ಇಶಾ ಅಂಬಾನಿ ಅವರಿಗೂ ಉನ್ನತ ಹುದ್ದೆ ನೀಡಲು ಮುಖೇಶ್​ ಅವರು ಬಯಸಿದ್ದಾರೆ

 

ಮುಂಬೈ: ಉದ್ಯಮಿ ಮುಖೇಶ್‌ ಅಂಬಾನಿ ರಿಲಯನ್ಸ್‌ ಜಿಯೋ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಮಗ 30 ವರ್ಷದ ಆಕಾಶ್ ಅಂಬಾನಿ ನೂತನ ಛೇರ್ಮನ್​​ ಎಂದು ನಿನ್ನೆ (ಮಂಗಳವಾರ) ಘೋಷಣೆ ಮಾಡಿದ್ದಾರೆ.

ಇದರ ಬೆನ್ನಲ್ಲೇ ಇದೀಗ ತಮ್ಮ ಪುತ್ರಿ ಇಶಾ ಅಂಬಾನಿ ಅವರಿಗೂ ಉನ್ನತ ಹುದ್ದೆ ನೀಡಲು ಮುಖೇಶ್​ ಅವರು ಬಯಸಿದ್ದಾರೆ ಎನ್ನಲಾಗಿದೆ.

ಇಶಾ ಅವರನ್ನು ರಿಲಯನ್ಸ್‌ನ ರಿಟೇಲ್‌ ವಿಭಾಗದ ಅಧ್ಯಕ್ಷೆಯನ್ನಾಗಿ ನೇಮಿಸಲಿದ್ದಾರೆ ಎಂದು ವರದಿಯಾಗಿದೆ.

ಆಕಾಶ್ ಅಂಬಾನಿ ರಿಲಯನ್ಸ್‌ ಜಿಯೋ ನಾನ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದರು. ಈಗ ನೂತನ ಛೇರ್ಮನ್ ಆಗಿ ಸ್ಥಾನ ಪಡೆದಿದ್ದಾರೆ. ತಮ್ಮ 217 ಬಿಲಿಯನ್ ಡಾಲರ್ (ಸುಮಾರು 17 ಲಕ್ಷ ಕೋಟಿ ರೂ.) ಮೌಲ್ಯದ ಕಂಪನಿಯನ್ನು ಮುನ್ನಡೆಸಲು ಮುಖೇಶ್ ಅಂಬಾನಿ ತಮ್ಮ ಮಕ್ಕಳನ್ನು ನೇಮಿಸಲು ಮುಂದಾಗಿದ್ದು, ಇದೀಗ ಮಗಳಿಗೂ ಅಧಿಕಾರ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹೊಸ ಹುದ್ದೆ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ ಶೀಘ್ರವೇ ಕಂಪೆನಿ ಈ ಬಗ್ಗೆ ತಿಳಿಸುತ್ತದೆ ಎಂದು ವರದಿಯಾಗಿದೆ.

ಇಶಾ ಪ್ರಸ್ತುತ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕಿರಾಗಿದ್ದಾರೆ. ಇವರು ಯೇಲ್‌ ಹಾಗೂ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾಲಯಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. 2015ರಲ್ಲಿ ರಿಲಯನ್ಸ್ ವ್ಯವಹಾರಕ್ಕೆ ಸೇರಿದ್ದ ಅವರು ಜಿಯೋ ಪ್ಲಾಟ್‌ಫಾರ್ಮ್‌ಗಳು, ಜಿಯೋ ಲಿಮಿಟೆಡ್‌ನ ಮಂಡಳಿಯಲ್ಲಿದ್ದಾರೆ. ಅವರು ಡಿಸೆಂಬರ್ 2018 ರಲ್ಲಿ ಉದ್ಯಮಿ ಅಜಯ್ ಪಿರಾಮಲ್ ಅವರ ಮಗ ಆನಂದ್ ಪಿರಮಾಲ್ ಅವರನ್ನು ವಿವಾಹವಾಗಿದ್ದರು.

2014ರಲ್ಲಿ ಫ಼ೋರ್ಬ್ಸ್ ತಯಾರಿಸಿದ ವಿಶ್ವದ 36 ಜನ ಅತಿ ಪ್ರಭಾವಿತ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಮುಖೇಶ್​ ಅಂಬಾನಿ ಸೇರಿದ್ದಾರೆ. 2013ರ ಮಟ್ಟಿಗೆ, ಅವರು ಭಾರತದ ಅತಿ ಹೆಚ್ಚು ಶ್ರೀಮಂತ ವ್ಯಕ್ತಿ ಮತ್ತು ಏಷ್ಯಾದಲ್ಲಿ ಎರಡನೇ ಅತಿ ಹೆಚ್ಚು ಶ್ರೀಮಂತ ವ್ಯಕ್ತಿ. ಅಂಬಾನಿ ಅವರ ವೈಯಕ್ತಿಕ ಸಂಪತ್ತು 23.6 ಬಿಲಿಯನ್ ಡಾಲರ್​. ವಿಶ್ವದ 19 ನೇ ಶ್ರೀಮಂತ ವ್ಯಕ್ತಿ ಎಂದು ಪಟ್ಟಿ ಮಾಡಲಾಗಿದೆ. ರಿಲಯನ್ಸ್ ಮೂಲಕ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಆದ ಮುಂಬಯಿ ಇಂಡಿಯನ್ಸ್ ತಂಡದ ಮಾಲಿಕರಾಗಿದ್ದಾರೆ. 2012 ರಲ್ಲಿ, ಫೋರ್ಬ್ಸ್ ಇವರನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಮಾಲೀಕರು ಎಂದು ನೇಮಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಸಕ್ತ ವರ್ಷ ಅಗ್ನಿಶಾಮಕ ಇಲಾಖೆಗೆ 2 ಸಾವಿರ ಹುದ್ದೆಗಳಿಗೆ ನೇಮಕಾ

Wed Jun 29 , 2022
ಬೆಂಗಳೂರು: ಪ್ರಸಕ್ತ ವರ್ಷ ಅಗ್ನಿಶಾಮಕ ಇಲಾಖೆಗೆ 2 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ನಮ್ಮ ಮೆಟ್ರೋ ವತಿಯಿಂದ ಜಯನಗರದಲ್ಲಿ ನಿರ್ಮಿಸಿರುವ ‘ಅಗ್ನಿಶಾಮಕ ಠಾಣೆ’ಯ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವರು, ಅಗ್ನಿ ಶಾಮಕ ಇಲಾಖೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಪ್ರಸಕ್ತ ವರ್ಷ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಾಗಿ ಅಗ್ನಿ ಶಾಮಕ ಇಲಾಖೆಯಲ್ಲಿ ಹೊಸದಾಗಿ 2 ಸಾವಿರ […]

Advertisement

Wordpress Social Share Plugin powered by Ultimatelysocial