‘ಪ್ರಣಯಂ’ ಸೆಟ್ ನಲ್ಲಿ ರಾಜವರ್ಧನ್ ಮತ್ತು ನೈನಾ ಗಂಗೂಲಿ ಹೊಸ ವರ್ಷಾಚರಣೆ!

'ಪ್ರಣಯಂ' ಸೆಟ್ ನಲ್ಲಿ ರಾಜವರ್ಧನ್ ಮತ್ತು ನೈನಾ ಗಂಗೂಲಿ ಹೊಸ ವರ್ಷಾಚರಣೆ!

ದತ್ತಾತ್ರೇಯ ನಿರ್ದೇಶನದ ಮುಂದಿನ ಪ್ರಣಯಂ ಸಿನಿಮಾದಲ್ಲಿ ರಾಜವರ್ಧನ್ ನಟಿಸಿದ್ದಾರೆ. ರಾಜವರ್ಧನ್ ಜೊತೆಯಾಗಿ ನೈನಾ ಗಂಗೂಲಿ ನಾಯಕಿಯಾಗಿ ನಟಿಸಿದ್ದಾರೆ.

ಬೆಂಗಾಲಿ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಕೆಲಸ ಮಾಡಿರುವ ನೈನಾ ಗಂಗೂಲಿ ಪ್ರಣಯಂ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸಂಗೀತ ನಿರ್ದೇಶಕ ಮನೋಮೂರ್ತಿ ರೋಮ್ಯಾಂಟಿಕ್ ಹಾಡಿಗೆ ಮದನ್ ಹರಿಣಿ ನೃತ್ಯ ಸಂಯೋಜನೆಯಿದೆ. ನನ್ನ ಹಿಂದಿನ ಸಿನಿಮಾ ಬಿಚ್ಚುಗತ್ತಿ ಐತಿಹಾಸಿಕ ಸಿನಿಮಾವಾಗಿತ್ತು, ಹಾಗಾಗಿ ಹಾಡುಗಳಲ್ಲಿ ಸಾಕಷ್ಟು ಮಿತಿಯಿತ್ತು, ಪ್ರಣಯಂ ಸಿನಿಮಾ ಹಾಡು ನನಗೆ ತುಂಬಾ ಬದಲಾಗಿ ಕಾಣಿಸಿತು, ಈ ರೋಮ್ಯಾಂಟಿಕ್ ಹಾಡು ನನ್ನಲ್ಲಿ ಮತ್ತಷ್ಟು ಅಭಿರುಚಿ ತುಂಬಿಸಿತ್ತು, ಹಾಡನ್ನು ತುಂಬಾ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ ಎಂದು ರಾಜವರ್ಧನ್ ತಿಳಿಸಿದ್ದಾರೆ.

ಸಿನಿಮಾ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, 15 ದಿನಗಳ ಶೂಟಿಂಗ್ ಗಾಗಿ ಚಿತ್ರತಂಡಮ ಮೂಡಿಗೆರೆಗೆ ತೆರಳಿದೆ. ಮಾನ್ಸಿ ವೆಂಚರ್ಸ್ ಸಹಯೋಗದಲ್ಲಿ ಪಿ2 ಪ್ರೊಡಕ್ಷನ್ಸ್‌ನ ಪರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ನಾಗೇಶ್ ಆಚಾರ್ಯ ಪ್ರಣಯಂಗೆ ಛಾಯಾಗ್ರಾಹಕರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಕನ್ನಡತಿ' ಧಾರಾವಾಹಿಗೆ ರಮೋಲಾ ಗುಡ್ ಬೈ!: ಸಾನಿಯಾ ಪಾತ್ರಕ್ಕೆ ಮತ್ತೊಬ್ಬ ನಟಿ

Mon Dec 27 , 2021
ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ, ಭುವನೇಶ್ವರಿಗೆ ಕೆಟ್ಟದು ಮಾಡುತ್ತ, ರತ್ನಮಾಲಾ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಸದಾ ಯೋಜನೆ ಹಾಕುವ ಪಾತ್ರದಲ್ಲಿ ನಟಿ ರಮೋಲಾ ಅಭಿನಯಿಸಿದ್ದರು. ಕನ್ನಡತಿ ಧಾರಾವಾಹಿಯಲ್ಲಿ ಪಕ್ಕಾ ನೆಗೆಟಿವ್ ಶೇಡ್ ಆದ ಸಾನಿಯಾ ಪಾತ್ರವನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಆದರೆ ಈಗ ಈ ಪಾತ್ರದಿಂದ ನಟಿ ರಮೋಲಾ ಅವರು ಹೊರನಡೆದಿದ್ದಾರೆ. ‘ಕನ್ನಡತಿ’ ಧಾರಾವಾಹಿ ಪ್ರಸಾರ ಪ್ರಾರಂಭಿಸಿ ಕೆಲವು ವರ್ಷ ಕಳೆದಿದೆ. ಈ ಧಾರಾವಾಹಿಯಲ್ಲಿ ಆರಂಭದಿಂದಲೂ ಸಾನಿಯಾ ಪಾತ್ರವನ್ನು ರಮೋಲಾ ನಿರ್ವಹಿಸುತ್ತಿದ್ದರು. ರತ್ನಾಮಾಲಾ […]

Advertisement

Wordpress Social Share Plugin powered by Ultimatelysocial