ರಾಜ್ಯದಲ್ಲಿ ಭೌಗೋಳಿಕ ಹಾಗೂ ರಾಜಕೀಯವಾಗಿ ಪ್ರತಿಷ್ಠೆ ಹೊಂದಿರುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು.

ರಾಜ್ಯದಲ್ಲಿ ಭೌಗೋಳಿಕ ಹಾಗೂ ರಾಜಕೀಯವಾಗಿ ಪ್ರತಿಷ್ಠೆ ಹೊಂದಿರುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ಒಂದೆಡೆ ಬೆಳಗಾವಿಯು ಗಡಿ ವಿವಾದಕ್ಕೆ ಕುಖ್ಯಾತಿ ಪಡೆದಿದ್ದರೆ, ಇನ್ನೊಂದೆಡೆ ಆ ಜಿಲ್ಲೆಯೊಳಗಿನ ರಾಜಕಾರಣದಿಂದಲೂ ಖ್ಯಾತಿ-ಕುಖ್ಯಾತಿಯನ್ನು ಪಡೆದಿದೆ.

ಬೆಳಗಾವಿ ಜಿಲ್ಲೆಯು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಬೌಗೋಳಿಕವಾಗಿ ಹೆಸರುವಾಸಿಯಾಗಿದೆ. ಮೊದಲು ಹತ್ತಿ ಹಾಗೂ ರೇಷ್ಮೆಯಂತಹ ವಾಣಿಜ್ಯ ಉತ್ಪನ್ನಗಳಿಗೆ ಜಿಲ್ಲೆ ಹೆಚ್ಚು ಪ್ರಸಿದ್ದಿಯಾಗಿತ್ತು. ಆ ನಂತರ ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಾದ್ಯಂತ ತಲೆ ಎತ್ತಿದವು. ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನದಲ್ಲಿವೆ. ಅಥವಾ, ಕಾರ್ಖಾನೆಗಳ ಒಡೆಯರು ರಾಜಕಾರಣಕ್ಕೆ ಬರುತ್ತಾರೆ. ಕಬ್ಬು ಈ ಜಿಲ್ಲೆಯ ಪ್ರಮುಖ ಬೆಳೆಯಾಗಿ ಮಾರ್ಪಟ್ಟಿದೆ.

Karnataka Assembly Election -2023 ಬೆಳಗಾವಿ ಜಿಲ್ಲೆ 09 ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು

ಈ ಜಿಲ್ಲೆಯು ಗೋವಾ ಹಾಗೂ ಮಹಾರಾಷ್ಟ್ರದ ಗಡಿಗಳೊಂದಿಗೆ ಬೆಸೆಯುತ್ತಿದೆ. ಹೀಗಾಗಿ, ಇಲ್ಲಿನ ನಗರ ಭಾಗಗಳಲ್ಲಿ ಮರಾಠಿ ಮಾತನಾಡುವವರ ಸಂಖ್ಯೆಯೂ ಬಹಳಷ್ಟಿದೆ. ಇಲ್ಲಿನ ಪ್ರೇಕ್ಷಣೀಯ ಸ್ಥಳಗಳೆಂದರೆ, ಹಿಡಕಲ್ ಜಲಾಶಯ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ, ಗೋಕಾಕ್ ಜಲಪಾತ ಹಾಗೂ ಕಿತ್ತೂರಿನಲ್ಲಿರುವ ರಾಣಿ ಚೆನ್ನಮ್ಮ ಕೋಟೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಖಂಡೇಯ, ಹಿರಣ್ಯಕೇಶಿ, ದೂದಗಂಗೆ-ವೇದಗಂಗೆ ಈ ಜಿಲ್ಲೆಯ ಪ್ರಮುಖ ನದಿಗಳು. ಈ ಜಿಲ್ಲೆಯಲ್ಲಿ ಮೂರು ಜಲಾಶಯಗಳಿವೆ. ನವಿಲುತೀರ್ಥ, ರಾಕಸಕೊಪ್ಪ ಹಾಗೂ ಹಿಡಕಲ್ ಜಲಾಶಯ.

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಕುಟುಂಬ- ಪರಿವಾರಗಳದ್ದೇ ಹೆಚ್ಚು ಪಾರುಪತ್ಯವಿದೆ. ಜಾರಕಿಹೊಳಿ ಕುಟುಂಬ, ಹುಕ್ಕೇರಿ ಕುಟುಂಬ, ಕತ್ತಿ ಕುಟುಂಬ, ಕೌಜಲಗಿ ಕುಟುಂಬ, ಪಟ್ಟಣ ಕುಟುಂಬ, ಜೊಳ್ಳೆ ಕುಟುಂಬ, ಮಾಮನಿ ಕುಟುಂಬ, ಅಂಗಡಿ ಕುಟುಂಬ ಹಾಗೂ ಹೆಬ್ಬಾಳ್ಕರ್‌ ಕುಟುಂಬಗಳ ಸದಸ್ಯರು ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ಈ ಕುಟುಂಬಗಳ ಸದಸ್ಯರು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿದ್ದಾರೆ. ಇವರಲ್ಲಿ ಕೆಲವರು ಕರ್ನಾಟಕ ರಾಜಕಾರಣದಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿದ್ದಾರೆ. ಈ ಜಿಲ್ಲೆಯಲ್ಲಿ ಒಟ್ಟು 17 ವಿಧಾನಸಭಾ ಕ್ಷೇತ್ರಗಳ ಬರುತ್ತವೆ. ಅವುಗಳ ಪೈಕಿ 9 ಕ್ಷೇತ್ರಗಳ ಬಗ್ಗೆ ಒಂದು ನೋಟ ಇಲ್ಲಿದೆ..

ಬೆಳಗಾವಿ ಜಿಲ್ಲೆಯ 9 ಕ್ಷೇತ್ರಗಳ ಈಗಿನ ಶಾಸಕರು ಹಾಗೂ ಪಕ್ಷಹುಕ್ಕೇರಿ- ದಿವಂಗತ ಉಮೇಶ ಕತ್ತಿ (ಬಿಜೆಪಿ)
ಕಾಗವಾಡ- ಶ್ರೀಮಂತ ಪಾಟೀಲ (ಬಿಜೆಪಿ)
ಖಾನಾಪುರ- ಅಂಜಲಿ ನಿಂಬಾಳ್ಕರ್‌ (ಕಾಂಗ್ರೆಸ್‌)
ಕಿತ್ತೂರು- ಮಹಾಂತೇಶ್ ದೊಡ್ಡಗೌಡರ್ (ಬಿಜೆಪಿ)
ಕುಡುಚಿ- ಪಿ.ರಾಜೀವ್‌ (ಬಿಜೆಪಿ)
ನಿಪ್ಪಾಣಿ- ಶಶಿಕಲಾ ಜೊಲ್ಲೆ (ಬಿಜೆಪಿ)
ರಾಮದುರ್ಗ- ಮಹಾದೇವಪ್ಪ ಯಾದವಾಡ (ಬಿಜೆಪಿ)
ರಾಯಭಾಗ- ದುರ್ಯೋಧನ ಐಹೊಳೆ (ಬಿಜೆಪಿ)
ಸವದತ್ತಿ- ದಿವಂಗತ ಆನಂದ ಮಾಮನಿ (ಬಿಜೆಪಿ)

ಒಂಬತ್ತು ವಿಧಾನಸಭಾ ಕ್ಷೇತ್ರಗಳ ಬಲಾಬಲ, ಟಿಕೆಟ್‌ ಆಕಾಂಕ್ಷಿಗಳು

ಹುಕ್ಕೇರಿ: ರಮೇಶ ಕತ್ತಿಗೆ ಹೆಚ್ಚಿನ ಅವಕಾಶ

ಹುಕ್ಕೇರಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,93,274
ಪುರುಷ ಮತದಾರರು: 95,923
ಮಹಿಳಾ ಮತದಾರರು: 94,978

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಉಮೇಶ್‌ ಕತ್ತಿ ಅವರು ಜಯ ಸಾಧಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಯ್ಯಪ್ಪಗೌಡ ಬಸನಗೌಡ ಪಾಟೀಲ ಅವರು 15,385 ಮತಗಳಿಂದ ಪರಾಭವಗೊಂಡಿದ್ದರು.

ಈಗ ಉಮೇಶ ಕತ್ತಿ ನಿಧನರಾಗಿದ್ದು, ಅವರ ಸಹೋದರ ರಮೇಶ ಕತ್ತಿ ಅವರನ್ನು ಬಿಜೆಪಿ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಇನ್ನು ಕಾಂಗ್ರೆಸ್‌ನಿಂದ ರವಿ ಬಸವರಾಜ ಕರಾಳೆ, ಅಪ್ಪಯ್ಯಗೌಡ ಬಸಗೌಡ ಪಾಟೀಲ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಅಸೆಂಬ್ಲಿ ಚುನಾವಣೆ

ಕಾಗವಾಡ: ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿ

ಕಾಗವಾಡ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,78,735
ಪುರುಷ ಮತದಾರರು: 92,223
ಮಹಿಳಾ ಮತದಾರರು: 85,812

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶ್ರೀಮಂತ ಪಾಟೀಲರು ಆಯ್ಕೆಯಾಗಿದ್ದರು. ಇವರ ಎದುರು ಸ್ಪರ್ಧಿಸಿದ್ದ ಬಿಜೆಪಿಯ ರಾಜು ಕಾಗೆ ಅವರು 13, 306 ಮತಗಳಿಂದ ಸೋಲನ್ನು ಅನುಭವಿಸಿದ್ದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಶ್ರೀಮಂತ ಪಾಟೀಲರು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶ್ರೀಮಂತ ಪಾಟೀಲರಿಗೆ ಬಿಜೆಪಿಯಿಂದ ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದೆ.

ಉಪಚುನಾವಣೆಯಲ್ಲಿ ಸೋಲು ಅನುಭವಿಸಿರುವ ರಾಜು ಕಾಗೆ ಅವರು ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಿರಣಕುಮಾರ್ ತಾತ್ಯಾಗೌಡ ಪಾಟೀಲ ಅವರೂ ಸಹ ಕಾಂಗ್ರೆಸ್‌ ಟಿಕೆಟ್‌ಗಾಗಿ ಯತ್ನ ನಡೆಸಿದ್ದಾರೆ. ಜೆಡಿಎಸ್‌ನಿಂದ ಕಲ್ಲಪ್ಪ ಮಗೆನ್ನವರ್ ಸ್ಪರ್ಧಿಸುವ ಸಾಧ್ಯತೆ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಿರುಪತಿ ತಿಮ್ಮಪ್ಪನ ಹುಂಡಿಗೆ ಕಳೆದ ವರ್ಷ 1,400 ಕೋಟಿ ರೂ. ಆದಾಯ

Mon Jan 16 , 2023
ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದ್ದು, 2022ರಲ್ಲಿ ಹುಂಡಿಯಲ್ಲಿ 1,450 ಕೋಟಿ ರೂ. ಸಂಗ್ರಹವಾಗಿದೆ. 2021ರಲ್ಲಿ 833 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಹುಂಡಿ ಆದಾಯವು ಶೇ. 75ರಷ್ಟು ವೃದ್ಧಿಯಾಗಿದೆ.2021ರ ಬಹುಭಾಗ ಮತ್ತು 2022ರ ಆರಂಭದಲ್ಲಿ ಕೋವಿಡ್‌ ನಿರ್ಬಂಧಗಳಿಂದ ಭಕ್ತರ ಸಂಖ್ಯೆ ತುಸು ಕಡಿಮೆಯಾಗಿತ್ತು. ವರ್ಷದ ಕೊನೆ ಹೊತ್ತಿಗೆ ಭಕ್ತರ ಸಂಖ್ಯೆ ಮತ್ತು ಆದಾಯವು ಗಣನೀಯವಾಗಿ ವೃದ್ಧಿಯಾಗಿದೆ. ಹೀಗಾಗಿ […]

Advertisement

Wordpress Social Share Plugin powered by Ultimatelysocial