ಮೊದಲ ಬಾರಿಗೆ ಅಮೇರಿಕಾದಲ್ಲಿ ಜಡ್ಜ್.

 

(ನ್ಯೂಸ್ ಕಡಬ)  ಅಮೆರಿಕ, ಜ.09. ಭಾರತೀಯ ಮೂಲದ ಸಿಖ್ ಮಹಿಳೆಯೊಬ್ಬರು ಅಮೆರಿಕದಲ್ಲಿ ನ್ಯಾಯಾಧೀಶರ ಹುದ್ದೆಗೇರಿದ್ದು, ಅಮೆರಿಕದಲ್ಲಿ ನ್ಯಾಯಾಧೀಶ ಹುದ್ದೆಗೇರಿದ ಮೊದಲ ಸಿಖ್ ಮಹಿಳಾ ನ್ಯಾಯಾಧೀಶೆ ಎಂಬ ಹಿರಿಮೆಗೆ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ.

ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮನ್‌ಪ್ರೀತ್ ಅವರ ತಂದೆ 1970 ರ ದಶಕದ ಆರಂಭದಲ್ಲಿ ಯುಎಸ್‌ಗೆ ವಲಸೆ ಬಂದ ಪರಿಣಾಮ ಮನ್‌ಪ್ರೀತ್ ಅಲ್ಲೇ ಹುಟ್ಟಿ ಬೆಳೆದರು. ಈಗ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಳ್ಳೈರ್‌ನಲ್ಲಿ ವಾಸಿಸುತ್ತಿದ್ದಾರೆ. ಅಟಾರ್ನಿಯಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಹಲವರು ನಾಗರಿಕ ಹಕ್ಕುಗಳ ಸಂಘಟನೆಗಳ ಜೊತೆ ಕೆಲಸ ಮಾಡಿದ್ದಾರೆ.

ಹ್ಯಾರಿಸ್ ಕೌಂಟಿಯ ಸಿವಿಲ್ ಕೋರ್ಡ್ ನ್ಯಾಯಾಧೀಶರಾಗಿ ನೇಮಕವಾಗಿದ್ದೇನೆ ಎಂದು ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ನಿಜಕ್ಕೂ ಗೌರವದ ವಿಚಾರ ಎಂದ ಅವರು ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್‌ನ ಪರವಾಗಿ ನಿಲ್ಲುವ ಕಾಲ ಬಂದಿದೆ.

Mon Jan 9 , 2023
  ಬಾಲಿವುಡ್‌ನಲ್ಲಿ ಈಗ ಬಾಯ್ಕಾಟ್ ಟ್ರೆಂಡ್ ಜಾಸ್ತಿ ಆಗುತ್ತಿದೆ. ಅದರಲ್ಲೂ ಆಮಿರ್ ಖಾನ್‌ರ ‘ಲಾಲ್ ಸಿಂಗ್ ಚಡ್ಡಾ’ ಸೇರಿದಂತೆ ಸಾಕಷ್ಟು ಹಿಂದಿ ಸಿನಿಮಾಗಳಿಗೆ ಬಾಯ್ಕಾಟ್ ಬಿಸಿ ತಟ್ಟಿತ್ತು. ಸದ್ಯ ತೆರೆಗೆ ಬರಲು ಸಜ್ಜಾಗಿರುವ ಶಾರುಖ್ ಖಾನ್‌ ಅವರ ‘ಪಠಾಣ್‌’ ಸಿನಿಮಾದ ವಿರುದ್ಧವು ಬಾಯ್ಕಾಟ್‌ ಅಭಿಯಾನ ಜೋರಾಗಿದೆ. ಈ ಮಧ್ಯೆ ಬಹುಭಾಷಾ ನಟ ಕಿಶೋರ್‌ ಅವರು ಬಾಲಿವುಡ್‌ಗೆ ಸಪೋರ್ಟ್ ಮಾಡಿ ಒಂದು ಪೋಸ್ಟ್ ಹಾಕಿದ್ದಾರೆ. ‘ಬಾಲಿವುಡ್‌ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡ್ […]

Advertisement

Wordpress Social Share Plugin powered by Ultimatelysocial