ಹೊಟೇಲ್‌ ಆಹಾರ ಸೇವಿಸಿ 68 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು.

ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯ ಪರವೂರ್‌ನಲ್ಲಿನ ಹೋಟೆಲೊಂದರಲ್ಲಿ ಆಹಾರ ಸೇವಿಸಿದ 68 ಮಂದಿ ಭೇದಿ ಮತ್ತು ವಾಂತಿಯಿಂದ ಬಳಲಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಇದೀಗ ಅವರೆಲ್ಲರೂ ಚಿಕತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಆದ್ರೆ, ಅವರಲ್ಲಿ ಚೆರೈ ಮೂಲದ ಗೀತು ಎಂದು ಗುರುತಿಸಲಾದ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಎರ್ನಾಕುಲಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. 68 ಮಂದಿಯಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.

ಸೋಮವಾರ ಸಂಜೆ ಈ ಹೊಟೇಲ್‌ನಿಂದ ಕುಜಿಮಂತಿ, ಅಲ್ಫಾಹಂ, ಶವಾಯಿ ಸೇವಿಸಿದ ಜನರು ತೀವ್ರ ವಾಂತಿ ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಸುದ್ದಿ ತಿಳಿದ ತಕ್ಷಣವೇ ಪಾಲಿಕೆ ಆರೋಗ್ಯಾಧಿಕಾರಿಗಳು ಹೋಟೆಲ್ ಮಜ್ಲಿಸ್ ಅನ್ನು ಮುಚ್ಚಿಸಿದ್ದಾರೆ. ಪಾಲಿಕೆ ಆರೋಗ್ಯಾಧಿಕಾರಿಗಳ ಪ್ರಕಾರ, ಮಾಂಸಾಹಾರ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಗೆ ಘೇರಾವ್ ಹಾಕಿದ ರೈತರು.

Wed Jan 18 , 2023
ನಂಜನಗೂಡು ನಗರದ ಅಂಬೇಡ್ಕರ್ ಭವನದಲ್ಲಿ ರೈತರ ಆಕ್ರೋಶ. ಭೂ ಸ್ವಾದೀನ ಪ್ರಕ್ರಿಯೆ ವಿರೋಧಿಸಿ ರೈತರ ಪ್ರತಿಭಟನೆ. ಮುದ್ದಹಳ್ಳಿ, ಎಲಚಗೆರೆ ಸಿಂಧುವಳ್ಳಿಪುರ ಗ್ರಾಮಗಳ ಒಟ್ಟು 448.38 ಎಕರೆ ಕೃಷಿ ಯೋಗ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ ಅಧಿಕಾರಿಗಳು. ಧರ ನಿಗದಿಗೆ ಇಂದು ಅಂಬೇಡ್ಕರ್ ಭವನದಲ್ಲಿ ಸಭೆಯನ್ನು ಕರೆಯಲಾಗಿತ್ತು. ಪೊಲೀಸ್ ಭದ್ರತೆಯಲ್ಲಿ ರೈತರನ್ನು ಒಳಗೆ ಬಿಡದೆ ಬೀಗವನ್ನು ಹಾಕಲಾಗಿತ್ತು. ರೈತ, ದಲಿತ, ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿ ಶಾಸಕರಿಗೆ ಘೇರಾವ್ […]

Advertisement

Wordpress Social Share Plugin powered by Ultimatelysocial