ಅಲ್ಲು ಅರ್ಜುನ್ ಹೆಂಡತಿಯನ್ನು ಪ್ರೀತಿಯಿಂದ ಕರೆಯೋದು ಹೀಗಂತೆ!

 

ಸಾಮಾನ್ಯವಾಗಿ ನಮಗೆ ಪ್ರೀತಿ ಪಾತ್ರರಾದವರನ್ನು ಅಡ್ಡ ಹೆಸರಿನಿಂದ ಕರೆಯುವುದು ರೂಢಿ. ಎಲ್ಲರೂ ಅವರಿಗೆ ಇಷ್ಟವಾದ ವ್ಯಕ್ತಿಗಳಿಗೊಂದು ಮುದ್ದಾದ ನಿಕ್‌ ನೇಮ್‌ ಇಟ್ಟಿರುತ್ತಾರೆ. ಅದರಲ್ಲೂ ಮಕ್ಕಳಿಗೆ, ಪತಿ-ಪತ್ನಿ ಅಥವಾ ಗರ್ಲ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌ ಗೆ ಹೀಗೆ ಹೆಸರಿಡೋದು ಕಾಮನ್‌
ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ದಕ್ಷಿಣದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಕಪಲ್‌ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅನೇಕ ಅಭಿಮಾನಿಗಳಿಗೆ ಇವರು ರೋಲ್‌ ಮಾಡೆಲ್‌ ಕೂಡ ಹೌದು.
ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡೋ ಪೋಸ್ಟ್​ಗಳು ಅವರ ಪ್ರೀತಿಯನ್ನು ಸಾರುತ್ತವೆ. ಅವರ ಓಡಾಟ, ಪ್ರವಾಸ, ಪಾರ್ಟಿ, ಮಕ್ಕಳ ಜೊತೆ, ಕುಟುಂಬದವರ ಜೊತೆಗಿನ ಒಡನಾಟ ಇವೆಲ್ಲ ಅವರ ಬಾಂಧವ್ಯವನ್ನು ಹೇಳುತ್ತವೆ.
ಅಷ್ಟಕ್ಕೂ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ಟಾಲಿವುಡ್‌ನ ಅತ್ಯಂತ ಜನಪ್ರಿಯ ಸ್ಟಾರ್ ಪತ್ನಿಯರಲ್ಲಿ ಒಬ್ಬರು. ಅವರು ಇನ್‌ಸ್ಟಾಗ್ರಾಂ ನಲ್ಲಿ ಸಾಕಷ್ಟು ಆಕ್ಟಿವ್‌ ಆಗಿರುವುದರ ಜೊತೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಹಾಗೂ ಕುಟುಂಬದ ಫೋಟೋಗಳನ್ನು ಆಗಾಗ ಅವರು ಪೋಸ್ಟ್‌ ಮಾಡುತ್ತಿರುತ್ತಾರೆ. ಕೆಲವು ಬಾರಿ ಅವರು ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಾರೆ.
ಇತ್ತೀಚಿಗೆ ಸ್ಟಾರ್ ಪತ್ನಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಸಂಕ್ಷಿಪ್ತವಾಗಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಅನ್ನು ಹೊಂದಿದ್ದರು. ಅಲ್ಲು ಅರ್ಜುನ್ ನಿಮಗೆ ಯಾವುದಾದರೂ ಅಡ್ಡ ಹೆಸರು ಇಟ್ಟಿದ್ದಾರೆಯೇ? ಎಂದು ಅಭಿಮಾನಿಯೊಬ್ಬರು ಕೇಳಿದರು.
ಇನ್ನೊಬ್ಬ ಬಳಕೆದಾರರು, “ಬನ್ನಿ ಗಾರು ನಿಮಗೆ ಯಾವುದಾದರೂ ನಿಕ್‌ ನೇಮ್​ನಿಂದ ಕರೆಯುತ್ತಾರೆಯೇ” ಎಂಬುದಾಗಿ ಕೇಳಿದ್ದಾರೆ. ಅದಕ್ಕೆ ಸ್ನೇಹಾ ಅವರು, ” ಕ್ಯೂಟಿ ” ಎಂದು ಉತ್ತರಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳಿಗೆ ಆರೋಗ್ಯ ಸಚಿವರ ವಿಶೇಷ ಸೂಚನೆ

Mon Dec 26 , 2022
ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಹೊಸ ಗೈಡ್ ಲೈನ್ ಪ್ರಕಟಿಸಿದೆ.ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ರಾಜಕೀಯ ರ್ಯಾಲಿಗಳಿಗೆ, ಪಾದಯಾತ್ರೆ, ರಥಯಾತ್ರೆಗಳಿಗೆ ಯಾವುದೇ ನಿರ್ಬಂಧವನ್ನು ಹೇರುತ್ತಿಲ್ಲ. ಆದರೆ ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲೇಬೇಕು ಎಂದು ಹೇಳಿದರು.ರಾಜ್ಯದಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಪ್ರಮುಖವಾಗಿ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು ಎಂದು […]

Advertisement

Wordpress Social Share Plugin powered by Ultimatelysocial