ಶೀಘ್ರದಲ್ಲೇ 9-ಸೀಟರ್ ಎಸ್‍ಯುವಿಯಾಗಿ ಮಿಂಚಲಿದೆ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಹೀಂದ್ರಾ ಕಂಪನಿಯ ಗೇಮ್ ಚೇಂಜರ್ ಎಸ್‍ಯುವಿ ಸ್ಕಾರ್ಪಿಯೋ ಎರಡು ದಶಕಗಳಿಂದ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು.

ಈ ಎಸ್‍ಯುವಿಯನ್ನು ನ್ಯೂ ಜನರೇಷನ್ ಜೊತೆಗೆ ಮಾರಾಟ ಮಾಡಲಾಗುತ್ತದೆ,

ನವೀಕರಿಸಿದ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯು ಗಟ್ಟಿಮುಟ್ಟಾದ ನಿರ್ಮಾಣ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸಿಗ್ನೇಚರ್ ಬೋಲ್ಡ್ ಲುಕ್‌ನೊಂದಿಗೆ ಎಸ್‍ಯುವಿ ದೇಶದಾದ್ಯಂತ ಗ್ರಾಹಕರನ್ನು ಆಕರ್ಷಿಸಿದೆ.ಅದರ ಜನಪ್ರಿಯತೆಯಿಂದಾಗಿ, ಮೂರನೇ ತಲೆಮಾರಿನ ಮಾದರಿಯ ಆಗಮನದ ಹೊರತಾಗಿಯೂ, ಸ್ಕಾರ್ಪಿಯೊ ಎನ್, ಮಹೀಂದ್ರಾ ಎರಡನೇ ತಲೆಮಾರಿನ ಮಾದರಿಯನ್ನು ಕೂಡ ಮಾರಾಟದಲ್ಲಿ ಇರಿಸಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಈ ಮಾದರಿಗೆ ಸ್ಕಾರ್ಪಿಯೊ ಕ್ಲಾಸಿಕ್ ಎಂದು ಮರುನಾಮಕರಣ ಮಾಡಿದರು.

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ರಿಫ್ರೆಶ್ ಲುಕ್ ಮತ್ತು ಪವರ್‌ಟ್ರೇನ್ ಅಪ್‌ಗ್ರೇಡ್‌ಗಳು ಎಸ್‌ಯುವಿಯ ಮಾರಾಟಕ್ಕೆ ಒಲವು ತೋರುತ್ತಿವೆ. ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಸಹ ಖರೀದಿದಾರರಿಂದ ಪಾಸಿಟಿವ್ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ, ಏಕೆಂದರೆ ಇದು ಜನಪ್ರಿಯ ನೋಟ ಮತ್ತು ಭಾವನೆಯನ್ನು ಉಳಿಸಿಕೊಂಡಿದೆ. ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಸ್ಕಾರ್ಪಿಯೊ ಕ್ಲಾಸಿಕ್ ಎಸ್‌ಯುವಿಯನ್ನು ಆರ್‌ಡಿಇ ಕಂಪ್ಲೈಂಟ್ ಎಂಜಿನ್‌ನೊಂದಿಗೆ ಅಪ್‌ಗ್ರೇಡ್ ಮಾಡಲಿದೆ. ಇದಲ್ಲದೆ, ಈ ಎಸ್‍ಯುವಿ ಹೊಸ ಮಿಡ್-ಸ್ಪೆಕ್ S5 ರೂಪಾಂತರವನ್ನು ಪಡೆಯುತ್ತದೆ.

ಹೊಸ S5 ರೂಪಾಂತರವು ಬೇಸ್-ಸ್ಪೆಕ್ S ಮತ್ತು ಟಾಪ್-ಸ್ಪೆಕ್ S11 ರೂಪಾಂತರದ ನಡುವೆ ಇರುತ್ತದೆ. ಬೇಸ್-ಸ್ಪೆಕ್ S ರೂಪಾಂತರವು ಕೇವಲ 9-ಸೀಟ್ ಆಯ್ಕೆಯನ್ನು ಹೊಂದಿದ್ದರೆ, S5 ಮತ್ತು S11 ರೂಪಾಂತರಗಳು, 7 ಮತ್ತು 9 ಸೀಟ್ ಆಯ್ಕೆಗಳೊಂದಿಗೆ ಬರುತ್ತವೆ. ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಎಸ್‍ಯುವಿಯ ಬೇಸ್-ಸ್ಪೆಕ್ S 9-ಸೀಟರ್ ಮಾದರಿಯು ಎರಡನೇ ಸಾಲಿನಲ್ಲಿ ಬೆಂಚ್ ಸೀಟ್ ಮತ್ತು ಹಿಂಭಾಗದಲ್ಲಿ 2×2 ಸೈಡ್ ಫೇಸಿಂಗ್ ಬೆಂಚ್ ಸೀಟ್‌ಗಳೊಂದಿಗೆ ಬರುತ್ತದೆ.

ಟಾಪ್-ಸ್ಪೆಕ್ ಮಾಡೆಲ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಮತ್ತು ಬೆಂಚ್ ಮಾದರಿಯ ಸೀಟುಗಳೆರಡರಲ್ಲೂ ಲಭ್ಯವಿದೆ. ಇದೇ ರೀತಿಯ ಸೀಟ್ ವಿನ್ಯಾಸವನ್ನು S5 ಟ್ರಿಮ್‌ನಲ್ಲಿಯೂ ನೀಡಲಾಗುತ್ತದೆ. ಇದರ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಹೊಸ ರೂಪಾಂತರವು ಕವರ್, ಆಡಿಯೊ ಸಿಸ್ಟಮ್, ಚಾಲಿತ ORVM ಗಳು, ಡ್ಯುಯಲ್ ಏರ್‌ಬ್ಯಾಗ್‌ಗಳು, ABS ಜೊತೆಗೆ EBD ಮತ್ತು ಬ್ರೇಕ್ ಅಸಿಸ್ಟ್ ಅನ್ನು ಪಡೆಯುವ ಸಾಧ್ಯತೆಯಿದೆ.

ಮಹೀಂದ್ರಾ ಕಂಪನಿಯು ಹಳೆಯ ಸ್ಕಾರ್ಪಿಯೋ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ವಿನ್ಯಾಸದಲ್ಲಿ ತುಸು ಹೊಸ ಬದಲಾವಣೆ ತರಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಕೆಲವು ಪ್ರೀಮಿಯಂ ಫೀಚರ್ಸ್ ಸಹ ಸ್ಕಾರ್ಪಿಯೋ ಕ್ಲಾಸಿಕ್ ಎಸ್‍ಯುವಿಯನ್ನು ನೀಡಲಾಗಿದೆ. ಸ್ಕಾರ್ಪಿಯೋ-ಎನ್ ಮಾದರಿಗಿಂತ ಇದು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸ್ಕಾರ್ಪಿಯೋ-ಎನ್ ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿದ್ದರೆ ಸ್ಕಾರ್ಪಿಯೋ-ಕ್ಲಾಸಿಕ್ ಮಾದರಿಯು ಈ ಹಿಂದಿನ ತಲೆಮಾರಿನ ಫೀಚರ್ಸ್ ಗಳೊಂದಿಗೆ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಈ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯ ಮುಂಭಾಗದ ಡಿಸೈನ್ ಮತ್ತು ಕ್ಯಾಬಿನ್ ಒಳಾಂಗಣದಲ್ಲಿ ಕೂಡ ಕೆಲವು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಬದಲಾವಣೆಯ ನಂತರ ನವೀಕರಿಸಿದ ಮಾದರಿಯು ಹಳೆಯ ಮಾದರಿಯ ವಿನ್ಯಾಸವನ್ನೇ ನೆನಪಿಸುತ್ತದೆ. ಈ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಈ ಎಸ್‍ಯುವಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಇದು 132 ಬಿಎಚ್‌ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಹಳೆಯ ಮಾದರಿಯಲ್ಲಿನ ಎಂಜಿನ್‌ಗಿಂತಲೂ 55 ಕೆ.ಜಿ ಕಡಿಮೆ ತೂಕ ಹೊಂದಿದೆ. ಇದರೊಂದಿಗೆ ಹೊಸ ಮಾದರಿಯು ಈ ಹಿಂದಿನಂತೆ ಹೊರನೋಟ ಹೊಂದಿದ್ದರು ಕೆಲವು ಹೊಸ ಫೀಚರ್ಸ್‌ಗಳು ಕಾರಿನ ನೋಟಕ್ಕೆ ಪ್ರಿಮಿಯಂ ಮೆರಗು ನೀಡಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೌಕರರ ಮುಷ್ಕರ ಬಿಕೋ ಎಂದ ಕಚೇರಿಗಳು ಶಾಲೆಗೆಂದು ಬಂದು ವಿದ್ಯಾರ್ಥಿಗಳು.

Wed Mar 1 , 2023
  ನೌಕರರ ಮುಷ್ಕರ ಬಿಕೋ ಎಂದ ಕಚೇರಿಗಳು ಶಾಲೆಗೆಂದು ಬಂದು ವಿದ್ಯಾರ್ಥಿಗಳು ಸರ್ಕಾರಿ ನೌಕರರ ಮುಷ್ಕರ ಬೀಕೋ ಎಂದ ಸರ್ಕಾರಿ ಕಚೇರಿಗಳು ನಿಪ್ಪಾಣಿ ತಾಲೂಕಿನಲ್ಲಿ ಕಂಡುಬಂದ ದೃಶ್ಯಗಳು ಇಲಾಖೆಗಳಿಗೆ ಬಂದು ವಾಪಸ್ಸು ಆಗುತ್ತಿರುವ ಸಾರ್ವಜನಿಕರು ಶಾಲೆಗೆಂದು ಬಂದ ವಿದ್ಯಾರ್ಥಿಗಳು ಮನೆಗೆ ವಾಪಸ್   ಕೆಲಸ ಕಾರ್ಯಗಳಿಗಾಗಿ ಬಂದ ಸಾರ್ವಜನಿಕರಿಂದ ಹೀಡಿ ಶಾಪ್   ಬಿಕೋ ಎನ್ನುತ್ತಿರುವ ಶಾಲಾ ಕಾಲೇಜುಗಳು ಮತ್ತು ಕಚೇರಿಗಳು ಸರ್ಕಾರಿ ನೌಕರರು ಮನೆಯಲ್ಲಿ ಕುಳಿತು ಗೈರಹಜರು.   ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial