: 20,000 ಉದ್ಯೋಗಿಗಳ ವಜಾಕ್ಕೆ ಮುಂದಾದ ಅಮೆಜಾನ್; ಉನ್ನತ ಹುದ್ದೆಯಲ್ಲಿರುವವರಿಗೂ ಸಂಕಷ್ಟ.

ರ್ಥಿಕ ಬಿಕ್ಕಟ್ಟಿನತ್ತ ವಿಶ್ವ ಸಾಗುತ್ತಿರುವ ಬೆನ್ನಲ್ಲೇ ಬಹು ರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ. ಈಗಾಗಲೇ ಟ್ವಿಟ್ಟರ್, ಮೆಟಾ, ಸಿಸ್ಕೋ ಮೊದಲಾದ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಅಮೆಜಾನ್ ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.ಈ ಮೊದಲು ಹತ್ತು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಅಮೆಜಾನ್ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದ್ದರೂ ಈಗ ಹೊರ ಬಿದ್ದಿರುವ ಮಾಹಿತಿ ಪ್ರಕಾರ 20,000 ಮಂದಿಯ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಮ್ಯಾನೇಜರ್ ಅಂತಹ ಉನ್ನತ ಹುದ್ದೆಯಲ್ಲಿರುವವರನ್ನೂ ಕೂಡ ವಜಾಗೊಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.ವಜಾಗೊಳ್ಳುವ ಉದ್ಯೋಗಿಗಳಿಗೆ ಪರಿಹಾರವಾಗಿ ಕೆಲ ತಿಂಗಳುಗಳ ವೇತನವನ್ನು ಮುಂಗಡವಾಗಿ ನೀಡುವ ಸಾಧ್ಯತೆಯಿದ್ದು, ಈಗಾಗಲೇ ಕೆಲಸದಿಂದ ಕಿತ್ತು ಹಾಕುವ ಉದ್ಯೋಗಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ. ವಿಶ್ವದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಾನಾ ಆದೇಶಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ.

Mon Dec 5 , 2022
  ಒಂದು ಒಂದು ಸಲ ಅವರ ಆದೇಶ ಅಲ್ಲಿನ ಜನರಿಗೆ ಭಯವನ್ನು ಹುಟ್ಟಿಸುತ್ತದೆ. ಇದೀಗ ಉತ್ತರ ಕೊರಿಯ ಸರ್ಕಾರ ಮತ್ತೊಂದು ತೀರ್ಮಾನ ಕೈಗೊಂಡಿದ್ದು, ಈ ಆದೇಶ ಅಚ್ಚರಿಯ ಜೊತೆಗೆ ನಗು ತರಿಸುವಂತಿದೆ. ಅದೇನೆಂದರೆ ಯುವ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಸಲುವಾಗಿ ಪೋಷಕರು ತಮ್ಮ ಮಕ್ಕಳಿಗೆ ಗನ್, ಬಾಂಬ್, ಸೆಟಲೈಟ್, ನಿಷ್ಠೆ ಈ ತರಹದ ಹೆಸರುಗಳನ್ನು ಇಡಬೇಕೆಂದು ಆದೇಶಿಸಲಾಗಿದೆ. ಈ ಮೊದಲು A Ri ಮತ್ತು Su Mi ಯಿಂದ ಕೊನೆಯಾಗುವ […]

Advertisement

Wordpress Social Share Plugin powered by Ultimatelysocial