‘ಡಿಬಾಸ್’ ಅನ್ನೋ ಟೈಟಲ್ ಬಂದಿದ್ದು ಯಾವಾಗ?

ಯಾವುದೇ ಚಿತ್ರರಂಗದ ಸೂಪರ್‌ಸ್ಟಾರ್‌ಗಳಿರಲಿ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಒಂದಲ್ಲ ಒಂದು ಹೆಸರನ್ನು ಇಟ್ಟೇ ಇಡುತ್ತಾರೆ. ಕೆಲವೊಮ್ಮೆ ಒಂದರಿಂದ ಎರಡಾಡುತ್ತೆ. ಎರಡರಿಂದ ಹತ್ತು ಟೈಟಲ್ ಬರುತ್ತೆ.ಕನ್ನಡ ಚಿತ್ರರಂಗದಲ್ಲಿರೋ ಸೂಪರ್‌ಸ್ಟಾರ್‌ಗಳಿಗೂ ಹತ್ತು ಹಲವು ಟೈಟಲ್‌ಗಳಿವೆ.ಅವುಗಳನ್ನು ಅಭಿಮಾನಿಗಳೇ ಪ್ರೀತಿಯಿಂದ ಕೊಟ್ಟಿದ್ದಾರೆ. ಇದರಲ್ಲಿ ದರ್ಶನ್‌ ಹೆಸರು ಕೂಡ ಇದೆ. ಇವರ ಅಭಿಮಾನಿಗಳು, ಆಪ್ತರು ಪ್ರೀತಿಯಿಂದ ಹಲವು ಬಿರುದುಗಳನ್ನು ಕೊಟ್ಟಿದ್ದಾರೆ.ದರ್ಶನ್ ಅಭಿಮಾನಿಗಳು ನೀಡಿದ ಎರಡು ಬಿರುದುಗಳು ಇಂದಿಗೂ ಫೇಮಸ್. ಒಂದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನೊಂದು ಡಿ ಬಾಸ್. ಈ ಎರಡೂ ಬಿರುದುಗಳು ಯಾವಾಗ ಬಂತು? ದರ್ಶನ್ ಮೊದಲ ಹೆಸರು ಹೇಮಂತ್ ಕುಮಾರ್ ಹೌದಾ? ಈ ಬಗ್ಗೆ ದರ್ಶನ್ ಖಡಕ್ ಸಿನಿಮಾ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.ಚಾಲೆಂಜಿಂಗ್‌ ಸ್ಟಾರ್ ಅನ್ನೋ ಬಿರುದು ಬಂದಿದ್ಯಾವಾಗ?ದರ್ಶನ್ ಅಭಿಮಾನಿಗಳು ಪ್ರೀತಿಯಿಂದ ಚಾಲೆಂಜಿಂಗ್ ಸ್ಟಾರ್ ಅಂತ ಕರೀತಾರೆ. ಹಲವು ವರ್ಷಗಳಿಂದ ಅಭಿಮಾನಿಗಳ ಬಾಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇಳಿಸುತ್ತಿದೆ. ಹೀಗಾಗಿ ಈ ಟೈಟಲ್‌ ಯಾವಾಗ ಬಂತು? ಕೊಟ್ಟಿದ್ದು ಯಾರು? ಅನ್ನೋದು ಪ್ರಶ್ನೆ ಇದ್ದೇ ಇತ್ತು. ಅದಕ್ಕೀಗ ಸ್ವತ: ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. “ಲಾಲಿ ಹಾಡು ಆದ್ಮೇಲೆ ಅನಿಸುತ್ತೆ. ಲಾಲಿಹಾಡು, ದಾಸ ಟೈಂನಲ್ಲಿ. ನಮ್ಮ ಮೈಸೂರಿನಲ್ಲಿ ನಮ್ಮ ಸ್ನೇಹಿತರೆಲ್ಲ ಸೇರಿ ಯಾವುದಾದರೂ ಒಂದು ಟೈಟಲ್ ಹಾಕಬೇಕು ಅಂತಿದ್ರು. ಅವಾಗ ಚಾಲೆಂಜಿಂಗ್ ಸ್ಟಾರ್ ಅಂತ ಹುಟ್ಟಿಕೊಂಡಿತ್ತು. ” ಎಂದು ದರ್ಶನ್ ರಿವೀಲ್ ಮಾಡಿದ್ದಾರೆ.ದರ್ಶನ್ ಡಿ ಬಾಸ್ ಆಗಿದ್ಯಾವಾಗ?ಚಾಲೆಂಜಿಂಗ್ ಸ್ಟಾರ್ ಬಳಿಕ ಮತ್ತೊಂದು ಫೇಮಸ್ ಟೈಟಲ್ ಅಂದ್ರೆ ಅಂದು ಡಿ ಬಾಸ್. ಸೋಶಿಯಲ್ ಅಭಿಮಾನಿಗಳು ದರ್ಶನ್ ಅನ್ನೋ ಹೆಸರನ್ನೇ ಮರೆತಂತಿದೆ. ಎಲ್ಲರೂ ಡಿ ಬಾಸ್ ಅಂತಲೇ ಕರೆಯೋಕೆ ಶುರು ಮಾಡಿದ್ದಾರೆ. ಆದರೆ, ದರ್ಶನ್‌ಗೆ ಈ ಟೈಟಲ್ ಯಾವಾಗ ಬಂತು ಅನ್ನೋದು ಗೊತ್ತಿಲ್ಲ. “ಡಿ ಬಾಸ್ ಅದ್ಯಾವಾಗ ಶುರುವಾಯ್ತು ಅಂತಾನೇ ಗೊತ್ತಿಲ್ಲ. ಪಾಪ ಅವರು ಕರೆದು ನಾನು ಓಕೆ ಅಂದೆ ಅಷ್ಟೇ.” ಎನ್ನುತ್ತಾರೆ.’ಎಲ್ಲರೂ ತಪ್ಪು ತಿಳಿದುಕೊಂಡಿದ್ದಾರೆ'”ಎಲ್ಲರೂ ತಪ್ಪು ತಿಳಿದುಕೊಂಡಿದ್ದಾರೆ. ದರ್ಶನ್ ಅಂತಾನೇ ಇಟ್ಟಿದ್ದು. ರಾಂಗ್ ಇದು. ತೊಟ್ಟಿಲಲ್ಲಿ ಹಾಕುವಾಗ ಎರಡು ಹೆಸರು ಇಡುತ್ತಾರಂತೆ. ಒಂದು ಹೆಸರು. ಇನ್ನೊಂದು ಹೆಸರು ಅಂತ. ಯಾವುದೇ ಸ್ಕೂಲ್ ಸರ್ಟಿಫಿಕೇಟ್ ತಗೀರಿ. ನನ್ನದು ಏನೇ ದಾಖಲೆ ತಗೀರಿ ದರ್ಶನ್ ಅಂತಾನೇ. ನೀವು ಹೋಗ್ಬಿಟ್ಟು ಹೇಮಂತ್ ಕುಮಾರ್ ಅಂದ್ರೆ ಯಾರೂ ಇಲ್ಲ. ಹೇಮಂತ್ ಕುಮಾರ್ ಅನ್ನೋದನ್ನು ಎಲ್ಲೂ ಬಳಸುವುದಿಲ್ಲ.” ಎನ್ನುತ್ತಾರೆ ದರ್ಶನ್.ಸಿನಿಮಾಗೆ ಬಂದ್ಮೇಲೆ ಹೆಸರು ಬದಲಾಗಿಲ್ಲ'” ನಮ್ಮ ಮನೆಯಲ್ಲಿ ದಿವ್ಯ ದರ್ಶನ್ ದಿನಕರ್ ಅಂತ ಹೆಸರಿಟ್ಟಿದ್ದರು. ಜಯಮಾಲ ಹೇಮಂತ್ ಉಮೇಶ್ ಅಂತ ಜನ ಕರೆದಿದ್ದು. ಅದೇನೋ ಎರಡು ಹೆಸರು ಇಟ್ಟಿರುತ್ತಾರಂತಲ್ಲ. ಆದರೆ, ಎಲ್ಲಾ ಕಡೆನೂ ದರ್ಶನ್ ಅಂತಲೇ ಇರೋದು. ಚಿತ್ರರಂಗಕ್ಕೆ ಬಂದು ನಾನು ಬದಲಾವಣೆ ಮಾಡಿಕೊಂಡಿಲ್ಲ.” ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ QR ಸ್ಕಿನರ್ ಫೀಚರ್ ಇಲ್ಲಿದೆ.

Tue Jan 10 , 2023
ದೇಶದಲ್ಲಿ ಈಗ UIDAI ನಿಮ್ಮ mAadhaar ಅಪ್ಲಿಕೇಶನ್ನಲ್ಲೆ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಆಧಾರ್ ಸಂಖ್ಯೆ ಅಸಲಿಯೇ, ನಕಲಿಯೇ? ಎಂದು ಪರಿಶೀಲಿಸುವುದು ಎಂಬುದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. UIDAI ಆನ್ಲೈನ್ನಲ್ಲಿ ಮಾಡಬಹುದಾದ ಹಲವಾರು ಆಧಾರ್ ಸೇವೆಗಳನ್ನು ಒದಗಿಸುತ್ತದೆ. ಆಧಾರ್ ಅನ್ನು mAadhaar ಅಪ್ಲಿಕೇಶನ್ ಮತ್ತು UIDAI ನ ವೆಬ್ಸೈಟ್ ಮೂಲಕ ಪರಿಶೀಲಿಸಬಹುದು. ಆಧಾರ್ ನಮ್ಮ ಜನಸಂಖ್ಯಾ ಮತ್ತು 12-ಅಂಕಿಯ ಬಯೋಮೆಟ್ರಿಕ್ ವಿವರಗಳನ್ನು ಒಳಗೊಂಡಿರುವ ವಿಶಿಷ್ಟ ಗುರುತಿನ […]

Advertisement

Wordpress Social Share Plugin powered by Ultimatelysocial