗೆ ವಿನಾಯಿತಿಯನ್ನು ನೀಡುವ ಸಾಧ್ಯತೆ ಹೆಚ್ಚಿದೆ.

ಗ್ರಾಹಕರ ಬೇಡಿಕೆಯನ್ನು ಪೂರೈಸಲು ಮತ್ತು ಇ-ವಾಹನಗಳ ಬಳಕೆಯನ್ನು ಹೆಚ್ಚಿಸಲು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023 ರ ನಂತರ FAME-2 ಸಬ್ಸಿಡಿಯನ್ನು ಮುಂದುವರಿಸುವ ಸಾಧ್ಯತೆಯಿದೆ.

ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವತ್ತ ಸರ್ಕಾರ ಗಮನಹರಿಸಬೇಕು. ಕ್ಷಿಪ್ರ ಇವಿ ಅಳವಡಿಕೆಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ಕಳೆದ 15 ವರ್ಷಗಳಲ್ಲಿ ಜನರು ಖರೀದಿಸಿದ ಇ-ವಾಹನಗಳ ಸಂಖ್ಯೆಗಿಂತ ಹೆಚ್ಚು ವಾಹನವನ್ನು 2021 ರಲ್ಲಿ ಖರೀದಿಸಿದ್ದಾರೆ. ಭಾರತೀಯ ಗ್ರಾಹಕರಲ್ಲಿ ಇ-ವಾಹನಗಳ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಕಳೆದ ವರ್ಷ ಒಟ್ಟು 2.34 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. ಹಾಗಾಗಿ ಬಜೆಟ್ ನಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಸಿಗುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಹೀಂದ್ರಾ ವಿದ್ಯುತ್-ಆಲ್ಫಾ ಕಾರ್ಗೋ ಬಿಡುಗಡೆ;

Sat Jan 29 , 2022
ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ (Mahindra Electric) ಹೊಸ ಎಲೆಕ್ಟ್ರಿಕ್ 3-ವೀಲರ್ ಇ-ಆಲ್ಫಾ (Mahindra e-Alfa) ಕಾರ್ಗೋವನ್ನು ಬಿಡುಗಡೆ ಮಾಡಿದೆ. ಈ ತ್ರಿಚಕ್ರ ವಾಹನವು ದೊಡ್ಡ ಉಳಿತಾಯವನ್ನೂ ನೀಡಲಿದೆ ಎಂದು ಮಹೀಂದ್ರಾ ಕಂಪೆನಿ ಹೇಳಿಕೊಂಡಿದೆ. ಏಕೆಂದರೆ ಇ-ಆಲ್ಫಾ ಕಾರ್ಗೋ ಕೇವಲ 59 ಪೈಸೆಯಲ್ಲಿ 1 ಕಿಲೋಮೀಟರ್ ಓಡಿಸಬಹುದು. ಹೀಗಾಗಿಯೇ ಹೊಸ ಮಹೀಂದ್ರ ಎಲೆಕ್ಟ್ರಿಕ್ ಕಾರ್ಗೋ ಭಾರತೀಯ ರಸ್ತೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ. ಪೆಟ್ರೋಲ್-ಡೀಸೆಲ್ ಚಾಲಿತ 3-ಚಕ್ರ ವಾಹನಗಳಿಗೆ ಹೋಲಿಸಿದರೆ ಇ-ಆಲ್ಫಾ […]

Advertisement

Wordpress Social Share Plugin powered by Ultimatelysocial