ಮಗ ಟಾಪ್ ನಟನಾಗಿ 20 ವರ್ಷ ಆದ್ರೂ ಒಮ್ಮೇನೂ ಶೂಟಿಂಗ್ ಸೆಟ್​ಗೆ ಹೋಗಿಲ್ಲ.

ಟರಾದ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ದೇಶಮುಖ್ ಅಭಿನಯದ ‘ವೇದ್’ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಹಿಟ್ ಆಗಿ ಹೊರಹೊಮ್ಮಿದೆ.

ಈ ಸಿನಿಮಾ ಈಗ ಬಹಳ ಜನಪ್ರಿಯವಾಗುತ್ತಿದೆ.

ಅಲ್ಲದೆ ರಿತೇಶ್ ಮತ್ತು ಜೆನಿಲಿಯಾ ಜೋಡಿ ಮತ್ತೊಮ್ಮೆ ಹಿಟ್ ಎಂಬುದನ್ನು ಸಾಬೀತುಪಡಿಸುತ್ತಿದೆ.

‘ವೇದ್’ ಸಂದರ್ಭದಲ್ಲಿ ರಿತೇಶ್ ಮತ್ತು ಜೆನಿಲಿಯಾ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ಇದರಲ್ಲಿ ಅವರು ತಮ್ಮ ಖಾಸಗಿ ಜೀವನದ ಬಗ್ಗೆಯೂ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ರಾಜಶ್ರೀ ಮರಾಠಿಗೆ ನೀಡಿದ ಸಂದರ್ಶನದಲ್ಲಿ ರಿತೇಶ್, ‘ನಾನು ಈ ಉದ್ಯಮದಲ್ಲಿ 20 ವರ್ಷ ಕೆಲಸ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

ಆದರೆ ಈ 20 ವರ್ಷಗಳಲ್ಲಿ ನನ್ನ ತಂದೆ-ತಾಯಿ ಒಮ್ಮೆಯೂ ಸೆಟ್‌ಗೆ ಬಂದಿರಲಿಲ್ಲ. ಅಪ್ಪ ಇದ್ದಾಗಲೇ ಬರಲು ನಿರ್ಧರಿಸಿದ್ದರೆ ಅವರ ಪ್ರೋಟೋಕಾಲ್ ಸೆಕ್ಯುರಿಟಿ ಎಲ್ಲಾ ಕಡೆ ಇದ್ದಿದ್ದರಿಂದ ಕೆಲಸದಲ್ಲಿ ಸಮಸ್ಯೆಯಾಗುತ್ತಿತ್ತು. ಅದಕ್ಕೇ ಅವರು ಬರಲೇ ಇಲ್ಲ ಎಂದಿದ್ದಾರೆ. ನನ್ನ ತಾಯಿಯೂ ಒಮ್ಮೆ ಕೂಡಾ ಸೆಟ್​ಗೆ ಬಂದಿಲ್ಲ. ಆದರೆ ನಾನು ಒಮ್ಮೆ ನನ್ನ ತಾಯಿಯಲ್ಲಿ ಅವರು ಯಾಕೆ ನನ್ನ ಸೆಟ್‌ಗೆ ಬರಲಿಲ್ಲ ಎಂದು ಕೇಳಿದ್ದೆ. ಇದಕ್ಕೆ ಉತ್ತರಿಸಿದ ತಾಯಿ, ನೀನು ಒಮ್ಮೆ ಕೂಡಾ ಕರೆಯಲೇ ಇಲ್ಲ ಎಂದರು. ನನ್ನ ತಾಯಿಯ ಈ ಉತ್ತರವನ್ನು ಕೇಳಿ ನಾನು ಎದೆಗುಂದಿದೆ ಎಂದು ನಟ ಹೇಳಿದರು. ಏಕೆಂದರೆ 20 ವರ್ಷಗಳಲ್ಲಿ ನಾನು ನಮ್ಮ ತಾಯಿಯನ್ನು ಸೆಟ್‌ಗೆ ಕರೆದಿಲ್ಲ. ಹಾಗಾದರೆ ಎಲ್ಲವೂ ಇದ್ದು ಏನು ಪ್ರಯೋಜನ? ಹಾಗಾಗಿ ನಾವು ನಿರ್ದೇಶಿಸಿದ ಸಿನಿಮಾ ಸೆಟ್‌ಗೆ ನನ್ನ ತಾಯಿಯನ್ನು ಆಹ್ವಾನಿಸಲು ನಿರ್ಧರಿಸಿದೆ. ಅದನ್ನು ಮಾಡಿದೆ ಕೂಡಾ ಎಂದಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾನುಪ್ರಿಯಾ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಟಿ

Mon Jan 16 , 2023
ಭಾನುಪ್ರಿಯಾ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಟಿ, ಕೂಚಿಪುಡಿ ನೃತ್ಯಕಲಾವಿದೆ ಮತ್ತು ಧ್ವನಿ ಕಲಾವಿದೆ.ಭಾನುಪ್ರಿಯಾ 1967ರ ಜನವರಿ 15ರಂದು ರಾಜಮಂಡ್ರಿಯ ಬಳಿಯ ರಂಗಂಪೇಟಾ ಗ್ರಾಮದಲ್ಲಿ ಜನಿಸಿದರು. ತಂದೆ ಪಾಂಡು ಬಾಬು. ತಾಯಿ ರಾಗಮಾಲಿ. ಭಾನುಪ್ರಿಯಾ ಅವರ ಮೊದಲ ಹೆಸರು ಮಂಗಭಾನು. ಮುಂದೆ ಅವರ ಕುಟುಂಬ ಚೆನ್ನೈಗೆ ಸ್ಥಳಾಂತರಗೊಂಡಿತು. ಅವರ ಹಿರಿಯ ಸಹೋದರ ಗೋಪಿಕೃಷ್ಣ ಮತ್ತು ತಂಗಿ ಚಲನಚಿತ್ರ ಕಲಾವಿದೆ ಶಾಂತಿಪ್ರಿಯಾ. ಭಾನುಪ್ರಿಯಾ ಕಳೆದ ನಾಲ್ಕು ದಶಕಗಳಲ್ಲಿ150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial