ಜಿಲ್ಲೆಯಲ್ಲಿ ನಾಲ್ಕು ದಿನಗಳ ಅಂತರದಲ್ಲಿಯೇ ನಾಲ್ಕು ಮರ್ಡರ್; ಸರಣಿ ಕೊಲೆಗಳಿಂದ ಜನರಲ್ಲಿ ಆತಂಕ

ಹಾಸನ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ (Crime News) ಸಂಖ್ಯೆ ಹೆಚ್ಚಾಗುತ್ತಿದೆಯಾ ಅನ್ನೋ ಅನುಮಾನಗಳು ಮೂಡುತ್ತಿವೆ. ಕಳೆದ ನಾಲ್ಕು ದಿನಗಳ ಅಂತರದಲ್ಲಿ ನಾಲ್ಕು ಕೊಲೆಗಳು (Murder) ಸೇರಿದಂತೆ ಒಂದಿಷ್ಟು ಗಲಾಟೆ ಪ್ರಕರಣಗಳು ವರದಿ ಆಗುತ್ತಿದೆ. ಮಾ.15 ರಂದು ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಕಾರಿನಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ವ್ಯಕ್ತಿಯ ಶವ (Dead body) ಪತ್ತೆಯಾಗಿದೆ.
ಇನ್ನೂ ಇದೇ ದಿನದಂದು ಹಾಸನ ಜಿಲ್ಲೆ, ಸಕಲೇಶಪುರ (Sakaleshapur) ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಅನಿಲ್ ರಾಜ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಅನಿಲ್ ರಾಜ್ ಕೊಲೆ ಪ್ರಕರಣ ಸಂಬಂಧ ಆರೋಪಿಗಳಾದ ಪ್ರಸಾದ್, ಜಯಲಕ್ಷ್ಮಿ, ಪ್ರಿಯ, ಮತ್ತು ಮೋಹನ್‌ ನಾಲ್ವರನ್ನು ಬಂಧಿಸಲಾಗಿತ್ತು. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಚ್ಚಿನಿಂದ ಕೊಚ್ಚಿ ಮಹಿಳೆಯ ಕೊಲೆ
ಮಾ.16 ರಂದು ಹಾಸನ ಜಿಲ್ಲೆಯಲ್ಲಿ ಮತ್ತೊಂದು ಮರ್ಡರ್ ಪ್ರಕರಣ ವರದಿಯಾಗಿತ್ತು. ಮಚ್ಚಿನಿಂದ ಕೊಚ್ಚಿ ರೇವತಿ (33) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಪುರ ಗ್ರಾಮದಲ್ಲಿ ಕೊಲೆ ನಡೆದಿತ್ತು. ಲತೇಶ್ ಎಂಬಾತ ಈ ರೇವತಿ ಮೇಲೆ ಕಣ್ಣು ಹಾಕಿದ್ದನು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ವಿರೋಧ ಮಾಡಿದ್ದಕ್ಕೆ ರೇವತಿಯನ್ನು ಕೊಚ್ಚಿ ಕೊಲೆ ಮಾಡಿದ್ದನು. ಸದ್ಯ ಆರೋಪಿ ಲತೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಲತೇಶ್ ಸಹ ದೊಡ್ಡಪುರ ಗ್ರಾಮದ ನಿವಾಸಿಯಾಗಿದ್ದಾನೆ. ಈ ಹಿಂದೆ ಪ್ರಕರಣವೊಂದರಲ್ಲಿ ಲತೇಶ್ ಭಾಗಿಯಾಗಿದ್ದನು.

ಚಾಕುವಿನಿಂದ ಇರಿದು ಯುವಕ ಕೊಲೆ
ಈ ಮೂರು ಕೊಲೆಗಳು ಮಾಸುವ ಮುನ್ನ ನಿನ್ನೆ ಮತ್ತೊಂದು ಹತ್ಯೆ ನಡೆದಿದೆ. ಚಾಕುವಿನಿಂದ ಇರಿದು ಯುವಕನ ಬರ್ಬರವಾಗಿರುವ ಘಟನೆ ನಡೆದಿದೆ. ಅಪ್ಸರ್ (27) ಕೊಲೆಯಾದ ಯುವಕ. ಅಪ್ಸರ್ ಸಕಲೇಶಪುರದ ಕುಶಾಲನಗರ ಬಡಾವಣೆಯ ನಿವಾಸಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಐವರ ವಿರುದ್ಧ ದೂರು, ಸಿಸಿಟವಿಯಲ್ಲಿ ದೃಶ್ಯ ಸೆರೆ
ಕೊಲೆಯಾದ ಅಪ್ಸರ್ ಅಕ್ರಮ ದನದ ಮಾಂಸ ಮಾರಾಟ ಹಾಗೂ ಚರಂಡಿಯಲ್ಲಿ ತ್ಯಾಜ್ಯ ಬಿಸಾಡುತ್ತಿದ್ದನಂತೆ. ಇದೇ ವಿಚಾರಕ್ಕೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕು ಹಿಡಿದು ಗಲಾಟೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಪ್ಸರ್ ಕೊಲೆ ಸಂಬಂಧ ಹೆಸಾನ್ ಖುರೇಷಿ, ಶಾಹಿದ್, ನಯಾಝ್ ಖುರೇಷಿ, ಸಲ್ಮಾನ್ ಖುರೇಷಿ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ.

SP ಆರ್.ಶ್ರೀನಿವಾಸ್‌ಗೌಡ ಮಾಹಿತಿ
ಸರಣಿ ಕೊಲೆಗಳಿಂದ ಹಾಸನ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಪೊಲೀಸರು ಒಂದು ಪ್ರಕರಣ ಭೇದಿಸಿದ್ದು. ಉಳಿದ ಮೂರು ಕೊಲೆ ಪ್ರಕರಣದ ಆರೋಪಿಗಳ ಸುಳಿವು ಪತ್ತೆ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಆರೋಪಿಗಳ ಬಂಧನ ಮಾಡಲಾಗುವುದು ಎಂದು SP ಆರ್.ಶ್ರೀನಿವಾಸ್‌ಗೌಡ ಮಾಹಿತಿ ನೀಡಿದ್ದಾರೆ.

ಸಾವಿನಲ್ಲಿ ಸಾರ್ಥಕತೆ, ನಾಲ್ವರ ಜೀವ ಉಳಿಸಿ ಅಂಧರಿಗೆ ಬೆಳಕಾದ RSS ಕಾರ್ಯಕರ್ತ
ಆರ್ ಎಸ್‍ಎಸ್ ಕಾರ್ಯಕರ್ತ (RSS Activist) ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು, ತಮ್ಮ ಅಂಗಾಂಗಗಳನ್ನು ದಾನ (Organ Donation) ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಬೆಳಗಾವಿಯ ಮಹಾಬಳೇಶ್ವರ ನಗರದ ನಿವಾಸಿ ಉಮೇಶ ಬಸವಣ್ಣಿ ದಂಡಗಿ (Umesh Basanni Dandagi) ಎಂಬುವವರ ಮಿದುಳು‌ ನಿಷ್ಕ್ರಿಯಗೊಂಡಿತ್ತು (Barin Dead).ಇದರಿಂದ ಆತನ ಕುಟುಂಬಸ್ಥರು (Family) ಅಂಗಾಗ ದಾನ ಮಾಡುವ ಮೂಲಕಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕನಾಲ್ವರ ಜೀವ ಉಳಿಸಿ ಅಂಧರಿಬ್ಬರ ಬಾಳಿಗೆ ಬೆಳಕಾಗಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್ನಲ್ಲಿ 'ಅತ್ಯಂತ ಸ್ಮರಣೀಯ' ಶತಕದ ನಂತರ ದಿವಂಗತ ತಂದೆಗೆ ಗೌರವ ಸಲ್ಲಿಸಿದ ಬೆನ್ ಸ್ಟೋಕ್ಸ್!

Fri Mar 18 , 2022
ಬಾರ್ಬಡೋಸ್‌ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ 2 ನೇ ಟೆಸ್ಟ್‌ನ 2 ನೇ ದಿನದಂದು ಹೆಗ್ಗುರುತನ್ನು ತಲುಪಿದ ನಂತರ ಬೆನ್ ಸ್ಟೋಕ್ಸ್ ತನ್ನ 11 ನೇ ಟೆಸ್ಟ್ ಶತಕವನ್ನು ‘ಅತ್ಯಂತ ಸ್ಮರಣೀಯ’ ಎಂದು ಕರೆದರು. ಶುಕ್ರವಾರ ಇಂಗ್ಲೆಂಡ್ ಉಪನಾಯಕ ಅವರು ಕೇವಲ 128 ಎಸೆತಗಳಲ್ಲಿ 120 ರನ್ ಗಳಿಸಿದರು, ಅವರು ವೆಸ್ಟ್ ಇಂಡೀಸ್ ಬೌಲರ್‌ಗಳ ದಾಳಿಯನ್ನು ತೆಗೆದುಕೊಂಡರು, ಮನರಂಜನೆಯ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದರು. […]

Advertisement

Wordpress Social Share Plugin powered by Ultimatelysocial