GOOD NEWS:ಗಣರಾಜ್ಯೋತ್ಸವಕ್ಕೆ ಬಂಪರ್ ಆಫರ್,ವಿಮಾನವೇರುವವರಿಗೆ ಶುಭ ಸುದ್ದಿ;

ಕೊರೋನಾ ಉಲ್ಬಣದೊಂದಿಗೆ, ಅನೇಕ ರಾಜ್ಯಗಳು ವಿಮಾನಗಳನ್ನು ನಿಷೇಧಿಸಿವೆ ಅಥವಾ ಈ ವಿಮಾನಗಳ ಹಾರಾಟದ ಆವರ್ತನವನ್ನು ಕಡಿತಗೊಳಿಸಿವೆ. ಇದರಿಂದಾಗಿ ಟಿಕೆಟ್ ದರಗಳು ಹೆಚ್ಚಾಗುತ್ತಿವೆ. ಆದರೆ ಕಡಿಮೆ ವೆಚ್ಚದಲ್ಲಿ ವಿಮಾನದ ಮೂಲಕ ಪ್ರಯಾಣಿಸುವ ಬಯಕೆ ಹಾಗೂ ಅವಶ್ಯಕತೆ ಇದ್ದವರಿಗೆ ಗೋಫಸ್ಟ್ ಶುಭಸುದ್ದಿ ನೀಡಿದೆ‌.

ಗಣರಾಜ್ಯೋತ್ಸವದ ಮುನ್ನ ಗೋ ಫಸ್ಟ್ ಏರ್‌ಲೈನ್ಸ್ ಹೊಸ ಕೊಡುಗೆಯನ್ನು ಪರಿಚಯಿಸಿದ್ದು, ಈ ಆಫರ್ ಮೂಲಕ ಕೇವಲ 1,000 ಕ್ಕಿಂತ ಕಡಿಮೆ, ನಿಖರವಾಗಿ ಹೇಳುವುದಾದರೆ 926 ರೂಪಾಯಿಯಿಂದ ವಿಮಾನದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ರೈಟ್ ಟು ಫ್ಲೈ ಎಂಬ ಹೆಸರಿನಲ್ಲಿ ಗೋಫಸ್ಟ್ ಈ ಬಂಪರ್ ಕೊಡುಗೆ ನೀಡಿದೆ‌.

ಇದರ ಮೂಲಕ ಗ್ರಾಹಕರು ದೇಶದಾದ್ಯಂತ ಅನೇಕ ಸ್ಥಳಗಳಿಗೆ ಅಗ್ಗವಾಗಿ ಪ್ರಯಾಣಿಸಬಹುದು. ‘ರೈಟ್ ಟು ಫ್ಲೈ’ ಆಫರ್‌ನ ಅಡಿಯಲ್ಲಿ, ಟಿಕೆಟ್‌ಗಳ ಬೆಲೆ 926ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಆಫರ್‌ ನ ಗರಿಷ್ಠ ಪ್ರಯೋಜನವನ್ನು ಪಡೆಯಲು ಬಯಸಿದರೆ ಜನವರಿ 22 – 26 ರ ನಡುವೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಅಲ್ಲದೇ ಫೆಬ್ರವರಿ 11 – ಮಾರ್ಚ್ 31 ಭರ್ಜರಿ ಕೊಡುಗೆ ನೀಡಲಾಗಿದೆ. ಇದು ಏಕಮುಖ ವಿಮಾನ ಟಿಕೆಟ್ ಕೊಡುಗೆಯಾಗಿದ್ದು, ರೌಂಡ್ ಟ್ರಿಪ್‌ಗಳಿಗೆ ಅನ್ವಯಿಸುವುದಿಲ್ಲ ಎಂಬುದು ಗಮನಾರ್ಹ.

ಗೋ ಫಸ್ಟ್ ನ ಈ ಆಫರ್ ದೇಶೀಯ ಪ್ರಯಾಣಕ್ಕೆ ಮಾತ್ರ ಲಭ್ಯವಿದೆ‌. ಅಂತರಾಷ್ಟ್ರೀಯ ವಿಮಾನಗಳಲ್ಲಿ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ. ಈ ಕೊಡುಗೆಯ ಅಡಿಯಲ್ಲಿ, ನೀವು Go First ಏರ್‌ಲೈನ್‌ನ ಗಣರಾಜ್ಯೋತ್ಸವದ ಆಫರ್‌ ನ ಅಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದರೆ, ಪ್ರಯಾಣದ ಮೂರು ದಿನಗಳ ಮೊದಲು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಮ್ಮ ವಿಮಾನ ಟಿಕೆಟ್‌ಗಳನ್ನು ರೀಶೆಡ್ಯೂಲ್ ಮಾಡಬಹುದು. ಆದರೆ ಟಿಕೆಟ್ ಅನ್ನು ರದ್ದುಗೊಳಿಸಲು ಬಯಸಿದರೆ ರದ್ದತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಕ್ರೋಮ್ಯಾಕ್ಸ್ Note 2;

Mon Jan 24 , 2022
ಗಣ ರಾಜ್ಯೋತ್ಸವದ ಪ್ರಯುಕ್ತ ಇದೇ ಜನವರಿ 25 ರಂದು ಭಾರತದಲ್ಲಿ ತನ್ನ ಹೊಸ ಮೈಕ್ರೋಮ್ಯಾಕ್ಸ್ ಇನ್‌ ನೋಟ್‌ 2 (Micromax IN Note 2) ಫೋನ್‌ ಬಿಡುಗಡೆಗೆಗೊಳ್ಳಲಿದೆ.ಚೀನಾ ಮೂಲದ ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ಒಡ್ಡಲು ಮೈಕ್ರೋಮ್ಯಾಕ್ಸ್ ಭಾರತದಲ್ಲಿ ಹೊಸ ಫೋನ್ ಲಾಂಚ್​ಗೆ ಸಿದ್ಧತೆ ನಡೆಸಿದೆ. ಗಣ ರಾಜ್ಯೋತ್ಸವದ ಪ್ರಯುಕ್ತ ಇದೇ ಜನವರಿ 25 ರಂದು ಭಾರತದಲ್ಲಿ ತನ್ನ ಹೊಸ ಮೈಕ್ರೋಮ್ಯಾಕ್ಸ್ ಇನ್‌ ನೋಟ್‌ 2 (Micromax IN Note […]

Advertisement

Wordpress Social Share Plugin powered by Ultimatelysocial