ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ

ಪ್ರೆಗ್ನೆಂಟ್ ಆದ ನಂತರ ನಟನೆ ಸಾಧ್ಯವಿಲ್ಲ. ಮಗು ಜನಿಸಿದ ನಂತರ ಒಂದಷ್ಟು ಕಾಲ ಅದರ ಆರೈಕೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಹೀಗಾಗಿ, ಒಂದಷ್ಟು ವರ್ಷ ಚಿತ್ರರಂಗದಿಂದ ಗ್ಯಾಪ್ ಆಗೋದು ಪಕ್ಕಾ.ನಟರಣಬೀರ್ ಕಪೂರ್  ಹಾಗೂ ನಟಿ ಆಲಿಯಾ ಭಟ್ ದಂಪತಿ ಶೀಘ್ರವೇ ತಂದೆ-ತಾಯಿ ಆಗುತ್ತಿದ್ದಾರೆ.

ಕಪೂರ್ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಆಗುತ್ತಿರುವ ವಿಚಾರ ಸಾಕಷ್ಟು ಜನರಿಗೆ ಖುಷಿ ನೀಡಿದೆ. ಆದರೆ, ಆಲಿಯಾ ಭಟ್ ಇಷ್ಟು ಬೇಗ ಮಗು ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಆಲಿಯಾ ಪ್ರೆಗ್ನೆಂಟ್ಎಂದು ಘೋಷಣೆ ಮಾಡುವುದಕ್ಕೂ ಮೊದಲು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು.

ಆಲಿಯಾ ಭಟ್ ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅನಾಯಾಸವಾಗಿ ಅವರಿಗೆ ಅವಕಾಶ ಸಿಕ್ಕಿತು. ಆದರೆ, ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳದಿದ್ದರೆ ಸ್ಟಾರ್​ ಕಿಡ್ ಆದರೂ ಸರಿ, ಸಾಮಾನ್ಯರಾದರೂ ಸರಿ ಚಿತ್ರರಂಗದಲ್ಲಿ ಅವರಿಗೆ ಅವಕಾಶಗಳು ಬರುವುದಿಲ್ಲ. ಸ್ಟಾರ್​ ಕಿಡ್ ಆದ ಹೊರತಾಗಿಯೂ ಆಲಿಯಾ ನಟನೆ ಮೂಲಕ ಗಮನ ಸೆಳೆದರು. ಕೇವಲ ಪಕ್ಕದ ಮನೆ ಹುಡುಗಿ ಪಾತ್ರ ಮಾಡದೆ, ‘ರಾಜಿ’, ‘ಗಂಗೂಬಾಯಿ ಕಾಠಿಯಾವಾಡಿ’ ಅಂತಹ ಮಹಿಳಾ ಪ್ರಧಾನ ಸಿನಿಮಾ ಮಾಡಿ ಸೈ ಎನಿಸಿಕೊಂಡರು. ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಆಫರ್​ಗಳು ಬರುತ್ತಿವೆ. ಆದರೆ, ಈಗ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡೋಕೆ ನಿರ್ಧರಿಸಿದ್ದಾರೆ. ಹೀಗಾಗಿ, ಕೆಲ ವರ್ಷ ನಟನೆಯಿಂದ ಗ್ಯಾಪ್​ ತೆಗೆದುಕೊಳ್ಳುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರೆಗ್ನೆಂಟ್ ಆದ ನಂತರ ನಟನೆ ಸಾಧ್ಯವಿಲ್ಲ. ಮಗು ಜನಿಸಿದ ನಂತರ ಒಂದಷ್ಟು ಕಾಲ ಅದರ ಆರೈಕೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಹೀಗಾಗಿ, ಒಂದಷ್ಟು ವರ್ಷ ಚಿತ್ರರಂಗದಿಂದ ಗ್ಯಾಪ್ ಆಗೋದು ಪಕ್ಕಾ. ಆಲಿಯಾ ಮದುವೆ ಆದ ನಂತರ ತಕ್ಷಣಕ್ಕೆ ಮಗು ಮಾಡಿಕೊಳ್ಳುವ ಆಲೋಚನೆಯಲ್ಲಿ ಇದ್ದ ಕಾರಣಕ್ಕೆ ಜ್ಯೂ.ಎನ್​ಟಿಆರ್​ 30ನೇ ಚಿತ್ರದಲ್ಲಿ ನಟಿಸಲು ಆಲಿಯಾ ನೋ ಎಂದಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದಲ್ಲಿ ಆಲಿಯಾ ನಟಿಸಿದ್ದರು. ಈ ಸಿನಿಮಾ ತೆರೆಗೆ ಬರುವ ಸಂದರ್ಭದಲ್ಲಿಯೇ ಹೊಸ ವದಂತಿ ಹುಟ್ಟಿತ್ತು. ಜ್ಯೂ.ಎನ್​ಟಿಆರ್ 30ನೇ ಚಿತ್ರಕ್ಕಾಗಿ ನಿರ್ದೇಶಕ ಕೊರಟಾಲ ಶಿವ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಆಲಿಯಾ ನಾಯಕಿ ಎನ್ನಲಾಗಿತ್ತು. ಆದರೆ, ಅವರು ಪ್ರೆಗ್ನೆನ್ಸಿ ಪ್ಲ್ಯಾನ್​ನಿಂದ ಈ ಚಿತ್ರದ ಆಫರ್​ ಕೈ ಬಿಟ್ಟಿದ್ದಾರೆ ಎಂದು ವರದಿ ಆಗಿದೆ.

ಆಲಿಯಾ ನಾಲ್ಕು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್ ಮುಗಿದಿದ್ದು, ಸೆಪ್ಟೆಂಬರ್​ನಲ್ಲಿ ಚಿತ್ರ ತೆರೆಗೆ ಬರಲಿದೆ. ‘ಡಾರ್ಲಿಂಗ್ಸ್’ ಚಿತ್ರದಲ್ಲಿ ಆಲಿಯಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕಿಯೂ ಹೌದು. ‘ರಾಕಿ ಔರ್​ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ. ‘ಹಾರ್ಟ್ ಆಫ್​ ಸ್ಟೋನ್​’ ಹೆಸರಿನ ಹಾಲಿವುಡ್​ ಚಿತ್ರದ ಕೆಲಸದಲ್ಲೂ ಆಲಿಯಾ ಬ್ಯುಸಿ ಆಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿಗಳಿಗೆ KSRTCಯಿಂದ ಉಚಿತ ಬಸ್ ಪಾಸ್ ಅವಧಿ ವಿಸ್ತರಣೆ

Tue Jun 28 , 2022
  ಬೆಂಗಳೂರು: 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಈಗಾಗಲೇ ವಿತರಿಸಿರುವಂತ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್ ಅವಧಿಯ ನಂತ್ರವೂ, ಪರೀಕ್ಷೆ ನಿಗದಿ ಪಡಿಸಲಾಗಿದೆ. ಈ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ, ಪಾಸ್ ಅವಧಿಯನ್ನು ವಿಸ್ತರಿಸಿ, ಕೆ ಎಸ್ ಆರ್ ಟಿ ಸಿ ಆದೇಶಿಸಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2021-22ನೇ ಸಾಲಿನಲ್ಲಿ ಪದವಿ, ವೃತ್ತಿಪರ ಕೋರ್ಸ್, […]

Advertisement

Wordpress Social Share Plugin powered by Ultimatelysocial