‘ಕನ್ನಡತಿ’ ಧಾರಾವಾಹಿಗೆ ರಮೋಲಾ ಗುಡ್ ಬೈ!: ಸಾನಿಯಾ ಪಾತ್ರಕ್ಕೆ ಮತ್ತೊಬ್ಬ ನಟಿ

'ಕನ್ನಡತಿ' ಧಾರಾವಾಹಿಗೆ ರಮೋಲಾ ಗುಡ್ ಬೈ!: ಸಾನಿಯಾ ಪಾತ್ರಕ್ಕೆ ಮತ್ತೊಬ್ಬ ನಟಿ

ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ, ಭುವನೇಶ್ವರಿಗೆ ಕೆಟ್ಟದು ಮಾಡುತ್ತ, ರತ್ನಮಾಲಾ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಸದಾ ಯೋಜನೆ ಹಾಕುವ ಪಾತ್ರದಲ್ಲಿ ನಟಿ ರಮೋಲಾ ಅಭಿನಯಿಸಿದ್ದರು. ಕನ್ನಡತಿ ಧಾರಾವಾಹಿಯಲ್ಲಿ ಪಕ್ಕಾ ನೆಗೆಟಿವ್ ಶೇಡ್ ಆದ ಸಾನಿಯಾ ಪಾತ್ರವನ್ನು ವೀಕ್ಷಕರು ಇಷ್ಟಪಟ್ಟಿದ್ದರು.

ಆದರೆ ಈಗ ಈ ಪಾತ್ರದಿಂದ ನಟಿ ರಮೋಲಾ ಅವರು ಹೊರನಡೆದಿದ್ದಾರೆ.

‘ಕನ್ನಡತಿ’ ಧಾರಾವಾಹಿ ಪ್ರಸಾರ ಪ್ರಾರಂಭಿಸಿ ಕೆಲವು ವರ್ಷ ಕಳೆದಿದೆ. ಈ ಧಾರಾವಾಹಿಯಲ್ಲಿ ಆರಂಭದಿಂದಲೂ ಸಾನಿಯಾ ಪಾತ್ರವನ್ನು ರಮೋಲಾ ನಿರ್ವಹಿಸುತ್ತಿದ್ದರು. ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್​ ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು. ಈಗ ರಮೋಲಾ ಧಾರಾವಾಹಿ ತಂಡ ತೊರೆದಿದ್ದಾರೆ.

ರಮೋಲಾ ‘ಕನ್ನಡತಿ’ಯಿಂದ ಹೊರ ನಡೆದಿರುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿದೆ. ಅವರ ನಟನೆ ಅನೇಕರಿಗೆ ಇಷ್ಟವಾಗಿತ್ತು. ಅವರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಿದ್ದರು. ಈಗ ಈ ಸ್ಥಾನವನ್ನು ‘ಹೂ ಮಳೆ’ ಖ್ಯಾತಿಯ ಆರೋಹಿ ನೈನಾ ತುಂಬಿದ್ದಾರೆ. ಬೇರೆ ಭಾಷೆಯಿಂದ ಆಫರ್​ ಬಂದ ಕಾರಣ ಸಾನಿಯಾ ಈ ಧಾರಾವಾಹಿ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಈ ದಿನಕ್ಕಾಗಿ 14 ವರ್ಷಗಳಿಂದ ಕಾಯುತ್ತಿದ್ದೆ. ಭಾವನಾತ್ಮಕವಾಗಿ ಪೋಸ್ಟ್ ಮಾಡಿದ ನಟ ಅಲ್ಲು ಶಿರೀಶ್

Mon Dec 27 , 2021
ಕಳೆದ ಕೆಲವು ದಿನಗಳಿಂದ ಅಲ್ಲು ಸಿರಿಶ್ ಸಿನಿಮಾದಿಂದ ದೂರ ಉಳಿದಿದ್ದರು. ಇದುವರೆಗೂ ಈ ನಾಯಕನಿಂದ ಯಾವುದೇ ಸಿನಿಮಾ ಅಪ್ಡೇಟ್ ಬಂದಿಲ್ಲ. ಸದ್ಯ ಶಿರೀಷ್ ಮುಂಬೈನಲ್ಲಿ ವಾಸವಿದ್ದಾರಂತೆ. ಇದೀಗ ಈ ಯಂಗ್ ಹೀರೋ ನಟಿಸುತ್ತಿರುವ ಲೇಟೆಸ್ಟ್ ಸಿನಿಮಾ ಪ್ರೀತಿ ಅಲ್ಲವೇ? ಅಲ್ಲು ಸಿರಿಶ್ ಎದುರು ಅನು ಇಮ್ಯಾನುಯೆಲ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು.. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ಅಲ್ಲು ಸಿರಿಶ್ ತಮ್ಮ ಟ್ವಿಟರ್ […]

Advertisement

Wordpress Social Share Plugin powered by Ultimatelysocial