ನಾಗರಬಾವಿಯಲ್ಲಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು, ಕಾರು ನಿಲ್ಲಿಸದೇ ಎಸ್ಕೇಪ್ ಆದ ಚಾಲಕ

ನಾಗರಬಾವಿಯಲ್ಲಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು, ಕಾರು ನಿಲ್ಲಿಸದೇ ಎಸ್ಕೇಪ್ ಆದ ಚಾಲಕ

ನಾಯಂಡನಹಳ್ಳಿಯ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ, ಕಾಮಾಕ್ಷಿಪಾಳ್ಯದ ಸಂಬಂಧಿಕರ ಮನೆಯಿಂದ ಹಿಂತಿರುಗುವ ವೇಳೆ ದುರ್ಘಟನೆ ಸಂಭವಿಸಿದೆ.ಬೆಂಗಳೂರು: ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಮೃತಪಟ್ಟ ಘಟನೆ ಬೆಂಗಳೂರಿನ ನಾಗರಬಾವಿಯ ರಿಂಗ್ ರಸ್ತೆಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಬೇನಂ ಬರ್ಮನ್(42) ಮೃತ ದುರ್ದೈವಿ. ಘಟನೆ ಬಳಿಕ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದು ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೇನಂ ಬರ್ಮನ್ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದಿದೆ. ಈ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾತ್ರಿ 11ರ ಸುಮಾರಿಗೆ ಈ ಘಟನೆ ನಡೆದಿದೆ. ನಾಯಂಡನಹಳ್ಳಿಯ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ, ಕಾಮಾಕ್ಷಿಪಾಳ್ಯದ ಸಂಬಂಧಿಕರ ಮನೆಯಿಂದ ಹಿಂತಿರುಗುವ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತದ ನಂತರ ಕಾರನ್ನ ನಿಲ್ಲಿಸದೇ ಕಾರು ಚಾಲಕ ಪರಾರಿಯಾಗಿದ್ದಾನೆ. ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಮತ್ತೊಂದೆಡೆ ತುಮಕೂರಿನ ಕ್ಯಾತ್ಸಂದ್ರ ಬಳಿ ರೈಲಿಗೆ ಸಿಲುಕಿ ಸುಮಾರು 65 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತುಮಕೂರು ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಮೃತರ ಗುರುತು ಪತ್ತೆಯಾಗಿಲ್ಲ.

ನೀರಲ್ಲಿ ಮುಳುಗಿ ಯುವಕ ಸಾವು
ತುಮಕೂರು: ಪಾವಗಡ ತಾಲೂಕಿನ ನಾಗಲಮಡಿಕೆ ಜಲಾಶಯದಲ್ಲಿ ಈಜುತ್ತಿದ್ದ ವೇಳೆ ಮುಳುಗಿ ತಿಪ್ಪನಹಳ್ಳಿಯ ನಿರಂಜನ್(21) ಮೃತಪಟ್ಟ ಘಟನೆ ನಡೆದಿದೆ. ಆಂಧ್ರದ ಕಲ್ಯಾಣದುರ್ಗ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ನಿರಂಜನ (21) ಮೃತ ದುರ್ದೈವಿ. ನಾಗಲಮಡಿಕೆಗೆ ಮದುವೆಗೆಂದು ಆಗಮಿಸಿದ್ದ ಯುವಕ ನಿನ್ನೆ ಈಜಲು ಹೋಗಿ ಮೃತಪಟ್ಟಿದ್ದಾನೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಮಿಳು ಹಾಸ್ಯನಟ ವಡಿವೇಲು ಆಸ್ಪತ್ರೆಗೆ ದಾಖಲು: ಒಮಿಕ್ರಾನ್ ಸೋಂಕು ಶಂಕೆ

Mon Dec 27 , 2021
ಚೆನ್ನೈ: ತಮಿಳು ಹಾಸ್ಯ ನಟ ವಡಿವೇಲು ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಚೆನ್ನೈ ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಡಿವೇಲು ಅವರು ಇತ್ತೀಚಿಗಷ್ಟೇ ಲಂಡನ್ ನಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ತಮಿಳು ಸಿನಿಮಾ ‘ನಾಯ್ ಶೇಖರ್ ರಿಟರ್ನ್ಸ್’ ಚಿತ್ರೀಕರಣಕ್ಕೆಂದು ಅವರು ಲಂಡನ್ನಿಗೆ ತೆರಳಿದ್ದರು. ವಿದೇಶದಿಂದ ವಾಪಸ್ ಆದಾಗಲೇ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂದಿತ್ತು ಎಂದು ಮನೆಯವರಿಂದ ತಿಳಿದುಬಂದಿದೆ. ವಡಿವೇಲು ಅವರಿಗೆ ಒಮಿಕ್ರಾನ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial