ತಿರುಪತಿ ತಿಮ್ಮಪ್ಪನ ಹುಂಡಿಗೆ ಕಳೆದ ವರ್ಷ 1,400 ಕೋಟಿ ರೂ. ಆದಾಯ

ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದ್ದು, 2022ರಲ್ಲಿ ಹುಂಡಿಯಲ್ಲಿ 1,450 ಕೋಟಿ ರೂ. ಸಂಗ್ರಹವಾಗಿದೆ. 2021ರಲ್ಲಿ 833 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಹುಂಡಿ ಆದಾಯವು ಶೇ. 75ರಷ್ಟು ವೃದ್ಧಿಯಾಗಿದೆ.2021ರ ಬಹುಭಾಗ ಮತ್ತು 2022ರ ಆರಂಭದಲ್ಲಿ ಕೋವಿಡ್‌ ನಿರ್ಬಂಧಗಳಿಂದ ಭಕ್ತರ ಸಂಖ್ಯೆ ತುಸು ಕಡಿಮೆಯಾಗಿತ್ತು. ವರ್ಷದ ಕೊನೆ ಹೊತ್ತಿಗೆ ಭಕ್ತರ ಸಂಖ್ಯೆ ಮತ್ತು ಆದಾಯವು ಗಣನೀಯವಾಗಿ ವೃದ್ಧಿಯಾಗಿದೆ. ಹೀಗಾಗಿ ಈ ಎರಡು ವರ್ಷಗಳ ನಡುವಿನ ಅಂಕಿ ಅಂಶಗಳ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ದೇವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.2022ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 2.37 ಕೋಟಿ. ಇದರ ಹಿಂದಿನ ವರ್ಷ 2021ರಲ್ಲಿ 1.04 ಕೋಟಿ ಭಕ್ತರು ಭೇಟಿ ನೀಡಿದ್ದರು.2022ರಲ್ಲಿ ಟಿಟಿಡಿ ಮಾರಾಟ ಮಾಡಿರುವ ಲಡ್ಡುಗಳ ಸಂಖ್ಯೆ 11.54 ಲಕ್ಷ. ಕಳೆದ ವರ್ಷ 5.96 ಲಕ್ಷ ಲಡ್ಡುಗಳು ಮಾರಾಟವಾಗಿದ್ದವು.ಕಳೆದ ವರ್ಷದ ಡಿಸೆಂಬರ್‌ವೊಂದರಲ್ಲಿಯೇ 129 ಕೋಟಿ ರೂ ಹುಂಡಿ ಆದಾಯ ಸಂಗ್ರಹವಾಗಿದೆ. ಜ. 11ರ ವರೆಗೆ 6 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದು, ಶ್ರೀವಾರಿ ಹುಂಡಿಗೆ ಹಾಕಿರುವ ಹಣ 39.40 ಕೋಟಿ ರೂ ಎಂದು ವರದಿಯಾಗಿದೆ.ಕಳೆದ ವರ್ಷ ಹುಂಡಿಯಲ್ಲಿ 1,450.50 ಕೋಟಿ ರೂ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂನ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ಯಾಂಟ್ ಸೆಟ್‍ನೊಂದಿಗೆ ಆಕರ್ಷಕ ಕುರ್ತಿಗಳು ಇದೀಗ 500ರೂ.ಗೂ ಕಡಿಮೆ ಬೆಲೆಗೆ.

Mon Jan 16 , 2023
ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಹೆಚ್ಚು ಆಕರ್ಷಕವಾಗಿ ಕಾಣಬೇಕು ಎಂದರೆ ಸ್ಟೈಲಿಶ್ ಆಗಿ ಕಾಣಲು ಸಹಾಯ ಮಾಡುವ ಕುರ್ತಿ ಸೆಟ್‍ಗಳನ್ನು ಖರೀದಿಸಿ. ನಿಮ್ಮ ಅಳತೆಗೆ ಅನುಗುಣವಾದ ಹಾಗೂ ಆಕರ್ಷಕ ಬಣ್ಣಗಳಿಂದ ಕೂಡಿರುವ ಕುರ್ತಿಗಳು ನಿಮ್ಮ ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ದೊರೆಯಲಿವೆ. ನೀವು ನಿಮಗಾಗಿ ಅಥವಾ ನಿಮ್ಮವರಿಗೆ ವಿಶೇಷ ಶುಭ ಸಂದರ್ಭದಲ್ಲಿ ನೀಡಬಹುದು.ಇದೊಂದು ಆಕರ್ಷಕವಾದ ಕುರ್ತಾ ಸೆಟ್. 500 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಇದನ್ನು ನೀವು ವಿಶೇಷ ಸಮಾರಂಭದ […]

Advertisement

Wordpress Social Share Plugin powered by Ultimatelysocial