ಜನರಿಗೆ ಇದಾಗಲೇ ಆಕರ್ಷಕ ಭರವಸೆಗಳನ್ನೂ ನೀಡಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಜನರಿಗೆ ಕೊಟ್ಟಿದ್ದ ‘

ಚಂಡೀಗಢ: ಪಂಜಾಬ್‌ನಲ್ಲಿ ಚುನಾವಣೆಯ ಕಾವು ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್‌ ಸೇರಿದಂತೆ ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷ (ಆಪ್‌) ನಡುವೆಯೂ ಹಣಾಹಣಿ ಏರ್ಪಟ್ಟಿದೆ.ಆಮ್‌ ಆದ್ಮಿಯ ನಾಯಕ ಅರವಿಂದ ಕೇಜ್ರಿವಾಲ್‌ ಪಂಜಾಬ್‌ನಲ್ಲಿಯೂ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.ಜನರಿಗೆ ಇದಾಗಲೇ ಆಕರ್ಷಕ ಭರವಸೆಗಳನ್ನೂ ನೀಡಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಜನರಿಗೆ ಕೊಟ್ಟಿದ್ದ ‘ಆಪ್‌’ ಇದಕ್ಕೆ ‘ಜನತಾ ಚುನೇಗಿ ಅಪ್ನಾ ಸಿಎಂ’ ಎಂಬ ಹೆಸರು ನೀಡಿತ್ತು. ನಂತರ ಜನರ ಅನುಮತಿ ಮೇರೆಗೆ ಹಾಸ್ಯನಟರಾಗಿದ್ದ ಭಗವಂತ್​ ಮನ್​ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ ಎಂದು ಕೇಜ್ರಿವಾಲ್‌ ಹೇಳಿದ್ದರು.ಇದೀಗ ಇವರ ಬಗ್ಗೆ ಮಾತನಾಡಿದ ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಚನ್ನಿ, ಭಗವಂತ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್‌ನ ಭಟಿಂಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಭಗವಂತ್​ ಮನ್​ ಒಬ್ಬ ಕುಡುಕ ಮತ್ತು ಅನಕ್ಷರಸ್ಥ ವ್ಯಕ್ತಿ. ಆಪ್ ಇಂಥ ವ್ಯಕ್ತಿಯ ಕೈಯಲ್ಲಿ ಪಂಜಾಬ‌ ಕೊಡಲು ಹೊರಟಿದೆ. 12 ತರಗತಿ ಪಾಸು ಮಾಡಲು ಮೂರು ವರ್ಷ ತೆಗೆದುಕೊಂಡದ್ದೂ ಅಲ್ಲದೇ ಅವರು ಕುಡುಕರು. ಇಂಥವರ ಕೈಗೆ ನಮ್ಮ ರಾಜ್ಯ ಕೊಡುವುದು ಹೇಗೆ ಎಂದು ಜನತೆಯನ್ನು ಪ್ರಶ್ನಿಸಿದ್ದಾರೆ.ಹಾಸ್ಯನಟರಾಗಿದ್ದ ಭಗವಂತ್​ ಮನ್​, ಸಂಗ್ರೂರ್​​ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಸಂಸದರಾದವರು. ಈ ಬಾರಿ ಧುರಿಯಿಂದ ಸ್ಪರ್ಧಿಸುತ್ತಿದ್ದಾರೆ.

ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರುತಿ ತನ್ನ ಸಬ್‌ಸ್ಕ್ರೈಬ್ ಕಾರ್ಯಕ್ರಮಕ್ಕಾಗಿ ಮಹೀಂದ್ರಾ ಫೈನಾನ್ಸ್‌ನಿಂದ ಕ್ವಿಕ್ಲಿಜ್‌!

Thu Feb 17 , 2022
ಮಾರುತಿ ತನ್ನ ಸಬ್‌ಸ್ಕ್ರೈಬ್ ಕಾರ್ಯಕ್ರಮಕ್ಕಾಗಿ ಮಹೀಂದ್ರಾ ಫೈನಾನ್ಸ್‌ನಿಂದ ಕ್ವಿಕ್ಲಿಜ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. Quiklyz ಮಾರುತಿ ಶ್ರೇಣಿಯ ವಾಹನಗಳಿಗೆ ಬಿಳಿ ಫಲಕದ ಚಂದಾದಾರಿಕೆಯನ್ನು ನೀಡುತ್ತದೆ. ಕಂಪನಿಯು ತನ್ನ ಚಂದಾದಾರಿಕೆ ಕಾರ್ಯಕ್ರಮಕ್ಕೆ ಕೋಲ್ಕತ್ತಾ ಮಾರುಕಟ್ಟೆಯನ್ನು ಮತ್ತಷ್ಟು ಸೇರಿಸಿದೆ. ಜುಲೈ 2020 ರಲ್ಲಿ ಪ್ರಾರಂಭವಾದ ಮಾರುತಿ ಸುಜುಕಿ ಸಬ್‌ಸ್ಕ್ರೈಬ್ ಎನ್ನುವುದು ಗ್ರಾಹಕರು ವಾಹನವನ್ನು ಖರೀದಿಸದೆಯೇ ಕಾರನ್ನು ಹೊಂದುವುದನ್ನು ಆನಂದಿಸಬಹುದಾದ ಕಾರ್ಯಕ್ರಮವಾಗಿದೆ. ಗ್ರಾಹಕರು ಮಾರುತಿ ಸುಜುಕಿ ವಾಹನಗಳ ಶ್ರೇಣಿಯನ್ನು ಆಯ್ಕೆ ಮಾಡಬಹುದು, ಬಹು ಅವಧಿಯ ಆಯ್ಕೆಗಳಿಗಾಗಿ, […]

Advertisement

Wordpress Social Share Plugin powered by Ultimatelysocial