ಇದು ಭಾರತದ ಕೊನೆಯ ಗ್ರಾಮ

ಭಾರತದಲ್ಲಿ ಎಷ್ಟೋ ವಿಚಿತ್ರಗಳಿವೆ.. ವಿಲಕ್ಷಣ ಸ್ಥಳಗಳಿವೆ. ಅಚ್ಚರಿಗೆ ಕಾರಣವಾಗುವ ತಾಣಗಳಿವೆ.. ಅವುಗಳಲ್ಲಿ ಲಾಂಗ್ವಾ ಅನ್ನೋ ಗ್ರಾಮ ಕೂಡಾ ಒಂದು.. ಇದು ಭಾರತದ ಕಟ್ಟಕಡೆಯ ಗ್ರಾಮ.. ಹಾಗಂತ ಲಾಂಗ್ವಾ ಗ್ರಾಮ ಪೂರ್ತಿ ನಮ್ಮದೇ ಅಂದ್ರೆ ಮ್ಯಾನ್ಮಾರ್‌ ನವ್ರು ಜಗಳಕ್ಕೆ ಬಿದ್ದುಬಿಡ್ತಾರೆ..ಯಾಕಂದ್ರೆ, ಇದು ಎರಡು ದೇಶಗಳಲ್ಲಿ ಹಂಚಿಹೋಗಿದೆ.ಹೌದು, ಲಾಂಗ್ವಾ ಗ್ರಾಮ ಭಾರತ ದೇಶಕ್ಕೂ ಸೇರುತ್ತೆ, ಮ್ಯಾನ್ಮಾರ್‌ಗೂ ಸೇರುತ್ತೆ. ನಾಗಾಲ್ಯಾಂಡ್‌ ಹಾಗೂ ಮ್ಯಾನ್ಮಾರ್‌ ಗಡಿಯ ಸೋಮ ಜಿಲ್ಲೆಯಲ್ಲಿರುವ ಭಾರತದ ಕೊನೆಯ ಗ್ರಾಮ ಇದು.. ಈ ಗ್ರಾಮದ ಅರ್ಧ ಭಾಗ ಭಾರತಕ್ಕೆ ಸೇರಿದ್ರೆ, ಇನ್ನರ್ಧ ಮ್ಯಾನ್ಮಾರ್‌ದು.. ಹೀಗಾಗಿ, ಇಲ್ಲಿನ ಜನ ದಿನಕ್ಕೆ ಹಲವಾರು ಬಾರಿ ಎರಡು ದೇಶಗಳ ನಡುವೆ ಓಡಾಡುತ್ತಾರೆ.. ಊಟ ಒಂದು ದೇಶದಲ್ಲಿ ಮಾಡಿದರೆ, ಮಲಗೋದು ಇನ್ನೊಂದು ದೇಶದಲ್ಲಿ ಲಾಂಗ್ವಾ ಗ್ರಾಮದ ಅರ್ಧದಷ್ಟು ಮನೆಗಳ ಅಡುಗೆ ಕೋಣೆಗಳು ಭಾರತದಲ್ಲಿದ್ದರೆ, ಮಲಗೋ ಕೋಣೆಗಳು ಮ್ಯಾನ್ಮಾರ್‌ನಲ್ಲಿವೆ.. ಇನ್ನು ಕೆಲವರ ಮನೆಗಳು ಭಾರತದಲ್ಲಿದ್ದರೆ, ಅವರು ಕೃಷಿ ಮಾಡೋ ಭೂಮಿ ಮ್ಯಾನ್ಮಾರ್‌ನಲ್ಲಿದೆ.. ಇಲ್ಲ ಮ್ಯಾನ್ಮಾರ್‌ನಲ್ಲಿ ಮನೆ ಇದ್ದರೆ, ಅವರ ಕೃಷಿ ಭೂಮಿ ಭಾರತದಲ್ಲಿರುತ್ತೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಪಿಎಲ್ ನಿಂದ ತಪ್ಪಿಸಿಕೊಳ್ಳುತ್ತಾರಾ ಕೋಟಿ ವೀರ

Fri Jan 6 , 2023
ಆಸೀಸ್‌ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಐಪಿಎಲ್‌ನಲ್ಲಿ ಬೌಲಿಂಗ್‌ ಮಾಡಲು ಸಾಧ್ಯವಿಲ್ಲ ಎಂಬ ವದಂತಿಗಳು ಹಬ್ಬಿವೆ. ಅದನ್ನು ಸ್ವತಃ ಗ್ರೀನ್‌ ನಿರಾಕರಿಸಿದ್ದಾರೆ. ನಾನು ಮುಂಬೈ ಇಂಡಿಯನ್ಸ್‌ ತಂಡದ ಪರ ಬೌಲಿಂಗ್‌, ಬ್ಯಾಟಿಂಗ್‌ ಮಾಡಲು ಪೂರ್ಣ ಸಿದ್ಧವಿದ್ದೇನೆ.ಇಂತಹ ವದಂತಿಗಳು ಎಲ್ಲಿಂದ, ಹೇಗೆ ಹಬ್ಬಿದವು ಎಂದು ಗೊತ್ತಿಲ್ಲ ಎಂದು ಗ್ರೀನ್‌ ಸ್ಪಷ್ಟಪಡಿಸಿದ್ದಾರೆ.ಅವರು ಈ ಬಾರಿಯ ಹರಾಜಿನಲ್ಲಿ ಐಪಿಎಲ್‌ ಇತಿಹಾಸದಲ್ಲೇ 2ನೇ ಗರಿಷ್ಠ 17.5 ಕೋಟಿ ರೂ.ಗಳಿಗೆ ಮಾರಾಟ ವಾಗಿದ್ದಾರೆ. ಇತ್ತೀಚೆಗೆ ಪ್ರವಾಸಿ ದ. ಆಫ್ರಿಕಾ ವಿರುದ್ಧ […]

Advertisement

Wordpress Social Share Plugin powered by Ultimatelysocial