ಬಟನ್ ರೋಸ್‌ ಕೃಷಿಯಲ್ಲಿ ಅಧಿಕ ಆದಾಯ.

ಕುಕನೂರು: ರೈತರು ಸಾಂಪ್ರದಾಯಿಕ ಬೆಳೆಗಳಿಂದ ವಿಮುಖರಾಗುತ್ತಿದ್ದಾರೆ. ಮೆಕ್ಕೆಜೋಳ, ಶೇಂಗಾ ಮತ್ತು ಹತ್ತಿಯಂಥ ಬೆಳೆಗಳನ್ನು ಬಿಟ್ಟು ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.

ಅಂಥ ರೈತರಲ್ಲಿ ಒಬ್ಬರೂ ತಾಲ್ಲೂಕಿನ ಹೊನ್ನುಣಿಸಿ ಗ್ರಾಮದ ರೈತ ಪದವೀಧರ ದೇವೇಂದ್ರಗೌಡ ಪೊಲೀಸ್ ಪಾಟೀಲ.

ದೇವೇಂದ್ರಪ್ಪ ಎಲ್ಲ ರೈತರಂತೆ ಯೋಚಿಸದೆ ತೋಟಗಾರಿಕಾ ಬೆಳೆಯಾದ ಬಟನ್ ರೋಸ್ ಬೆಳೆದಿದ್ದಾರೆ. ತಮಗಿದ್ದ ಒಂದೂ ಎಕರೆ ಜಮೀನಿನಲ್ಲಿ ಬೆಂಗಳೂರಿನಿಂದ ಬಟನ್ ರೋಸ್ ಸಸಿ ತಂದು ಹಚ್ಚಿದ್ದಾರೆ. ಸರ್ಕಾರದ ನರೇಗಾ ಯೋಜನೆಯಿಂದ ₹1 ಲಕ್ಷ ಸಹಾಯಧನ ದೊರೆತಿದೆ.

ಐದು ಅಡಿ ಅಂತರದಲ್ಲಿ ಸುಮಾರು 4 ಸಾವಿರ ಬಟನ್ ರೋಸ್ ಸಸಿಗಳನ್ನು ಹಚ್ಚಿರುವ ದೇವೇಂದ್ರ ಗೌಡರಿಗೆ ಮೂರು ತಿಂಗಳ ನಂತರ ಬಟನ್ ರೋಜ್ ಆದಾಯ ಬರಲಾರಂಭಿಸಿದೆ.

ಆರಂಭದಲ್ಲಿ ಕೆಜಿಗಟ್ಟಲೆ ಬರುತ್ತಿದ್ದು, ಬಟನ್ ರೋಸ್‌ ದಿನ ಒಂದಕ್ಕೆ ಕ್ವಿಂಟಲ್‌ಗಟ್ಟಲೇ ಬರುವ ಸಂಭವವಿದೆ.

ದೀಪಾವಳಿ, ದಸರಾ, ಗೌರಿ ಹುಣ್ಣಿಮೆ ಮತ್ತು ತುಳಸಿ ವಿವಾಹದಂಥ ಸಂದರ್ಭದಲ್ಲಿ ಬಟನ್ ರೋಸ್‌ ಬೆಲೆ ನೂರು ದಾಟಿದ್ದು ಇದೆ. ಉಳಿದಂತೆ ಪ್ರತಿನಿತ್ಯ ₹50 ರಿಂದ ₹100 ರವರೆಗೂ ಬೆಲೆ ಸಿಗುತ್ತದೆ. ದಿನಕ್ಕೆ ಎರಡು ಬಾರಿ ಬಟನ್ ರೋಸ್ ಕಟ್ ಮಾಡಿ ಮಾರುಕಟ್ಟೆಗೆ ತರಲಾಗುತ್ತಿದೆ.

ಕಡಿಮೆಯಂದರೂ ₹50 ಬೆಲೆ ಸಿಗುತ್ತದೆ.

ಈಗಾಗಿ ತಮಗೆ ದಿನನಿತ್ಯ ಹಣ ಕೈಯಲ್ಲಿರುವ ಕಾರಣ ಬಟನ್ ರೋಸ್‌ ನಮಗೆ ಎಟಿಎಂ ಇದ್ದಂತೆ ಎನ್ನುತ್ತಾರೆ ರೈತ ದೇವೇಂದ್ರಪ್ಪ.

ಜಾನುವಾರುಗಳನ್ನು ಸಾಕಿ ಹಾಲಿನ ಡೈರಿಗೆ ಹಾಕಿ ಹಣ ಪಡೆದಂತೆ ನಾನು ಬಟನ್ ರೋಸ್ ಮಾರಿ ಹಣ ಪಡೆಯುತ್ತಿದ್ದೇನೆ ಎನ್ನುತ್ತಾರೆ.

ಬಟನ್ ರೋಸ್ ಒಂದು ಬಾರಿ ಹಚ್ಚಿದರೇ ಸಾಕು. ಸರಿಯಾಗಿ ನಿರ್ವಹಣೆ ಮಾಡಿದರೆ 10 ವರ್ಷಗಳ ಕಾಲ ಆದಾಯ ಬರುತ್ತದೆ.

ಇನ್ನು ಹುಣ್ಣಿಮೆ ಅಮವಾಸ್ಯೆಗಳಂದು ಸಹ ಬಟನ್ ರೋಸ್‌ಗೆ ಬೇಡಿಕೆ ಬರುತ್ತದೆ. ಸದ್ಯ ಯಲಬುರ್ಗಾ ಹಾಗೂ ಕುಕನೂರು ಮಾರುಕಟ್ಟೆಯಲ್ಲಿ ಮಾರುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಉದ್ದೇಶವಿದೆ ಎಂದು ದೇವೇಂದ್ರಪ್ಪ ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೂಟಿಂಗ್ ವೇಳೆ ನಟಿ ಪಲ್ಲವಿಗೆ ಗಾಯ.

Tue Jan 17 , 2023
ಬಹು ಚರ್ಚೆ ಹುಟ್ಟು ಹಾಕಿರುವ ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ನಟಿ ಪಲ್ಲವಿ ಜೋಶಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಸಿನಿಮಾದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಚಿತ್ರದ ಶೂಟಿಂಗ್ ವೇಳೆ ಪಲ್ಲವಿ ಜೋಶಿ ಗಾಯಗೊಂಡಿದ್ದಾರೆ.ಚಿತ್ರೀಕರಣ ನಡೆಯುವಾಗ ಪಲ್ಲವಿ ಜೋಶಿ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಆದರೆ ಚಿತ್ರೀಕರಣವನ್ನು ನಿಲ್ಲಿಸದ ಅವರು, ಸಂಪೂರ್ಣ ಶೂಟಿಂಗ್ ಮುಗಿದ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ […]

Advertisement

Wordpress Social Share Plugin powered by Ultimatelysocial