ಭಾನುಪ್ರಿಯಾ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಟಿ

ಭಾನುಪ್ರಿಯಾ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಟಿ, ಕೂಚಿಪುಡಿ ನೃತ್ಯಕಲಾವಿದೆ ಮತ್ತು ಧ್ವನಿ ಕಲಾವಿದೆ.ಭಾನುಪ್ರಿಯಾ 1967ರ ಜನವರಿ 15ರಂದು
ರಾಜಮಂಡ್ರಿಯ ಬಳಿಯ ರಂಗಂಪೇಟಾ ಗ್ರಾಮದಲ್ಲಿ ಜನಿಸಿದರು. ತಂದೆ ಪಾಂಡು ಬಾಬು. ತಾಯಿ ರಾಗಮಾಲಿ. ಭಾನುಪ್ರಿಯಾ ಅವರ ಮೊದಲ ಹೆಸರು ಮಂಗಭಾನು. ಮುಂದೆ ಅವರ ಕುಟುಂಬ ಚೆನ್ನೈಗೆ ಸ್ಥಳಾಂತರಗೊಂಡಿತು. ಅವರ ಹಿರಿಯ ಸಹೋದರ ಗೋಪಿಕೃಷ್ಣ ಮತ್ತು ತಂಗಿ ಚಲನಚಿತ್ರ ಕಲಾವಿದೆ ಶಾಂತಿಪ್ರಿಯಾ. ಭಾನುಪ್ರಿಯಾ ಕಳೆದ ನಾಲ್ಕು ದಶಕಗಳಲ್ಲಿ150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನವಾಗಿ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿರುವ ಅವರು ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳ ಕೆಲವು ಚಿತ್ರಗಳಲ್ಲೂ ನಟಿಸಿದ್ದಾರೆ
ಭಾನುಪ್ರಿಯಾ ತಮಿಳು ಚಲನಚಿತ್ರ ‘ಮೆಲ್ಲ ಪೆಸುಂಗಳ್’ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ನಂತರ ತೆಲುಗು ಯಶಸ್ವೀ ಚಿತ್ರ ‘ಸಿತಾರಾ’ದಲ್ಲಿ ಕಾಣಿಸಿಕೊಂಡರು. ಇದು ತೆಲುಗಿನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿತು. 1985ರ ‘ಅನ್ವೇಷಣಾ’ದಲ್ಲಿ ಅವರು ಪಕ್ಷಿಶಾಸ್ತ್ರಜ್ಞೆಯಾಗಿ ನಟಿಸಿದರು. 1986ರಲ್ಲಿ, ಅವರು ‘ದೋಸ್ತಿ ದುಷ್ಮನಿ’ ಚಿತ್ರದ ಮೂಲಕ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. 1988ರಲ್ಲಿ, ಅವರು ಮಹಾನ್ ನಿರ್ದೇಶಕ ಕೆ. ವಿಶ್ವನಾಥ್ ಅವರ ‘ಸ್ವರ್ಣಕಮಲಮ್‌’ನಲ್ಲಿ ಅದ್ಭುತವಾಗಿ ನಟಿಸಿ ಜನಪ್ರಿಯರಾದರು. ಇದು 1988ರ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಮತ್ತು ಆನ್ ಆರ್ಬರ್ ಫಿಲ್ಮ್ ಫೆಸ್ಟಿವಲ್‌ನ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರದ ಅಭಿನಯ ಅವರಿಗೆ ಅನೇಕ ಪ್ರಶಸ್ತಿಗಳನ್ನು ತಂದಿತು.ಭಾನುಪ್ರಿಯಾ ಅವರು ರವಿಚಂದ್ರನ್ ಅವರೊಂದಿಗೆ ‘ರಸಿಕ’, ವಿಷ್ಣುವರ್ಧನ್ ಅವರೊಂದಿಗೆ ‘ಸಿಂಹಾದ್ರಿಯ ಸಿಂಹ’,`ಕದಂಬ’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಭೌಗೋಳಿಕ ಹಾಗೂ ರಾಜಕೀಯವಾಗಿ ಪ್ರತಿಷ್ಠೆ ಹೊಂದಿರುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು.

Mon Jan 16 , 2023
ರಾಜ್ಯದಲ್ಲಿ ಭೌಗೋಳಿಕ ಹಾಗೂ ರಾಜಕೀಯವಾಗಿ ಪ್ರತಿಷ್ಠೆ ಹೊಂದಿರುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ಒಂದೆಡೆ ಬೆಳಗಾವಿಯು ಗಡಿ ವಿವಾದಕ್ಕೆ ಕುಖ್ಯಾತಿ ಪಡೆದಿದ್ದರೆ, ಇನ್ನೊಂದೆಡೆ ಆ ಜಿಲ್ಲೆಯೊಳಗಿನ ರಾಜಕಾರಣದಿಂದಲೂ ಖ್ಯಾತಿ-ಕುಖ್ಯಾತಿಯನ್ನು ಪಡೆದಿದೆ. ಬೆಳಗಾವಿ ಜಿಲ್ಲೆಯು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಬೌಗೋಳಿಕವಾಗಿ ಹೆಸರುವಾಸಿಯಾಗಿದೆ. ಮೊದಲು ಹತ್ತಿ ಹಾಗೂ ರೇಷ್ಮೆಯಂತಹ ವಾಣಿಜ್ಯ ಉತ್ಪನ್ನಗಳಿಗೆ ಜಿಲ್ಲೆ ಹೆಚ್ಚು ಪ್ರಸಿದ್ದಿಯಾಗಿತ್ತು. ಆ ನಂತರ ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಾದ್ಯಂತ ತಲೆ ಎತ್ತಿದವು. ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನದಲ್ಲಿವೆ. […]

Advertisement

Wordpress Social Share Plugin powered by Ultimatelysocial