ಯಡ್ರಾಮಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ.!!

ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 30%ರಿಂದ40% ಕಮಿಷನ್ ಕೇಳುತ್ತಾರೆ ಎಂಬ ಆರೋಪ ಕೇಳಿದೆ ಬಂದಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂಪ್ಯೂಟರ್ ಆಪರೇಟರಗಳು ಸೇರಿಕೊಂಡು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಮಿಷನ್ ದಂಧೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಹಾಗೂ ಗ್ರಾಮಸ್ಥ ಆಕ್ರೋಶ ಹೊರ ಹಾಕಿದ್ದಾರೆ.ತಾಲೂಕ್ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಸೈಯದ್ ಎಂಬುವರನ್ನು ಅಮಾನತ್ತು ಮಾಡಬೇಕು.ಕಡಕೋಳ ಗ್ರಾಮ ಪಂಚಾಯತ್ ಹಾಗೂ ಬಳಬಟ್ಟಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ JEಗಳಾದ ಮಲ್ಲಿಕಾರ್ಜುನ್, ಮತ್ತು ಹಾಸಿಮ, ಇವರ ಮೇಲೆ ಸೂಕ್ತ ಕ್ರಮ ಕೈಗೊಂಡು ಕೂಡಲೆ ಇವರನ್ನು ಅಮಾನತ್ತು ಮಾಡಬೇಕು.ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಾಮಗ್ರಿ ವೆಚ್ಚದ ಬಿಲಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು JEಗಳ ಸಂಬಂಧಿಕರ ಹೆಸರಿನ ವೆಂಡರ್ ಗಳಿಗೆ ಹಣ ಹಾಕುತ್ತಿದ್ದು, ಅವರಿಗೆ ಬರುವಂತಹ ಕಮಿಷನ್ ತೆಗೆದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ, ಆದಕಾರಣ ಇಂತಹ ವೆಂಡರಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಜಯ ಕರ್ನಾಟಕ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಚಂದ್ರು ಮಲ್ಲಾಬಾದ್ ಮಾತನಾಡಿದರು.ಯಡ್ರಾಮಿ ತಾಲೂಕಿನ ಜಯ ಕರ್ನಾಟಕ ಸಂಘಟನೆ ವತಿಯಿಂದ ಅಂಬೇಡ್ಕರ್ ಸರ್ಕಲ್ ನಿಂದ ತಾಲೂಕು ಪಂಚಾಯತ್ ವರೆಗೆ ಕಾಲ್ನಾಡಿಯ ಮುಖಾಂತರ ಪ್ರತಿಭಟನೆಯನ್ನು ಮಾಡಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರಿಗೇ ಮನವಿ ಪತ್ರವನ್ನು ಸಲ್ಲಿಸಿದರು. ಒಂದು ವಾರದೊಳಗೆ ಭ್ರಷ್ಟಾಚಾರ ಅಧಿಕಾರಿಗಳನ್ನು ಅಮಾನತ್ತು ಮಾಡದಿದ್ದರೆ ಮುಂದಿನ ದಿನಮಾನಗಳಲ್ಲಿ ತಾಲೂಕು ಪಂಚಾಯತಿ ಮುತ್ತಿಗೆ ಹಾಕಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದು ಭಾರತದ ಕೊನೆಯ ಗ್ರಾಮ

Fri Jan 6 , 2023
ಭಾರತದಲ್ಲಿ ಎಷ್ಟೋ ವಿಚಿತ್ರಗಳಿವೆ.. ವಿಲಕ್ಷಣ ಸ್ಥಳಗಳಿವೆ. ಅಚ್ಚರಿಗೆ ಕಾರಣವಾಗುವ ತಾಣಗಳಿವೆ.. ಅವುಗಳಲ್ಲಿ ಲಾಂಗ್ವಾ ಅನ್ನೋ ಗ್ರಾಮ ಕೂಡಾ ಒಂದು.. ಇದು ಭಾರತದ ಕಟ್ಟಕಡೆಯ ಗ್ರಾಮ.. ಹಾಗಂತ ಲಾಂಗ್ವಾ ಗ್ರಾಮ ಪೂರ್ತಿ ನಮ್ಮದೇ ಅಂದ್ರೆ ಮ್ಯಾನ್ಮಾರ್‌ ನವ್ರು ಜಗಳಕ್ಕೆ ಬಿದ್ದುಬಿಡ್ತಾರೆ..ಯಾಕಂದ್ರೆ, ಇದು ಎರಡು ದೇಶಗಳಲ್ಲಿ ಹಂಚಿಹೋಗಿದೆ.ಹೌದು, ಲಾಂಗ್ವಾ ಗ್ರಾಮ ಭಾರತ ದೇಶಕ್ಕೂ ಸೇರುತ್ತೆ, ಮ್ಯಾನ್ಮಾರ್‌ಗೂ ಸೇರುತ್ತೆ. ನಾಗಾಲ್ಯಾಂಡ್‌ ಹಾಗೂ ಮ್ಯಾನ್ಮಾರ್‌ ಗಡಿಯ ಸೋಮ ಜಿಲ್ಲೆಯಲ್ಲಿರುವ ಭಾರತದ ಕೊನೆಯ ಗ್ರಾಮ ಇದು.. ಈ […]

Advertisement

Wordpress Social Share Plugin powered by Ultimatelysocial