ಅಜ್ಮೀರ್ ದರ್ಗಾದಲ್ಲಿ ಉರುಸ್ ಸಮಯದಲ್ಲಿ ಹೊಡೆದಾಟ ನಡೆದಿದೆ.

ಅಜ್ಮೀರ್ ದರ್ಗಾದಲ್ಲಿ ಉರುಸ್ ಸಮಯದಲ್ಲಿ ಹೊಡೆದಾಟ ನಡೆದಿದೆ. ಮಾಹಿತಿ ಪ್ರಕಾರ, ವಿವಾದಾತ್ಮಕ ಘೋಷಣೆ ಕೂಗಿರುವ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ ಎನ್ನಲಾಗಿದೆ. ಖಾದೀಮ್ ಮತ್ತು ಜರೀನ್ ಗುಂಪುಗಳ ಮಧ್ಯೆ ಪರಸ್ಪರ ಘರ್ಷಣೆ ನಡೆದಿದೆ ಎನ್ನಲಾಗಿದೆ.

ಈ ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ದರ್ಗಾದಲ್ಲಿ 811 ನೇ ಉರುಸ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬರೇಲ್ವಿ ಸಮುದಾಯದ ಕೆಲವರು ಅಜ್ಮೀರ್ ಷರೀಫ್ ದರ್ಗಾದೊಳಗೆ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ. ಇದು ದರ್ಗಾದ ಖಾದೀಮ್ ಗಳ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮ ಘೋಷಣೆ ಕೂಗುತ್ತಿದ್ದವರೊಂದಿಗೆ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ. ಸಿದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಯಿತು.

ಬರೇಲ್ವಿ ಸಮುದಾಯದವರುದರ್ಗಾದಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ಘೋಷಣೆಯನ್ನು ನಾವು ವಿರೋಧಿಸಿದ್ದೇವೆ ಎನ್ನುವುದು ಖಾದೀಮ್ ಗಳ ಆರೋಪ. ಇನ್ನೊಂದೆಡೆ, ದರ್ಗಾದ ಜನ್ನತಿ ದರ್ವಾಜಾ ಬಳಿ ಘೋಷಣೆ ಕೂಗುತ್ತಿದ್ದವರ ಜತೆ ಖಾದೀಮ್ ಗಳು ಘರ್ಷಣೆ ನಡೆಸಿದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ.

 

ಘರ್ಷಣೆ ಆರಂಭವಾದ ತಕ್ಷಣ ದರ್ಗಾದ ಠಾಣಾಧಿಕಾರಿ ಅಮರ್ ಸಿಂಗ್ ಭಾಟಿ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಆದರೆ, ಈ ಹೊಡೆದಾಟದ ವಿಡಿಯೋ ಮಾತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದೆ. ವೀಡಿಯೊದಲ್ಲಿ, ದೊಡ್ಡ ಸಂಖ್ಯೆಯ ಜನರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.

ಪ್ರತಿ ವರ್ಷ ಪ್ರಸಿದ್ಧ ಸೂಫಿ ಸಂತರಲ್ಲಿ ಒಬ್ಬರಾದ ಚಿಶ್ತಿಯ ಪುಣ್ಯತಿಥಿಯಂದು ಉರುಸ್ ಆಯೋಜಿಸಲಾಗುತ್ತದೆ. ಚಿಶ್ತಿಯನ್ನು ‘ಗರೀಬ್ ನವಾಜ್’ ಎಂದೂ ಕರೆಯುತ್ತಾರೆ. ಉರುಸ್ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಅಜ್ಮೀರ್ ಶರೀಫ್ ದರ್ಗಾಕ್ಕೆಆಗಮಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಪ್ರತಿ ವರ್ಷವೂ ಉರುಸ್ ಸಮಯದಲ್ಲಿ ಈ ದರ್ಗಾಕ್ಕೆ ಚಾದರ್ ಕಳುಹಿಸುತ್ತಾರೆ. ಈ ವರ್ಷವೂ ಇಲ್ಲಿ ಮೋದಿ ಅವರು ಕಳುಹಿಸಿರುವ ಚಾದರ್ ಅರ್ಪಿಸಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಓಲೈಕೆಗೆ ಬಜೆಟ್ ಕಸರತ್ತು.

Mon Jan 30 , 2023
ಮೊದಲ ದಿನ ಲೋಕಸಭೆಯಲ್ಲಿ ವಿತ್ತ ಸಚಿವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಕರ್ನಾಟಕ ಸೇರಿದಂತೆ ೯ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ೨೦೨೪ ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಫೆ. ೧ರಂದು ಪ್ರಕಟವಾಗುವ ಕೇಂದ್ರ ಮುಂಗಡ ಪತ್ರದಲ್ಲಿ ಬರಪೂರ ಯೋಜನೆ ಪ್ರಕಟಿಸುವ ಮೂಲಕ ಜನ ಮನ ಗೆಲ್ಲಲು ಕೇಂದ್ರ ಸರ್ಕಾರ ಮುಂದಾಗಿದೆ.ನಾಳೆಯಿಂದ ಎರಡು ಹಂತದಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದೆ. ನಾಡಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೩-೨೪ನೇ ಸಾಲಿನ ಮುಂಗಡ […]

Advertisement

Wordpress Social Share Plugin powered by Ultimatelysocial