ಲಂಡನ್‌ಗೆ ಹೋಗಿಬಂದ ನಟಿ ರಾಗಿಣಿ ದ್ವಿವೇದಿ.

 

ಸ್ಯಾಂಡಲ್‌ವುಡ್‌ನಲ್ಲಿ ನಟಿ ರಾಗಿಣಿ ದ್ವಿವೇದಿ ಹಲವು ವರ್ಷಗಳಿಂದ ಇದ್ದಾರೆ. ಇಲ್ಲಿ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಕನ್ನಡ ಸಿನಿಮಾಗಳ ಜೊತೆಗೆ ಪರಭಾಷೆಯಲ್ಲೂ ಸದ್ದು ಮಾಡಲು ಮುಂದಾಗಿದ್ದಾರೆ. ಅಂದಹಾಗೆ, ಬಾಲಿವುಡ್ ನಟ ಶಾಹಿದ್ ಕಪೂರ್ ಜೊತೆಗೆ ‘ರಾ ರಾಜ್‌ಕುಮಾರ್’ ಸಿನಿಮಾದಲ್ಲಿ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ್ದ ಅವರು, ಇದೀಗ ಪೂರ್ಣ ಪ್ರಮಾಣದಲ್ಲಿ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ.

ಹೌದು, ಬಾಲಿವುಡ್‌ನಲ್ಲಿ ರಾಗಿಣಿ ಒಂದು ಹಾರರ್ ಥ್ರಿಲ್ಲರ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಮೊದಲ ಹಂತದ ಶೂಟಿಂಗ್ ಕೂಡ ಮುಕ್ತಾಯವಾಗಿದೆ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ‘2022ರಲ್ಲಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಪ್ರಯಾಣ ಆಗಿದೆ. ಕಳೆದ ವರ್ಷ ಪೂರ್ತಿ ನಾನು ಹೆಚ್ಚಾಗಿ ಚಿತ್ರೀಕರಣದಲ್ಲಿ ಬ್ಯುಸಿ ಇದ್ದೆ. ಅದರ ಪ್ರತಿಫಲ ನನಗೆ ಈ ವರ್ಷ ಸಿಗಲಿದೆ. ಸದ್ಯಕ್ಕೆ ನಾನು ಒಂದು ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅದರ ಮೊದಲ ಹಂತದ ಶೂಟಿಂಗ್ ಮುಗಿದಿದೆ..’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ರಾಗಿಣಿ. ಹೌದು, ಬಾಲಿವುಡ್‌ನಲ್ಲಿ ರಾಗಿಣಿ ಒಂದು ಹಾರರ್ ಥ್ರಿಲ್ಲರ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಮೊದಲ ಹಂತದ ಶೂಟಿಂಗ್ ಕೂಡ ಮುಕ್ತಾಯವಾಗಿದೆ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ‘2022ರಲ್ಲಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಪ್ರಯಾಣ ಆಗಿದೆ. ಕಳೆದ ವರ್ಷ ಪೂರ್ತಿ ನಾನು ಹೆಚ್ಚಾಗಿ ಚಿತ್ರೀಕರಣದಲ್ಲಿ ಬ್ಯುಸಿ ಇದ್ದೆ. ಅದರ ಪ್ರತಿಫಲ ನನಗೆ ಈ ವರ್ಷ ಸಿಗಲಿದೆ. ಸದ್ಯಕ್ಕೆ ನಾನು ಒಂದು ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅದರ ಮೊದಲ ಹಂತದ ಶೂಟಿಂಗ್ ಮುಗಿದಿದೆ..’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ರಾಗಿಣಿ. ‘ಬಾಲಿವುಡ್‌ನಲ್ಲಿ ನಾನು ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾವೇ ಹಾರರ್ ಮಾದರಿಯಾಗಿರುವುದು ನನಗೆ ಖುಷಿ ನೀಡಿದೆ. ಇದರಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿದೆ. ಈ ಹಿಂದಿ ಸಿನಿಮಾ ಜೊತೆಗೆ ಕಾಲಿವುಡ್‌ನಲ್ಲಿ 3 ಮತ್ತು ಮಲಯಾಳಂನಲ್ಲಿ ಒಂದು ಸಿನಿಮಾ ಮಾಡಿದ್ದೇನೆ. ತೆಲುಗಿನ ಒಂದು ಚಿತ್ರದಲ್ಲಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದೇನೆ. ಹಾಗೆಯೇ ಕನ್ನಡದಲ್ಲಿ 2 ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಓಟಿಟಿಯಿಂದ ನಮ್ಮಂತಹ ಕಲಾವಿದರಿಗೆ ದೊಡ್ಡ ವೇದಿಕೆ ಸಿಕ್ಕಿದೆ..’ ಎಂದರು ನಟಿ ರಾಗಿಣಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಬರ್ಖಾ ಬಿಶ್ಟ್‌.

Wed Jan 11 , 2023
ನಟ ರವಿಚಂದ್ರನ್‌ ಇತ್ತೀಚೆಗಷ್ಟೇ ಒಪ್ಪಿಕೊಂಡಿರುವ ಸಿನಿಮಾವನ್ನು ತಮಿಳು ಮೂಲದ ಯುವಕ ಅನೀಸ್‌ ಎಂಬವರು ನಿರ್ದೇಶನ ಮಾಡುತ್ತಿದ್ದು, ಇದಕ್ಕೆ ‘ಗೌರಿ’ ಎಂದು ಹೆಸರಿಡಲಾಗಿದೆ. ಇದರಲ್ಲಿ ಪಶ್ಚಿಮ ಬಂಗಾಳ ಮೂಲದ ಬಾಲಿವುಡ್‌ ನಟಿ ಬರ್ಖಾ ಬಿಶ್ಟ್ ಸೇನ್‌ ಗುಪ್ತಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಬಂಗಾಳಿ ಸಿನಿಮಾಗಳಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸಿರುವ ಅವರ ಹಿಂದಿ ವೆಬ್‌ ಸೀರಿಸ್‌ ‘ಮುಖ್ಬೀರ್‌’ ಸೂಪರ್‌ ಹಿಟ್‌ ಆಗಿತ್ತು. ಈಗ ರವಿಚಂದ್ರನ್‌ ಸಿನಿಮಾ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial