ಟಮ್ ಟಮ್ ಹಾಡಿಗೆ ಸೌತ್​ ನಟನ ಜೊತೆ ಅದಿತಿ ಡ್ಯಾನ್ಸ್!

ಸೌತ್​ನಲ್ಲಿ ಸದ್ಯ ಸೌಂಡ್ ಮಾಡ್ತಿರೋ ಜೋಡಿ ಅದಿತಿ ರಾವ್ ಹೈದರಿ  ಹಾಗೂ ಸಿದ್ಧಾರ್ಥ್ ಅವರದ್ದು. ಬಾಲಿವುಡ್ ನಟಿ ಹಾಗೂ ಕಾಲಿವುಡ್  ನಟ ಡೇಟಿಂಗ್  ಮಾಡ್ತಿದ್ದಾರೆ ಎನ್ನುವ ಸುದ್ದಿ ಬಹಳಷ್ಟು ದಿನಗಳಿಂದ ಕೇಳಿ ಬರುತ್ತಿದೆ.ಇದಕ್ಕೆ ಪೂರಕ ಎನ್ನುವಂತಿರುತ್ತವೆ ಅವರಿಬ್ಬರ ಸೋಷಿಯಲ್ ಮೀಡಿಯಾ  ಪೋಸ್ಟ್​ಗಳು. ಇದೀಗ ಇವರಿಬ್ಬರ ವಿಡಿಯೋ ವೈರಲ್ (Viral Video) ಆಗುತ್ತಿದೆ. ಇವರು ತಮಿಳು ಹಾಡು ಟಮ್ಟಮ್​ಗೆ ಡ್ಯಾನ್ಸ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇನ್​ಸ್ಟಾಗ್ರಾಮ್​ನಲ್ಲಿವೈರಲ್ ಆಗುತ್ತಿರುವ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.

ಅದಿತಿ ರಾವ್ ಅವರು ಸಿದ್ಧಾರ್ಥ್ ಜೊತೆ ಖುಷಿ ಖುಷಿಯಾಗಿ ಟಮ್ ಟಮ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಇಬ್ಬರೂ ಜಾಯಿಂಟ್ ಪೋಸ್ಟ್ ಹಾಕಿದ್ದಾರೆ. ವಿಶಾಲ್ ಅಭಿನಯದ ತಮಿಳು ಸಿನಿಮಾ ಎನಿಮಿ(2021) ಸೂಪರ್ ಹಿಟ್ ಹಾಡು ಇದು. ಇದರಲ್ಲಿ ಸಿದ್ಧಾರ್ಥ್ ಬ್ಲ್ಯಾಕ್ ಶರ್ಟ್ ಧರಿಸಿದ್ದರು. ಅದಿತಿ ಫ್ಲೋರಲ್ ಡ್ರೆಸ್ ಧರಿಸಿದ್ದರು.
ಡ್ಯಾನ್ಸ್ ಮಧ್ಯೆ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಸ್ಮೈಲ್ ಮಾಡುವುದನ್ನು ಕಾಣಬಹುದು. ವಿಡಿಯೋ ಕೊನೆಗೊಳ್ಳುವಾಗ ಅದಿತಿ ಸಿದ್ಧಾರ್ಥ್​ನನ್ನು ತಳ್ಳುವುದನ್ನು ಕಾಣಬಹುದು. ನಟಿ ಮಂಕಿ ಎಮೋಜಿ ಹಾಕಿದ್ದಾರೆ. ಡ್ಯಾನ್ಸ್ ಮಂಕೀಸ್, ದಿ ರೀಲ್ ಡೀಲ್ ಎಂದು ಬರೆದಿದ್ದಾರೆ. ಹನ್ಸಿಕಾ ಮೊಟ್ವಾನಿ ಕಮೆಂಟ್ ಮಾಡಿ ಕ್ಯೂಟ್ ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ತುಲಾ ರಾಶಿ ಭವಿಷ್ಯ.

Tue Feb 28 , 2023
  ಹೊರಾಂಗಣ ಚಟುವಟಿಕೆಗಳು ಇಂದು ದಣವು ಮತ್ತು ಒತ್ತಡ ತರುತ್ತವೆ. ಬಾಕಿಯಿರುವ ವಿಷಯಗಳು ರಹಸ್ಯಮಯವಾಗುತ್ತವೆ ಮತ್ತು ವೆಚ್ಚಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ನೀವು ಹೆಚ್ಚೇನೂ ಮಾಡದೇ ಇತರರ ಗಮನ ಸೆಳೆಯಲು ಇದೊಂದು ಪರಿಪೂರ್ಣ ದಿನ. ಅಮೂಲ್ಯ ಉಡುಗೊರೆಗಳು / ಪಾರಿತೋಷಕಗಳೂ ಸಹ ಇಂದು ಹರ್ಷಚಿತ್ತದ ಕ್ಷಣಗಳನ್ನು ತರದಿರಬಹುದು, ಏಕೆಂದರೆ ಇದು ನಿಮ್ಮ ಪ್ರೇಮಿಯಿಂದ ತಿರಸ್ಕರಿಸಲ್ಪಡಬಹುದು. ನೀವು ಇಂದು ನಿಮ್ಮ ಸಿಹಿಯಾದ ಪ್ರೀತಿಯ ಜೀವನದಲ್ಲಿನ ಉತ್ಕಟತೆಯನ್ನು ಆನಂದಿಸುತ್ತೀರಿ. ಕುಟುಂಬಕ್ಕೆ ಸಾಕಷ್ಟು ಸಮಯವನ್ನು […]

Advertisement

Wordpress Social Share Plugin powered by Ultimatelysocial