ಕಾಂಗ್ರೆಸ್​​ನ ಗೃಹ ಲಕ್ಷ್ಮೀಗೆ ಪ್ರತಿಯಾಗಿ, ಗೃಹಿಣಿ ಶಕ್ತಿ ಅನ್ನೋ ಅಸ್ತ್ರ ಪ್ರಯೋಗಿಸಿದೆ.

ರಾಜ್ಯದ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಎಂ ಬಸವರಾಜ್​​ ಬೊಮ್ಮಾಯಿ ಸರ್ಕಾರ ಬಜೆಟ್ ಮಂಡಿಸಿದೆ. ಇದರಲ್ಲಿ ರೈತರು, ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡುವ ಕೆಲಸ ಮಾಡಿದೆ. ಇದೆಲ್ಲದರಾಚೆಗೆ, ಬೊಮ್ಮಾಯಿ ಸರ್ಕಾರ, ಮಹಿಳೆಯರನ್ನು ಕೇಂದ್ರೀಕರಿಸಿ ಆಯವ್ಯಯ ಮಂಡಿಸಿದೆ.

ಕಾಂಗ್ರೆಸ್​​ನ ಗೃಹ ಲಕ್ಷ್ಮೀಗೆ ಪ್ರತಿಯಾಗಿ, ಗೃಹಿಣಿ ಶಕ್ತಿ ಅನ್ನೋ ಅಸ್ತ್ರ ಪ್ರಯೋಗಿಸಿದೆ.

ಈ ಬಾರಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಮಹಿಳಾ ಮತಗಳೇ ನಿರ್ಣಾಯಕ. ಅಳೆದು ತೂಗಿ ಮಹಿಳೆಯರನ್ನೇ ಸೆಳೆಯುವ ಸಲುವಾಗಿ ಮೂರೂ ಪಕ್ಷಗಳು ಕಸರತ್ತು ಮಾಡ್ತಿವೆ. ಚುನಾವಣೆ ಘೋಷಣೆ ಮುನ್ನವೇ ಗೃಹ ಲಕ್ಷ್ಮೀ ಯೋಜನೆಯಿಂದಲೇ ಕಾಂಗ್ರೆಸ್​ ಅಸ್ತ್ರ ಪ್ರಯೋಗಿಸಿತ್ತು. ಈ ಯೋಜನೆಯ ಮೂಲಕ ಪ್ರತಿ ತಿಂಗಳು 2 ಸಾವಿರ ಸಹಾಯ ಧನ ನೀಡೋದಾಗಿ ಘೋಷಿಸಿತ್ತು. ಇದಕ್ಕೆ ತಿರುಗೇಟು ನೀಡಲು ರಾಜ್ಯ ಬಿಜೆಪಿ ಸರ್ಕಾರ, ಗೃಹಣಿ ಶಕ್ತಿ ಅನ್ನೋ ಬ್ರಹ್ಮಾಸ್ತ್ರ ಬಿಟ್ಟಿದೆ.

ಕಾಂಗ್ರೆಸ್​ ಯೋಜನೆಗೆ ತಿರುಗೇಟು ಕೊಟ್ಟ ಬಿಜೆಪಿ ಸರ್ಕಾರ
2023-24ನೇ ಸಾಲಿನ ಬಜೆಟ್​ನಲ್ಲಿ ಸಿಎಂ ಬೊಮ್ಮಾಯಿ ಸರ್ಕಾರ, ಮಹಿಳೆಯರಿಗೆ ಗಿಫ್ಟ್​ ನೀಡಿದೆ. ಕುಟುಂಬ ನಿರ್ವಹಣೆಯೊಂದಿಗೆ ಮನೆಯ ಆರ್ಥಿಕ ಸುಧಾರಣೆಗಾಗಿ ಶ್ರಮಿಸುವ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನ ನೀಡಿದೆ. ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಬಜೆಟ್​ನಲ್ಲಿ ಒಟ್ಟು 46 ಸಾವಿರ 278 ಕೋಟಿ ರೂಪಾಯಿ ಮೀಸಲಿಟ್ಟಿದೆ.

ಗೃಹಿಣಿ ಶಕ್ತಿ ಯೋಜನೆ

  • 45 ಸಾವಿರ ಮಹಿಳಾ ಸ್ವಸಹಾಯ ಗುಂಪುಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ
  • ಈ ವರ್ಷ ಗೃಹಿಣಿ ಶಕ್ತಿ ಯೋಜನೆ ಜಾರಿಗೊಳಿಸಲು ಸರ್ಕಾರ ನಿರ್ಧಾರ
  • ಕೃಷಿ ಕಾರ್ಮಿಕ ಮಹಿಳೆಯರಿಗೆ ಪ್ರತಿ ತಿಂಗಳು 500 ರೂ ಸಹಾಯಧನ
  • ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ
  • 30 ಲಕ್ಷ ಮಹಿಳೆಯರಿಗೆ ಪಾಸ್​.. ಯೋಜನೆಗಾಗಿ 1,000 ಕೋಟಿ ಮೀಸಲು
  • ಸ್ತ್ರೀ ಸಾಮರ್ಥ್ಯ ಯೋಜನೆಯಡಿ 1 ಲಕ್ಷ ಸಮುದಾಯ ಬಂಡವಾಳ ನಿಧಿ

ಆಶಾ ಕಾರ್ಯಕರ್ತೆಯರ ಸಹಾಯಧನ
ವಿಶೇಷವೆಂದ್ರೆ, ಆಯಸಿಡ್‌ ದಾಳಿಗೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ 10 ಸಾವಿರ ರೂ. ಮಾಶಾಸನ ನೀಡೋದಾಗಿ ಘೋಷಿಸಿದೆ. ರಾಜ್ಯದಲ್ಲಿನ ಎಲ್ಲಾ ವಿದ್ಯಾರ್ಥಿನಿಯರಿಗೆ ವಿದ್ಯಾವಾಹಿನಿ ಎಂಬ ಯೋಜನೆ ಜಾರಿಗೆ ತರಲಾಗಿದೆ. ಸ್ವಚೇತನ ಯೋಜನೆಯಡಿ 5 ಸಾವಿರ ವಿಶೇಷಚೇತನರಿಗೆ ಸ್ವಯಂಚಾಲಿಯ ದ್ವಿಚಕ್ರ ವಾಹನ ನೀಡೋದಾಗಿ ಭರವಸೆ ನೀಡಿದ್ದಾರೆ. ಇನ್ನು 250 ಅಂಗನವಾಡಿ ಕಟ್ಟಡಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡೋದು. ಅಂಗನವಾಡಿ ಕೇಂದ್ರ ಸಜ್ಜುಗೊಳಿಸಲು ಅಗತ್ಯ ಪಠ್ಯವಸ್ತುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುದು. ಮೇಲ್ವಿಚಾರಕಿಯರು, ಕಾರ್ಯಕರ್ತೆಯರಿಗೆ ತರಬೇತಿ ನೀಡಲು 30 ಕೋಟಿ ಮೀಸಲಿಡಲಾಗಿದೆ. ಉಪಧನವನ್ನು ನೀಡಲು ಸುಮಾರು 40 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5 ಸಾವಿರದ 676 ಕೋಟಿ ಮೀಡಲಾಗಿದೆ.

ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ಬೆನ್ನಲ್ಲೇ, ರಾಜ್ಯದ ಪ್ರತಿ ಮಹಿಳೆಗೆ ಗೃಹ ಲಕ್ಷ್ಮಿ ಯೋಜನೆಯನ್ನ ಕಾಂಗ್ರೆಸ್ ಘೋಷಿಸಿತ್ತು.. ಗೃಹಲಕ್ಷ್ಮಿ ಯೋಜನೆಗೆ ಟಕ್ಕರ್‌ ನೀಡುವ ಸಲುವಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ, ಮಹಿಳೆಯರ ಮತಗಳನ್ನು ಸೆಳೆಯಲು ಸರ್ಕಾರ, ಅಳೆದು ತೂಗಿ ಮತ್ತು ತಾಳೆ ಹಾಕಿ, ಮಹತ್ವದ ಘೋಷಣೆಗಳನ್ನ ಮಾಡಿದೆ. ಈ ಮೂಲಕ ರಾಜ್ಯದ ಪ್ರತಿ ಮನೆಯ ಒಡೆತಿಯ ಮತಗಳನ್ನ ಸೆಳೆಯಲು ಸರ್ಕಾರ ಬಜೆಟ್​​​​ನಲ್ಲಿ ಗಿಫ್ಟ್​ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಸೇನೆ ಚಿಹ್ನೆ ಶಿಂಧೆ ಬಣದ ಪಾಲಾಗಿದ್ದಕ್ಕೆ ಉದ್ಧವ್ ಠಾಕ್ರೆ ಕಿಡಿ

Sat Feb 18 , 2023
ಪ್ರಜಾಪ್ರಭುತ್ವವು ಮೃತಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಈಗ ಕೆಂಪುಕೋಟೆಯಲ್ಲಿ ನಿಂತು ಘೋಷಿಸಬಹುದು ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.ಮುಂಬೈ: ಶಿವಸೇನಾ  ಪಕ್ಷದ ಚಿಹ್ನೆ ಮತ್ತು ಹೆಸರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ , ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದ್ದಾರೆ. ಶಿಂಧೆ ಅವರು ಬಂಡಾಯವೆದ್ದು ಬಿಜೆಪಿ ಜತೆ ಕೈಜೋಡಿಸಿದ ಸುಮಾರು 8 ತಿಂಗಳ ನಂತರ ಚುನಾವಣಾ ಆಯೋಗ ಪಕ್ಷದ ಹೆಸರು ಮತ್ತು […]

Advertisement

Wordpress Social Share Plugin powered by Ultimatelysocial