ಮೊದಲು ಶ್ರೀರಾಮಸೇನೆ, ಭಜರಂಗದಳ, ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡಿಬೇಕು.

 

ಶಿವಮೊಗ್ಗ: ಮೊದಲು ಶ್ರೀರಾಮಸೇನೆ, ಭಜರಂಗದಳ, ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡಿಬೇಕು. ಅವರಿಗೆ ಹೊಡೆದರೆ ಎಲ್ಲವೂ ಸರಿಯಾಗುತ್ತದೆ, ಸಮಾಜವು ಸರಿಯಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇರುವುದು ಯಾರದ್ದು‌?

ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯ್ತು, 144 ಸೆಕ್ಷನ್ ಹಾಕಿದ್ದು ಯಾರು? ಈಶ್ವರಪ್ಪ ಯಾವ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಉಲ್ಲಂಘನೆ ಮಾಡಿದ್ದು ಯಾರು‌.? ಶವಯಾತ್ರೆ ಮಾಡಿದ್ದು ಯಾರು‌? ಹರ್ಷನ ಕುಟುಂಬಕ್ಕೆ 25 ಲಕ್ಷ ಕೊಡಿಸಿದ್ದು ಯಾರು? ನಾನು ಕೂಡ ಹರ್ಷನ ಕೊಲೆ ಖಂಡಿಸಿದ್ದೇನೆ. ಯಾರೇ ಅದ್ರೂ ಕೊಲೆಗಾರರಿಗೆ ಶಿಕ್ಷೆಯಾಗಬೇಕು. ಆದರೆ, ಒಂದು ಕಣ್ಣಿಗೆ ಬೆಣ್ಣೆ. ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಮಾಡಬಾರದು ಎಂದರು.

ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಸರ್ಕಾರ ಪರಿಹಾರ ಕೊಟ್ಟಿದೆ. ಅದೇ ಬೆಳ್ತಂಗಡಿಯ ದಿನೇಶ್ ಕೊಲೆಯಾದಾಗ ಕುಟುಂಬಕ್ಕೆ ಎಷ್ಟು ಕೊಟ್ಟರು? ಅವನ ಕೊಲೆ ಮಾಡಿದವರು ಭಜರಂಗದಳದವರು. ನರಗುಂದದಲ್ಲಿ ಕೊಲೆಯಾದ ಮುಸ್ಲಿಂಗೆ ಎಷ್ಟು ಪರಿಹಾರ ಕೊಟ್ಟರು? ನರಗುಂದದಲ್ಲಿ ಕೊಲೆ ಮಾಡಿದವರು ಶ್ರೀ ರಾಮಸೇನೆಯವರು. ಕೊಲೆಯಾದವರಿಗೆ ಒಂದು ಪೈಸೆ ಸಹ ಪರಿಹಾರ ಕೊಡಲಿಲ್ಲ. ಯಾಕೇ ಹೀಗೆ ಎಂದು ಪ್ರಶ್ನಿಸಿದರು.

ನಮ್ಮ ಕಾಲದಲ್ಲಿ ಅಷ್ಟು ಕೊಲೆಯಾಯ್ತು ಎನ್ನುತ್ತಾರೆ. ವಿಪಕ್ಷದಲ್ಲಿದ್ದ ಇವರು ಕಡ್ಲೇಪುರಿ ತಿನ್ನತ್ತಿದ್ದರಾ? ಅವರು ಕಾಲದಲ್ಲಿ ನಡೀತು, ಇವಾಗ ನಡೀತು ಅಂದರೆ ಏನು ಪ್ರಯೋಜನ. ನಾವು ಪರಿಹಾರ ಕೊಡದಿದ್ದಾಗ ನೀವು ಯಾಕೆ ಕೇಳಲಿಲ್ಲ. ಅಧಿಕೃತ ವಿರೋಧ ಪಕ್ಷದಲ್ಲಿದ್ದು ಏನು ಮಾಡಿದ್ದರಿ, ನಾನೀಗ ವಿರೋಧ ಪಕ್ಷದಲ್ಲಿದ್ದು ಕೇಳುತ್ತಿದ್ದೇನೆ. ಅವರು ತಪ್ಪು ಮುಚ್ಚಿಕೊಳ್ಳೊಕೆ ಹಿಂದಿನ ಸರ್ಕಾರದ ಬಗ್ಗೆ ಮಾತನಾಡ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಚುನಾವಣೆಗೆ ತಯಾರಿ ನಡೆಯುತ್ತಿದೆ. ಯಾವಾಗಲೇ ಚುನಾವಣೆ ನಡೆದರರೂ ನಾವು ಸಿದ್ಧ. ಚುನಾವಣೆಗೆ ಬೇಕಾದಷ್ಟು‌ ವಿಚಾರ ಇದೆ. ಬ್ರಹ್ಮಾಂಡ ಭ್ರಷ್ಟಾಚಾರ ಇದೆಯಲ್ಲಾ ಎಂದ ಅವರು, ಪಕ್ಷದ ಆಂತರಿಕ ವಿಚಾರಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಅಸಮಾಧಾನ ಇಲ್ಲ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ:ಮಂಗಳೂರು ಸಮೀಪದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರೂ., ನೀಡಿದ 80 ವರ್ಷದ ಭಿಕ್ಷುಕ!

Sun Apr 24 , 2022
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭಕ್ತರಿಂದ ದೇವಾಲಯಗಳ ಪ್ರವೇಶಕ್ಕೆ ಭಿಕ್ಷೆ ಬೇಡುತ್ತಿರುವ 80 ವರ್ಷದ ಮಹಿಳೆಯೊಬ್ಬರು ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಪೊಳಲಿಯ ಕ್ಷೇತ್ರ ರಾಜರಾಜೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರೂ. ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಚಗೋಡು ಗ್ರಾಮದವರಾದ ಅಷ್ಟಮಠಾಧೀಶರಾದ ಅಶ್ವಥಮ್ಮ ಅವರು ತಮ್ಮ ಪತಿ ತೀರಿಕೊಂಡ ನಂತರ ಹದಿನೆಂಟು ವರ್ಷಗಳಿಂದ ವಿವಿಧ ದೇವಸ್ಥಾನಗಳ ಬಳಿ ಭಿಕ್ಷೆ ಬೇಡುತ್ತಿದ್ದಾರೆ. ತನ್ನ ಮಕ್ಕಳು ಸತ್ತಾಗ ವೃದ್ಧೆ ಮತ್ತೊಂದು […]

Advertisement

Wordpress Social Share Plugin powered by Ultimatelysocial