ದೇಶಾದ್ಯಂತ 18-59 ವರ್ಷ ವಯಸ್ಸಿನ ಶೇ.86 ಕ್ಕಿಂತ ಹೆಚ್ಚಿನ ಜನರಿಗೆ ಸಂಪೂರ್ಣವಾಗಿ ಕರೋನಾ ಲಸಿಕೆ!

 

 ಕರೋನಾ ಲಸಿಕೆ ಹಾಕಲಾಗಿದ್ದು, ದೇಶದಲ್ಲಿ ನೀಡಲಾದ ಲಸಿಕೆ ಪ್ರಮಾಣಗಳ ಸಂಖ್ಯೆ 188 ಕೋಟಿ ದಾಟಿದೆ. ಮಂಗಳವಾರದವರೆಗೆ ಸುಮಾರು 19 ಲಕ್ಷಕ್ಕೂ ಹೆಚ್ಚಿನ (19,67,717) ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ.

ಮಂಗಳವಾರ 18-59 ವರ್ಷ ವಯಸ್ಸಿನ ಸುಮಾರು 46,044 ಜನರಿಗೆ ಕೋವಿಡ್ ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಈ ವಯಸ್ಸಿನ ಗುಂಪಿಗೆ ನೀಡಲಾದ ಒಟ್ಟು ಕರೋನಾ ಡೋಸ್‌ಗಳ ಸಂಖ್ಯೆ 5,15,290 ಕ್ಕೆ ತಲುಪಿದೆ. ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವರು ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಏಪ್ರಿಲ್ 10 ರಿಂದ ಖಾಸಗಿ ಲಸಿಕೆ ಕೇಂದ್ರಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟಿಗೆ ಕೋವಿಡ್​ ಲಸಿಕಾ ಡೋಸ್‌ಗಳನ್ನು ನೀಡಲು ಪ್ರಾರಂಭಿಸಲಾಗಿತ್ತು. ಎರಡನೇ ಡೋಸ್ ಪಡೆದ ಒಂಬತ್ತು ತಿಂಗಳನ್ನು ಪೂರೈಸಿದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್​ ಡೋಸ್‌ ಪಡೆಯಲು ಅರ್ಹರಾಗಿರುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗೃಹ ಸಚಿವರನ್ನು ವಜಾಗೊಳಿಸಲು ಆಪ್ ರಾಜ್ಯಪಾಲರಿಗೆ ಮನವಿ!

Wed Apr 27 , 2022
ಪಿಎಸ್‌ಐ ಪರೀಕ್ಷೆ ಅಕ್ರಮ ತಡೆಯಲು ವಿಫಲರಾಗಿದ್ದಾರೆ,ಅರಗ ಜ್ಞಾನೇಂದ್ರರಿಗೆ ಅನುಭವದ ಕೊರತೆ ಇದೆ. ಸಾಮರ್ಥ್ಯ ಇರುವವರಿಗೆ ಗೃಹ ಸಚಿವ ಸ್ಥಾನ ಕೊಡಿ 52 ಸಾವಿರ ಯುವಜನ ಪರೀಕ್ಷೆ ಬರ್ದಿದ್ದಾರೆ. ಸರ್ಕಾರ‌ ತನಿಖೆ ಮುಗಿಸುವವರೆಗೆ ಪರೀಕ್ಷೆ ನಡೆಸಲ್ಲ ಅಂತ‌ ಸರ್ಕಾರ ಹೇಳ್ತಿದೆ.ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರಿಗೆ ಇದು ಅನ್ಯಾಯ ಆಗುತ್ತದೆ. ವಯಸ್ಸು ಮೀರಿದರೆ ಮತ್ತೆ ಪರೀಕ್ಷೆ ಬರೆಯಲು ಸಾಧ್ಯವಾಗೋದಿಲ್ಲ ಸರ್ಕಾರದ ಹಸ್ತಕ್ಷೇಪ ಇಲ್ಲದೆ ಕಾಲಮಿತಿಯೊಳಗೆ ತನಿಖೆ ಮುಗಿಯಬೇಕೆಂದು ಮನವಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial