ಶೀಘ್ರವೇ ಯಲಬುರ್ಗಾ ಕ್ಷೇತ್ರದ ಕೆರೆಗೆ ನೀರು ಹಾಲಪ್ಪ ಆಚಾರ.

ಉತ್ತರ ಕರ್ನಾಟಕದ ನೀರಾವರಿ ನಿರ್ಲಕ್ಷಕ್ಕೆ ಕಾಂಗ್ರೆಸ್ ಕಾರಣ.ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಶೀಘ್ರವೇ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ.ಯಲಬುರ್ಗಾ ತಾಲ್ಲೂಕು ಹಗೇದಾಳ ಗ್ರಾಮದ ಹತ್ತಿರ‌ ನಿರ್ಮಿಸಲಾದ ಕೆರೆ ತುಂಬುವ ಯೋಜನೆಯ ಜಾಕವೇಲ್ ಗೆ ನೀರು ಬಂದಿರುವುದನ್ನು ಪರಿಶೀಲಿಸಿದ ಮಾತನಾಡಿದರು.ಚುನಾವಣೆಯ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕಾನೂನು ಹೋರಾಟ ಮಾಡಲಾಗುತ್ತಿದೆ.ಕ್ಷೇತ್ರದ ಅನ್ನದಾತರಿಗೆ ಕೊಟ್ಟ ಮಾತಿನಂತೆ ಭರದ ನಾಡಿಗೆ ಕೃಷ್ಣೆಯನ್ನು ಹರಿಸುವ ಮೂಲಕ ಸದ್ಯದಲ್ಲಿಯೇ ಕೆರೆಗೆ ನೀರು ತುಂಬಿಸುವುದು ಸಂತಸ ತಂದಿದೆ. ಕೃಷ್ಣಾ ಬಿಸ್ಕೀಂ ಕೊಪ್ಪಳ ಏತ್ ನೀರಾವರಿ ಯೋಜನೆಗೆ ಸದ್ಯ ಕಾನೂನು ತೊಡಕು ಇದೆ.ಕಾನೂನು ಸಮಸ್ಯೆ ಬಗೆಹರಿದ ಮೇಲೆ ನೀರಾವರಿ ಯೋಜನೆ‌ ಪೂರ್ಣಗೊಳಿಸಲಾಗುವುದು.ಯಲಬುರ್ಗಾ ಬ್ರ್ಯಾಂಚ್ ನಿಂದ ಬಳೂಟಗಿ, ಬಸಾಪುರ, ಯಲಬುರ್ಗಾ ಕೆಂಪು ಕೆರೆ, ಕುದ್ರಿಕೊಟಗಿ, ಮಲಕಸಮುದ್ರ ಕೆರೆಗಳಿಗೆ ಇನ್ನೂ ಒಂದೇರಡು ವಾರದೊಳಗೆ ನೀರು ತುಂಬಿಸಲಾಗುವುದು.ಕಳೆದ 2013 ರ ವಿಧಾನ ಸಭಾ ಚುನಾವಣಾ ಪೂರ್ವದಲ್ಲಿ ತುಂಗೆಯಿಂದ ಕೃಷ್ಣೆಯವರೆಗೆ ಕಾಂಗ್ರೆಸ್ ನಡಿಗೆ, ಕೃಷ್ಣೆಯ ಕಡೆಗೆ ಎಂಬ ವಾಕ್ಯದೊಂದಿಗೆ ಪಾದಯಾತ್ರೆ ಕೈಗೊಂಡ ಪ್ರತಿ ವರ್ಷ 10. ಸಾವಿರ ಕೋಟಿ ಅನುದಾನ ನೀಡಿ, 5 ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಕೂಡಲ ಸಂಗಮನ ಮೇಲೆ‌ ಆಣೆ ಮಾಡಿದ್ದರು.ಕೊಟ್ಟ ನೀರಾವರಿ ಮಾತನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿ, ಉತ್ತರ ಕರ್ನಾಟಕ ಭಾಗವನ್ನು ನೀರಾವರಿಯಿಂದ ವಂಚಿತ ಮಾಡಿದ ಕೀರ್ತಿ ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ.ಕ್ಷೇತ್ರದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಲಗಾಮು ಇಲ್ಲದ ಕುದುರೆಯಂತೆ ಮನಸ್ಸಿಗೆ ಬಂದ ಹಾಗೇ ಪತ್ರಿಕಾ ಹೇಳಿಕೆ ನೀಡಿ ಜನರ ತಪ್ಪಿಸುತ್ತಿದ್ದಾರೆ.ಯಾವುದೇ‌ ದಾಖಲೆಗಳಿಲ್ಲದೇ ಕೆಲಸ ಮಾಡದೇ ತಪ್ಪು ಪತ್ರಿಕಾ ಹೇಳಿಕೆ‌ ಕೊಡುವ ಜಾಯಮಾನ ನನ್ನದಲ್ಲ‌.ಏನಿದ್ದರೂ ನುಡಿದಂತೆ ನಡೆದು, ಕ್ಷೇತ್ರದ ಮತದಾರರಿಗೆ ಕೊಟ್ಟ ಮಾತಿನಂತೆ ಸೇವೆ ಮಾಡುವ ಮನಸ್ಥಿತಿ ಬಿಜೆಪಿಯವರದ್ದು. ಈ ಸಂದರ್ಭದಲ್ಲಿ ರೈತರಾದ ರಾಮಣ್ಣ ಕರಿಗಾರ, ಮಂಜುನಾಥ ರೊಟ್ಟಿ, ಕಳಕಪ್ಪ ಗೌಡ್ರ ಸೇರಿದಂತೆ ಇತರರು ಮಾತನಾಡಿ, ನಮ್ಮ ಭಾಗದ ಬಹು ದಿನದ ಬೇಡಿಕೆಯಾದ ಕೆರೆ ತುಂಬುವ ಯೋಜನೆಗೆ ನೀರು ಬರುವುದಿಲ್ಲ.ಅದು ನಮ್ಮ ಮೊಮ್ಮಕ್ಕಳ ಕಾಲಕ್ಕೆ ಬಂದರೇ ಪುಣ್ಯ ಎನ್ನುತ್ತಿದ್ದೇವು. ಆದರೆ, ಹಗೇದಾಳ ಬಳಿ ಸ್ಥಾಪಿಸಲಾದ ಕೆರೆ ತುಂಬುವ ಯೋಜನೆಯ ನೀರು ಸಂಗ್ರಹ ಘಟಕಕ್ಕೆ ಇಷ್ಟು ಬೇಗ ನೀರು ಬಂದಿರುವುದು ನಮ್ಮ ಪುಣ್ಯ. ನುಡಿದಂತೆ ನಡೆದ ನೆಚ್ಚಿನ ನಾಯಕ ಜನಪ್ರತಿನಿಧಿ ಅಂದರೇ‌ ಹಾಲಪ್ಪ ಆಚಾರ ಎಂದು ಹರ್ಷ ವ್ಯಕ್ತಪಡಿಸಿದರು. ಮೊದಲ ಭಾರಿಗೆ ಕ್ಷೇತ್ರದ ಹಗೇದಾಳ ಗ್ರಾಮದ ಹತ್ತಿರ ಸ್ಥಾಪಿಸಲಾದ ಕೆರೆ ತುಂಬುವ ಯೋಜನೆಯ ಜಾಕವೇಲ್ ಗೆ ನೀರು ಬಂದಿರುವುದಕ್ಕೆ ಈ ಭಾಗದ ರೈತರು ಸಚಿವ ಹಾಲಪ್ಪ ಆಚಾರ ಅವರನ್ನು ಕರೆದುಕೊಂಡು ರೈತ ಗೀತೆಗೆ ಕುಣಿದು ಕುಪ್ಪಳಿಸಿರುವುದು ಎಲ್ಲರ ಗಮನ ಸೆಳೆಯಿತು.ನುಡಿದಂತೆ ನಡೆದ ಸಚಿವ ಹಾಲಪ್ಪ‌ ಆಚಾರಗೆ ಅನ್ನದಾತರು ಅಭಿನಂದನೆ ಸಲ್ಲಿಸಿ, ಸನ್ಮಾನಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೀಘ್ರದಲ್ಲೇ 9-ಸೀಟರ್ ಎಸ್‍ಯುವಿಯಾಗಿ ಮಿಂಚಲಿದೆ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

Wed Mar 1 , 2023
ಮಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡು ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಎಸ್‍ಯುವಿಯನ್ನು ನ್ಯೂ ಜನರೇಷನ್ ಜೊತೆಗೆ ಮಾರಾಟ ಮಾಡಲಾಗುತ್ತದೆ, ನವೀಕರಿಸಿದ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯು ಗಟ್ಟಿಮುಟ್ಟಾದ ನಿರ್ಮಾಣ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸಿಗ್ನೇಚರ್ ಬೋಲ್ಡ್ ಲುಕ್‌ನೊಂದಿಗೆ ಎಸ್‍ಯುವಿ ದೇಶದಾದ್ಯಂತ ಗ್ರಾಹಕರನ್ನು […]

Advertisement

Wordpress Social Share Plugin powered by Ultimatelysocial