ಮದುವೆಗೆ ಸಜ್ಜಾದ ಓಯೊ ಮುಖ್ಯಸ್ಥ: ಪ್ರಧಾನಿ ಮೋದಿಗೂ ಆತ್ಮೀಯ ಕರೆಯೋಲೆ!

 

ಮುಂದಿನ ತಿಂಗಳು ಓಯೊ ಮುಖ್ಯಸ್ಥ ರಿತೇಶ್ ಅಗರ್​ವಾಲ್​ ಮದುವೆಯಾಗಲು ಸಜ್ಜಾಗಿದ್ದು ಹೀಗಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ.

ಪ್ರಧಾನಿ ನಿವಾಸಕ್ಕೆ ರಿತೇಶ್ ಅಗರ್​ವಾಲ್​, ತಮ್ಮ ತಾಯಿ ಮತ್ತು ಅವರ ಭಾವಿ ಪತ್ನಿಯೊಂದಿಗೆ ತೆರಳಿ ಆಮಂತ್ರಿಸಿದ್ದು ಭೇಟಿಯ ಫೋಟೊಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಿತೇಶ್​ ಅಗರ್​ವಾಲ್​ ಹಂಚಿಕೊಂಡಿರುವ ಫೋಟೋಗಳಲ್ಲಿ ಭಾವಿ ದಂಪತಿ ಪ್ರಧಾನಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಅಗರ್ವಾಲ್ ಕೂಡ ಪ್ರಧಾನಿಯವರ ಭುಜಕ್ಕೆ ಶಾಲು ಹೊದಿಸಿದರು.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಓಯೊ ಮುಖ್ಯಸ್ಥ ‘ಪ್ರಧಾನ ಮಂತ್ರಿ ಅವರ ಆಶೀರ್ವಾದದೊಂದಿಗೆ, ನಾವು ಹೊಸ ಜೀವನಕ್ಕೆ ಸಿದ್ಧರಾಗಿದ್ದೇವೆ’ ಎಂದು ಅವರು ಬರೆದಿದ್ದಾರೆ. ‘ಅವರು ನಮ್ಮನ್ನು ಸ್ವೀಕರಿಸಿದ ರೀತಿಯನ್ನು ಪದಗಳು ಬಣ್ಣಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಧ ಪ್ರಕರಣಗಳು ಹೆಚ್ಚಾಗುತ್ತಿದ್ದು; ಬೆಂಗಳೂರಿಗೆ ಹೆಚ್ಚುವರಿ 2000 ಪೋಲಿಸರನ್ನ ನಿಯೋಜಿಸಿದ ರಾಜ್ಯ ಸರ್ಕಾರ

Mon Feb 20 , 2023
  ಬೆಂಗಳೂರು,ಫೆಬ್ರವರಿ20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಂಗಳೂರಿನ ಪೊಲೀಸ್ ಇಲಾಖೆಯನ್ನ ಬಲ ಪಡಿಸುವ ನಿಟ್ಟಿನಲ್ಲಿ 2000 ಪೋಲಿಸರನ್ನು ಬೆಂಗಳೂರು ನಗರಕ್ಕೆ ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನಿರ್ಣಯವನ್ನ ಕೈಗೊಂಡಿದ್ದು, ಸರ್ಕಾರದ ಈ ನಿರ್ಣಯಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಟ್ವೀಟರ್ ಮೂಲಕ ಧನ್ಯವಾದ ಹೇಳಿದ್ದಾರೆ. 2000 ಪೊಲೀಸ್ […]

Advertisement

Wordpress Social Share Plugin powered by Ultimatelysocial