ಅದಾನಿ ಆನಂದ ಒಂದೇ ದಿನಕ್ಕೆ ಸೀಮಿತ ; ಮತ್ತೆ ನಂಬರ್ 1 ಪಟ್ಟಕ್ಕೇರಿದ ಮುಖೇಶ್ ಅಂಬಾನಿ.!

ನವದೆಹಲಿ : ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಪಟ್ಟಿಯಲ್ಲಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗೌತಮ್ ಅದಾನಿ ಕೇವಲ ಒಂದು ದಿನ ಮಾತ್ರ ಆ ಸ್ಥಾನದಲ್ಲಿ ಉಳಿಯಲು ಸಾಧ್ಯವಾಯಿತು.24 ಗಂಟೆಗಳ ಬಳಿಕ ಮತ್ತೆ ಮುಖೇಶ್ ಅಂಬಾನಿ ತಮ್ಮ ಮೊದಲ ಸ್ಥಾನ ನ್ನು ಅಲಂಕರಿಸಿದರು. ಈ ಮೂಲಕ ಅದಾನಿ ಏಷ್ಯಾದ 2ನೇ, ಮತ್ತು ವಿಶ್ವದ 11ನೇ ಕ್ರಮಾಂಕದಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇಬ್ಬರ ನಡುವಿನ ಸಂಪತ್ತಿನ ವ್ಯತ್ಯಾಸದಿಂದಾಗಿ ಮುಖೇಶ್ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದಾರೆ.ಬುಧವಾರ ಬೆಳಿಗ್ಗೆ, ಫೆಬ್ರವರಿ 9, 2022 ರಂದು, ಬ್ಲೂಮ್‌ಬರ್ಗ್ ಸೂಚ್ಯಂಕದಲ್ಲಿ ಮುಖೇಶ್ ಅಂಬಾನಿಯವರ ಸಂಪತ್ತು 89.2 ಬಿಲಿಯನ್ ಡಾಲರ್ ಗಳಷ್ಟಾಗಿದೆ. ಹಿಂದಿನ ದಿನದ ಮೌಲ್ಯ 87.9 ಬಿಲಿಯನ್ ಡಾಲರ್ ಆಗಿತ್ತು. ಗೌತಮ್ ಅದಾನಿ 86.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಈ ಮೊತ್ತವು ಹಿಂದಿನ ಪಟ್ಟಿಯಲ್ಲಿ 88.5 ಬಿಲಿಯನ್ ಡಾಲರ್ ಆಗಿತ್ತು. ಒಂದೇ ದಿನದಲ್ಲಿ, ಮುಖೇಶ್ ಅವರ ಸಂಪತ್ತು 1.33 ಬಿಲಿಯನ್ ಡಾಲರ್ ಗೆ ತಲುಪಿತು. ಮತ್ತು 2.16 ಬಿಲಿಯನ್ ಡಾಲರ್ ಅವರ ಖಾತೆಗೆ ಜಮೆಯಾಗಿದೆ. ಇದರೊಂದಿಗೆ ಏಷ್ಯಾದಲ್ಲಿ ನಂ.1 ಸ್ಥಾನಕ್ಕೆ ಏರಿದ ಮುಖೇಶ್ ಮತ್ತೊಮ್ಮೆ ವಿಶ್ವ ರ್ಯಾಂಕಿಂಗ್ ನಲ್ಲಿ ಹತ್ತನೇ ಸ್ಥಾನ ಪಡೆದಿದ್ದಾರೆ.ಬ್ಲೂಮ್‌ಬರ್ಗ್ ಪಟ್ಟಿಯಲ್ಲಿ, ಅಂಬಾನಿ ಮತ್ತು ಅದಾನಿ ಕ್ರಮವಾಗಿ 10 ಮತ್ತು 11 ನೇ ಸ್ಥಾನದಲ್ಲಿದ್ದರೆ, ಮೊದಯ 100 ರ ಪಟ್ಟಿಯಲ್ಲಿ ಅಜೀಂ ಪ್ರೇಮ್‌ಜಿ ( 33.8 ಬಿಲಿಯನ್ ಡಾಲರ್ ) 38 ನೇ ಸ್ಥಾನ,ಶಿವನಾಡೋರ್ (29 ಬಿಲಿಯನ್ ಡಾಲರ್) 48 ನೇ ಸ್ಥಾನ,ರಾಧಾಕಿಶನ್ ದಮಾನಿ (21.2 ಬಿಲಿಯನ್ ಡಾಲರ್) 79 ನೇ ಸ್ಥಾನ,ಮತ್ತು 82 ನೇ ಸ್ಥಾನದಲ್ಲಿ ಲಕ್ಷ್ಮಿ ಮಿತ್ತಲ್‌ ( 21.2 ಬಿಲಿಯನ್ ಡಾಲರ್) ಇದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ಕ್ಷಮೆ ಯಾಚಿಸಿದ್ದಾರೆ.

Wed Feb 9 , 2022
ಹಿಜಾಬ್ ವಿವಾವದದ ಬಗ್ಗೆ ಪ್ರಿಯಾಂಕ ಗಾಂಧಿ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸುತ್ತಾ ಮಹಿಳೆಯರ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ಕ್ಷಮೆ ಯಾಚಿಸಿದ್ದಾರೆ.ವಸ್ತ್ರದ ವಿಚಾರದಲ್ಲಿ ಮಹಿಳೆಯರಿಗೆ ಸಂಪೂರ್ಣ ಹಕ್ಕಿದೆ. ಬಿಕಿನಿಯಿರಬಹುದು, ಜೀನ್ಸ್ ಇರಬಹುದು ಯಾವುದೇ ಬಟ್ಟೆ ತೊಡುವುದನ್ನು ನಿರ್ಧರಿಸುವ ಹಕ್ಕು ಮಹಿಳೆಯರಿಗಿದೆ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದರು.ಈ ಬಗ್ಗೆ ಉತ್ತರ ನೀಡುವ ಭರದಲ್ಲಿ, ಮಹಿಳೆಯರು ಪ್ರಿಯಾಂಕ ಹೇಳಿದಂತ ಬಟ್ಟೆ ಹಾಕಿಕೊಂಡರೆ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಅಂತಾ […]

Related posts

Advertisement

Wordpress Social Share Plugin powered by Ultimatelysocial