ಮಂಡ್ಯಕ್ಕೆ ಮೋದಿ ಭೇಟಿ ಬೆನ್ನಲ್ಲೇ ಅಖಾಡಕ್ಕಿಳಿದ ದೊಡ್ಡಗೌಡ್ರು:

ಬೆಂಗಳೂರು,ಮಾರ್ಚ್14:‌ ರಾಜ್ಯ ರಾಜಕಾರಣದಲ್ಲಿ ಚುನಾವಣಾ ರಣಕಣಕ್ಕೆ ವೇದಿಕೆ ಸಜ್ಜಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಹೈಕಮಾಂಡ್‌ ನಾಯಕರು ಪದೇ ಪದೇ ರಾಜ್ಯಕ್ಕೆ ಕರೆಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ರೆಡ್ಡಿಯಾಗಿದ್ದಾರೆ.

ಹಳೇ ಮೈಸೂರು ಭಾಗದ ಮೇಲೆ ಕಣ್ಣೀಟ್ಟಿರುವ ರಾಜ್ಯ ಬಿಜೆಪಿ ಮಂಡ್ಯ ಜಿಲ್ಲೆಯನ್ನ ತನ್ನ ವಶಕ್ಕೆ ಪಡೆಯಲು ಭರ್ಜರಿ ತಯಾರಿ ನಡೆಸಿದೆ.

ಈಗಾಗಲೇ ಜೆಡಿಎಸ್‌ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕ್ಷೇತ್ರ ಬಿಜೆಪಿಯ ಪಾಲಗಿದ್ದು, ಇದೀಗ ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಬೆಂಬಲ ಸೂಚಿಸಿದ್ದು, ಮೋದಿ ಮಂಡ್ಯಕ್ಕೆ ಬಂದು ಹೋದ ಬೆನ್ನೆಲ್ಲೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಎಚ್.ಡಿ ದೇವೇಗೌಡ್ರು ಮಂಡ್ಯ ಅಖಾಡಕ್ಕಿಳಿದ್ದಿದ್ದಾರೆ.

ಹೌದು, ಹಳೆ ಮೈಸೂರು ಭಾಗ ಈ ಹಿಂದೆ ಜೆಡಿಎಸ್‌ ಭದ್ರಕೋಟೆಯಾಗಿತ್ತು. ಆದರೆ ದಿನದಿಂದ ದಿನಕ್ಕೆ ಹಲವು ಕ್ಷೇತ್ರಗಳು ದಳಪತಿಗಳ ಕೈತಪ್ಪುತ್ತಿದ್ದು, ಇರುವಂತಹ ಕ್ಷೇತ್ರಗಳನ್ನ ಉಳಿಸಿಕೊಳ್ಳುವುದು ಹಾಗೂ ನಾವು ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಮತ್ತೆ ಮರಳಿ ಹಿಡಿತ ಸಾಧಿಸಲು ದೇವೇಗೌಡ್ರು ಮುಂದಾಗಿದ್ದಾರೆ.

ಸುಮರು ಎರಡು ಗಂಟೆಗಳ ಕಾಲ ಮಂಡ್ಯ ನಾಯಕರ ಜೊತೆಗೆ ಚರ್ಚೆ ನಡೆಸಿರುವ ದೇವೇಗೌಡು ತಮ್ಮ ಶಾಸಕರಿಗೆ ಸಂಸದೆ ಸುಮಲತಾ ಅವರ ಬಗ್ಗೆ ಯಾರು ಮಾತಾಡಬೇಡಿ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಖಡಕ್ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಎಲ್ಲಾ 7 ಕ್ಷೇತ್ರಗಳಲ್ಲೂ ಕಳೆದ ಬಾರಿ ಗೆಲುವು ಪಡೆದಂತೆ ಈ ಬಾರಿಯೂ ಗೆಲುವು ಸಾಧಿಸುವತ್ತ ಶ್ರಮವಹಿಸಿ ಎಂದು ದೇವೇಗೌಡರು ಎಲ್ಲರಿಗೂ ಖಡಕ್ ಸೂಚನೆ ನೀಡಿದ್ದಾರೆ.

ಇನ್ನೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಪ್ರಧಾನಿ ನರೇಂಜದ್ರ ಮೋದಿ ಬಂದತಂಹ ಸಂದರ್ಭದಲ್ಲಿ ಜೆಡಿಎಸ್‌ ಬಗ್ಗೆ ಒಂದು ಮಾತನಾಡಿಲ್ಲ. ಕೇವಲ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ನಡುವೆ ಉತ್ತಮ ಸಂಬಂಧವನ್ನ ಹೊಂದಿದ್ದಾರೆ. ಜೊತೆಗೆ ರಾಜಕೀಯ ಎದುರಾಳಿಯಾಗಿದ್ದ ಸಂಸದೆ ಸುಮಲತಾ ಇದೀಗ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು, ಯಾರು ಯಾರಿಗೆ ಬೆಂಬಲ ಸೂಚಿಸಿಲಿ, ಸುಮಲತಾ ಯಾವ ಪಕ್ಷಕ್ಕೆ ಆದರೂ ಸೇರಲಿ, ಅವರು ಏನೇ ಆರೋಪ ಮಾಡಲಿ. ಯಾರೂ ಸಹ ಸುಮಲತಾ ವಿರುದ್ಧ ಮಾತನಾಡಬೇಡಿ, ಲೋಕಸಭಾ ಚುನಾವಣೆಯಲ್ಲಿ ಆದ ತಪ್ಪು ಈ ಬಾರಿಯ ಚುನಾವಣೆಯಲ್ಲಿ ಆಗಬಾರದು ಎಂದು ಸೂಚಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಸಾರಿಗೆ ಇಲಾಖೆಯಿಂದ ವಿದ್ಯಾನಿಧಿ ಯೋಜನೆ..!

Tue Mar 14 , 2023
ಹುಬ್ಬಳ್ಳಿ: ಅವರೆಲ್ಲರೂ ನೂರು ಇನ್ನೂರು ರೂಪಾಯಿಗಳಿಗೆ ಹಗಲಿರುಳು ದುಡಿಯುವ ಶ್ರಮ ಜೀವಿಗಳು. ಜೀವನ ನಡೆಸುವುದೇ ಕಷ್ಟವಾಗಿರುತ್ತದೇ. ಇಂತಹದರಲ್ಲಿ ಮಕ್ಕಳ ಶಿಕ್ಷಣದೊಂದು ಹೊರೆಯಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮಹತ್ವದ ನಿರ್ಧಾರದ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.. ಸಾರಿಗೆ ಇಲಾಖೆಯು ಟ್ಯಾಕ್ಸಿ, ಆಟೋ ಚಾಲಕರ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲು ಸರ್ಕಾರ ಮುಂದಾಗಿದೆ. ಹೌದು.. ಆಟೋ ಚಾಲಕರು, ಟ್ಯಾಕ್ಸಿ ಚಾಲಕರ […]

Advertisement

Wordpress Social Share Plugin powered by Ultimatelysocial