ಬರೋಬ್ಬರಿ 230 ಕೋಟಿ ರೂ. ಗೆ ಹರಾಜಾಯ್ತು ವಿಶ್ವದ ಅತಿ ದೊಡ್ಡ ಬಿಳಿ ವಜ್ರ‌

ವಜ್ರ ಪ್ರೀತಿಯ ಸಂಕೇತ, ವ್ಯಾಲೆಂಟೈನ್ಸ್ ಡೇ ತಮ್ಮ ಸಂಗಾತಿಗೆ ವಜ್ರದ ಉಂಗುರ ಕೊಟ್ಟು ಪ್ರೀತಿ ವ್ಯಕ್ತ ಪಡಿಸಬೇಕು ಅನ್ನೊದು ಅದೆಷ್ಟೋ ಜನರ ಕನಸು. ಆದ್ರೆ ವಜ್ರ ಎಲ್ಲರ ಕೈಗೆ ಎಟಕೋ ವಸ್ತುವಂತೂ ಅಲ್ಲವೇ ಅಲ್ಲ. ಯಾಕಂದ್ರೆ ಪ್ಯೂರ್ ವಜ್ರಗಳ ಬೆಲೆ ಲಕ್ಷ-ಲಕ್ಷ, ಕೋಟಿ-ಕೋಟಿ ಬೆಲೆ.

ಈಗ ವಿಶ್ವದ ಅತಿ ದೊಡ್ಡ ಬಿಳಿ ವಜ್ರ ಹರಾಜಾಗಿದೆ. ಆ ವಜ್ರದ ಬೆಲೆ 230 ಕೋಟಿ ರೂ. ಅಂತ ಹೇಳಲಾಗುತ್ತಿದೆ.

ಈ ಬಿಳಿ ವಜ್ರದ ಹೆಸರು ‘ದಿ ರಾಕ್’. ವಿಶ್ವದ ಅತಿ ದೊಡ್ಡ ವಜ್ರ, ಗಾಲ್ಫ್‌ ಬಾಲ್‌ನಷ್ಟು ದೊಡ್ಡದಾಗಿದ್ದು 228.31 ಕ್ಯಾರೆಟ್‌ ವಜ್ರ ಇದಾಗಿದೆ. ಇದರ ತೂಕ 200 ಕ್ಯಾರೆಟ್‌ಗೂ ಅಧಿಕವಾಗಿದೆ. ಇದು ನೋಡುವುದಕ್ಕೆ ಸಂಪೂರ್ಣವಾಗಿ ಪಿಯರ್‌ ಆಕಾರದ್ದಾಗಿದ್ದು, ಅಪರೂಪದಲ್ಲೇ ಅಪರೂಪದ ವಜ್ರ ಇದಾಗಿದೆ.

ದಕ್ಷಿಣಆಫ್ರಿಕಾದ ಗಣಿಗಾರಿಕೆಯಲ್ಲಿ ಸಿದ್ಧಪಡಿಸಲಾಗಿರೋ ಈ ‘ದಿ ರಾಕ್‌’ ವಜ್ರವನ್ನ ಈ ಹಿಂದೆ ಈ ಗಣಿಯ ಮಾಲೀಕರು ನಕ್ಲೇಸ್ ರೂಪದಲ್ಲಿ ಧರಿಸುತ್ತಿದ್ದರು. 2017ರಲ್ಲಿ 163. 41 ಕ್ಯಾರೆಟ್‌ ಡೈಮೆಂಡ್‌ ಹರಳುಗಳಲ್ಲಿ ಹರಾಜಿಗಿಡಲಾಗಿತ್ತು.

1918ರಲ್ಲಿ ಮೊದಲ ಬಾರಿಗೆ ಈ ವಜ್ರವನ್ನ ಲಂಡನ್ನಲ್ಲಿ10,000 ಪೌಂಡ್ಗೆ ಮಾರಾಟ ಮಾಡಲಾಗಿತ್ತು. ಈಗ ಮತ್ತೆ ಈ ಬಿಳಿ ವಜ್ರವನ್ನ ಹರಾಜು ಮಾಡಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SSLC ಮೇ 20ರೊಳಗೆ ಫಲಿತಾಂಶ: ಮೌಲ್ಯಮಾಪನಕ್ಕೆ ಗೈರು ಹಾಜರಾದವರ ವಿರುದ್ಧ ಶಿಸ್ತುಕ್ರಮ!

Sun May 8 , 2022
  ಬೆಂಗಳೂರು, ಮೇ 8: ಎಸ್‌ಎಸ್‌ಎಲ್ ಸಿ ಫಲಿತಾಂಶ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ವಿದ್ಯಾರ್ಥಿಗಳ ಅಂಕಗಳನ್ನು ಕ್ರೋಢೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೇ. 20 ರೊಳಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದೇ ಫಲಿತಾಂಶ ಪ್ರಕಟ ವಿಳಂಬಕ್ಕೆ ಕಾರಣವಾದ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪ್ರೌಢ ಶಿಕ್ಷಣ ಮಂಡಳಿ ಸೂಚನೆ ನೀಡಿದೆ.ಫಲಿತಾಂಶ ಪೂರ್ಣ: “ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ. 28 ರಂದು ಆರಂಭವಾಗಿತ್ತು. ಏಪ್ರಿಲ್ 11 […]

Advertisement

Wordpress Social Share Plugin powered by Ultimatelysocial