ನಿವೃತ್ತಿಗಾಗಿ ಈಗಲೇ ತಯಾರಿ ಮಾಡುವುದು ಯಾಕೆ ಮುಖ್ಯ?

ಭಾರತದಲ್ಲಿ ನಿವೃತ್ತಿ ಯೋಜನೆ ಅತೀ ಮುಖ್ಯವಾಗಿದೆ. ನಮ್ಮ ನಿವೃತ್ತಿ ಸಂದರ್ಭದಲ್ಲಿ ನಾವು ಹಣಕಾಸು ಸುರಕ್ಷತೆಯನ್ನು ಹೊಂದುವುದು ಮತ್ತು ಆರಾಮದಾಯಕವಾಗಿ ಜೀವನವನ್ನು ಕಳೆಯಬೇಕಾದರೆ ನಾವು ನಿವೃತ್ತಿ ಯೋಜನೆಯನ್ನು ಮಾಡಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. ನಿವೃತ್ತಿ ಸಂದರ್ಭದಲ್ಲಿ ನಾವು ಕಷ್ಟ ಪಡುವುದಕ್ಕಿಂತ, ನಿವೃತ್ತಿಗೂ ಮುನ್ನವೇ ಸರಿಯಾದ ಪ್ಲ್ಯಾನ್ ಅನ್ನು ಮಾಡಿಕೊಂಡು, ಹೂಡಿಕೆ ಮಾಡಿಕೊಳ್ಳುವುದು ಉತ್ತಮವಾಗಿದೆ.ಪ್ರಸ್ತುತ ಎಲ್ಲವೂ ಆಧುನಿಕವಾಗಿದೆ. ಆದ್ದರಿಂದಾಗಿ ನಿವೃತ್ತಿಗಾಗಿ ಪ್ಲ್ಯಾನ್ ಮಾಡಬೇಕಾಗುತ್ತದೆ. ನಿವೃತ್ತಿ ಸಂದರ್ಭದಲ್ಲಿ ತಮಗೆ ಅಗತ್ಯವಿರುವ ಹಣ ಇದೆಯೇ ಎಂದು ತಿಳಿಯಲು ಪ್ಲ್ಯಾನ್ ಮಾಡಬೇಕಾಗುತ್ತದೆ. ಜೀವನವೆಚ್ಚವು ಕೂಡಾ ಅತೀ ಹೆಚ್ಚಾಗುತ್ತಿದೆ. ಆದ್ದರಿಂದಾಗಿ ಈಗಲೇ ನಿವೃತ್ತಿ ಪ್ಲ್ಯಾನ್ ಮಾಡಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿವೃತ್ತಿಗಾಗಿ ದೀರ್ಘಾವಧಿಯ ಪ್ಲ್ಯಾನಿಂಗ್ ಅನ್ನು ಮಾಡುವುದು ಅತೀ ಮುಖ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ…ನಿವೃತ್ತಿ ಪಡೆಯಲು ಈಗಲೇ ತಯಾರಿ ಯಾಕೆ ಮುಖ್ಯ?ನಿವೃತ್ತಿ ಪಡೆಯಲು ಈಗಲೇ ನಾವು ಪ್ಲ್ಯಾನಿಂಗ್ ಮಾಡುವುದು ಅತೀ ಮುಖ್ಯವಾಗುತ್ತದೆ. ಇದು ನಿಮ್ಮ ನಿವೃತ್ತಿ ಜೀವನವನ್ನು ಸುಖಮಯವಾಗಿ, ಆನಂದದಾಯಕವಾಗಿ, ಯಾವುದೇ ತೊಂದರೆ ಇಲ್ಲದೆ ನಡೆಸಲು ಅವಕಾಶವನ್ನು ಮಾಡಿಕೊಡುತ್ತದೆ. ನೀವು ಮಾಡಿದ ಹೂಡಿಕೆಯಿಂದ ಆದಾಯವನ್ನು ಗಳಿಸಬಹುದಾಗಿದೆ. ಎಷ್ಟು ಶೀಘ್ರ ನೀಡುವ ಹೂಡಿಕೆ ಮಾಡುತ್ತೀರೋ ಅಷ್ಟು ಅಧಿಕವಾಗಿ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.ನೀವು ಮಾಡಿದ ಹೂಡಿಕೆಯು ದಿನ ಕಳೆದಂತೆ ಅಭಿವೃದ್ಧಿ ಹೊಂದುತ್ತದೆ. ಇದರಿಂದಾಗಿ ಅತೀ ಸಣ್ಣ ವಯಸ್ಸಿನಲ್ಲಿಯೇ ಹೂಡಿಕೆಯನ್ನು ಮಾಡುವುದು ಉತ್ತಮ ಆಯ್ಕೆಯಾಗಿದೆ. ಶೀಘ್ರವಾಗಿ ಹೂಡಿಕೆ ಮಾಡುವುದರಿಂದಾಗಿ ಅಧಿಕ ರಿಟರ್ನ್ ಲಭ್ಯವಾಗಲಿದೆ. ನಿಮ್ಮ ಅಧಿಕ ಹಣವು ಉಳಿತಾಯವಾಗಲಿದೆ ಮತ್ತು ನಿವೃತ್ತಿ ವೇಳೆ ನಿಮಗೆ ಸಹಾಯಕವಾಗಲಿದೆ. ಆರಾಮಧಾಯಕ ನಿವೃತ್ತಿಯನ್ನು ಪಡೆಯಲು, ಶೀಘ್ರವಾಗಿ ಹೂಡಿಕೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ.ತಜ್ಞರು ನೀಡುವ ಕೆಲವು ಸಲಹೆಗಳು1. ನಿಮ್ಮ ಗುರಿಯನ್ನು ನಿರ್ಧಾರ ಮಾಡಿ. ನಿವೃತ್ತಿ ಸಂದರ್ಭದಲ್ಲಿ ನೀವು ಜೀವನವನ್ನು ನಡೆಸಲು ಎಷ್ಟು ಹಣದ ಅಗತ್ಯವಿದೆ ಎಂದು ಈಗಲೇ ಲೆಕ್ಕಹಾಕಿಕೊಳ್ಳಿ.2. ಎಷ್ಟು ಶೀಘ್ರವಾಗಿ ನೀವು ಹೂಡಿಕೆ ಮಾಡುತ್ತೀರೋ ಅಷ್ಟು ನಿಮ್ಮ ಮೊತ್ತವು ಬೆಳವಣಿಗೆಯಾಗಲಿದೆ. ಅದಕ್ಕಾಗಿ ಪ್ರತಿ ತಿಂಗಳು ನಿಮ್ಮ ಆದಾಯದಿಂದ ಹೂಡಿಕೆ ಮಾಡಿ.3. ಒಂದೇ ಕಡೆ ಸಂಪೂರ್ಣ ಹೂಡಿಕೆ ಮಾಡಬೇಡಿ. ನೀವು ಹೂಡಿಕೆ ಮಾಡಲು ಬಯಸುವ ಮೊತ್ತವನ್ನು ಬೇರೆ ಬೇರೆ ಭಾಗಗಳಲ್ಲಿ ಹೂಡಿಕೆ ಮಾಡಿ.4. ನಿವೃತ್ತಿ ಮೊತ್ತವು ನಿಮ್ಮ ಗೋಲ್ಡನ್ ವರ್ಷದ ಹೂಡಿಕೆಯಾಗಿದೆ. ಆ ಹೂಡಿಕೆಯಿಂದ ನಿಮ್ಮ ಮೊತ್ತ ವಿತ್‌ಡ್ರಾ ಮಾಡಬೇಡಿ. ಅದನ್ನು ಉಳಿತಾಯ ಮಾಡಿಕೊಳ್ಳಿ.5. ನಿಮಗೆ ಹೂಡಿಕೆಯ ಗೊಂದಲವಿದ್ದರೆ ತಜ್ಞರ ಸಲಹೆಯನ್ನು ಪಡೆಯಿರಿ. ಆದರೆ ನಿವೃತ್ತಿ ಯೋಜನೆಯು ಒಂದು ಸಮಯಕ್ಕೆ ಮಾಡುವ ಯೋಜನೆಯಲ್ಲ ಅದು ಜೀವನ ಪೂರ್ತಿ ನಡೆಸುವ ಪ್ಲ್ಯಾನ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮದುವೆ ಸಮಾರಂಭದ ಆಹಾರ ಸೇವಿಸಿದ 43 ಜನರು ಅಸ್ವಸ್ಥ

Sun Feb 26 , 2023
  ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆಹಾರ ಸೇವಿಸಿದ 43 ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಖಾರ್ಗೋನ್: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆಹಾರ ಸೇವಿಸಿದ 43 ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಶನಿವಾರ ರಾತ್ರಿ ಖಾರ್ಗೋನ್ನ ನ್ಯೂ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ಅಲ್ಲಿ ಹಣ್ಣಿನ ಕಸ್ಟರ್ಡ್ಸ್ ಸೇವಿಸಿದ ಬಳಿಕ 43 ಮಂದಿಗೆ ವಿಷಾಹಾರ […]

Advertisement

Wordpress Social Share Plugin powered by Ultimatelysocial