ಕಾರ್ಕಳದಲ್ಲಿ ನೆಲೆ ನಿಂತ ಏಕ ಶಿಲಾ ಮೂರ್ತಿ ವಿರಕ್ತ ಗೊಮ್ಮಟೇಶ್ವರ.!

ಡುಪಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಗೊಮ್ಮಟನನ್ನು ವೀಕ್ಷಿಸಲು ನೀವು ಮಂಗಳೂರಿನಿಂದ 32 ಮೈಲು, ಮೂಡುಬಿದ್ರೆಯಿಂದ 10 ಮೈಲು, ವೇಣೂರಿನಿಂದ 22 ಮೈಲು ದೂರ ಕ್ರಮಿಸಬೇಕು. ಇದು ಕರಿಕಲ್ಲಿನ ನೆಲವಾದ್ದರಿಂದ ಕಾರ್ಕಳ ಎಂಬ ಹೆಸರು ಬಂದಿದೆ.

ಜಗತ್ತಿನಲ್ಲೇ ಎರಡನೇ ಅತೀ ಎತ್ತರದ ಬಾಹುಬಲಿಯ ಏಕ ಶಿಲಾ ಮೂರ್ತಿಯ ವಿಗ್ರಹ ಇದಾಗಿದೆ.

ಈ ವಿಗ್ರಹದ ಎತ್ತರ 42 ಅಡಿ. ಕಾರ್ಕಳವನ್ನಾಳುತ್ತಿದ್ದ ವೀರಪಾಂಡ್ಯ ಭೈರರಸನು 1432 ರಲ್ಲಿ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದ ಎಂಬ ಐತಿಹಾಸಿಕ ಉಲ್ಲೇಖವಿದೆ. ಈ ಮೂರ್ತಿ ನಿರ್ಮಾಣಗೊಂಡು ಇಂದಿಗೆ 590 ವರ್ಷಗಳಾಗಿವೆ.

ಇಲ್ಲಿನ ಗೊಮ್ಮಟ ತಪಸ್ಸಿಗೆ ನಿಂತಂತೆ ಭಾವಪೂರ್ಣವಾಗಿದೆ. ಸತ್ಯ, ಸಂಯಮ, ಅಹಿಂಸೆ, ವೈರಾಗ್ಯ, ತ್ಯಾಗದ ಆದರ್ಶವಾಗಿ ಗೋಮಟೇಶ್ವರ ಮೂರ್ತಿ ಸರ್ವಕಾಲಿಕ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ಜೈನ ಸಂಪ್ರದಾಯದಂತೆ ಪ್ರತೀ 12 ವರ್ಷಕ್ಕೊಮ್ಮೆ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವೂ ನಡೆದು ಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಲ್ಲುಜ್ಜುವ ಮೊದಲು ನೀರನ್ನು ಕುಡಿಯಿರಿ.

Tue Feb 14 , 2023
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಲ್ಲುಜ್ಜುವ ಮೊದಲು ನೀರನ್ನು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದು ನಿಮ್ಮ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಲ್ಲುಜ್ಜುವ ಮೊದಲು ನೀರನ್ನು ಕುಡಿಯಲು ಆರೋಗ್ಯತಜ್ಞರು ಸಲಹೆ ನೀಡುತ್ತಾರೆ. ಇದು ನಿಮ್ಮ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ, ಗ್ಯಾಸ್, ಆಯಸಿಡಿಟಿ, ಅಜೀರ್ಣ ಮತ್ತು ಮಲಬದ್ಧತೆಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ರಕ್ಷಣೆ […]

Advertisement

Wordpress Social Share Plugin powered by Ultimatelysocial