GST:ಉಡುಪು ಮೇಲಿನ ಜಿಎಸ್‌ಟಿ ಏರಿಕೆ ಸದ್ಯಕ್ಕಿಲ್ಲ;

ಹೊಸ ವರ್ಷದಲ್ಲಿ ಜಿಎಸ್‌ಟಿ ಏರಿಕೆಯ ಪರಿಣಾಮದಿಂದಾಗಿ ಉಡುಪುಗಳ ಬೆಲೆಯು ಅಧಿಕ ಆಗಲಿದೆ ಎಂಬ ಬೇಸರದಲ್ಲಿದ್ದ ಗ್ರಾಹಕರಿಗೆ ಒಂದು ಸಿಹಿಸುದ್ದಿ ಇದೆ. ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಉಡುಪುಗಳ ಮೇಲಿನ ಜಿಎಸ್‌ಟಿ ಏರಿಕೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಜಿಎಸ್​ಟಿ ಸಮಿತಿಯು ಶುಕ್ರವಾರ (ಡಿಸೆಂಬರ್ 31, 2021) ನಡೆದ ಸಭೆಯಲ್ಲಿ ಜವಳಿ ಮೇಲಿನ ಜಿಎಸ್​ಟಿ ದರ ಶೇ 5ರಿಂದ 12ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ಮುಂದೂಡುವುದಕ್ಕೆ ಸರ್ವಾನುಮತದಿಂದ ಸಮ್ಮತಿ ನೀಡಿದೆ. ಈ ಬಗ್ಗೆ ಮುಂದಿನ ಜಿಎಸ್​ಟಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲು ಕೂಡಾ ನಿರ್ಧಾರ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಹಿಮಾಚಲ ಪ್ರದೇಶದ ಕೈಗಾರಿಕಾ ಸಚಿವ, ಬಿಕ್ರಮ್ ಸಿಂಗ್, “ಜಿಎಸ್‌ಟಿ ಕೌನ್ಸಿಲ್ ಜವಳಿ ಮೇಲಿನ ಜಿಎಸ್‌ಟಿ ದರವನ್ನು ಏರಿಕೆ ಮಾಡುವುದನ್ನು ಸದ್ಯಕ್ಕೆ ಮುಂದೂಡಿಕೆ ಮಾಡಿದೆ. ಕೌನ್ಸಿಲ್ ಈ ವಿಷಯವನ್ನು ಫೆಬ್ರವರಿ 2022 ರಲ್ಲಿ ತನ್ನ ಮುಂದಿನ ಸಭೆಯಲ್ಲಿ ಪರಿಶೀಲಿಸುತ್ತದೆ,” ಎಂದು ತಿಳಿಸಿದ್ದಾರೆ.

ಜನವರಿ ಒಂದರಿಂದ ಉಡುಪುಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‌ಟಿಯು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲು ನಿರ್ಧಾರ ಮಾಡಲಾಗಿ‌ತ್ತು. ಈಗ ಉಡುಪಿನ ಮೇಲಿನ ಜಿಎಸ್‌ಟಿ ಏರಿಕೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಇನ್ನು ಉಡುಪು ಮೇಲಿನ ಜಿಎಸ್‌ಟಿ ಏರಿಕೆಗೆ ವ್ಯಾಪಾರಸ್ಥರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), “ಸರ್ಕಾರವು ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಸರಳ ಮಾಡುವ ಬದಲಾಗಿ ಅದನ್ನು ಇನ್ನಷ್ಟು ಕಠಿಣ ಮಾಡುತ್ತಿದೆ,” ಎಂದು ಹೇಳಿತ್ತು.

ಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಬಾರ್ತಿಯಾ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, “ಹತ್ತಿ ಜವಳಿ ಉದ್ಯಮದಲ್ಲಿ ಯಾವುದೇ ಕಠಿಣ ತೆರಿಗೆ ರಚನೆ ಇರಲಿಲ್ಲ. ಹಾಗಿರುವಾಗ ಜವಳಿ ಮೇಲೆ ಜಿಎಸ್‌ಟಿಯನ್ನು ಶೇಕಡ 12 ಕ್ಕೆ ಏಕೆ ಏರಿಕೆ ಮಾಡಲಾಗಿದೆ,” ಎಂದು ಪ್ರಶ್ನಿಸಿದ್ದರು. ಹಾಗೆಯೇ “ರೊಟ್ಟಿ, ಬಟ್ಟೆ ಹಾಗೂ ಮನೆ ಜೀವನದ ಮೂರು ಮೂಲಭೂತ ವಿಷಯಗಳು. ಬೆಲೆ ಏರಿಕೆಯ ಪರಿಣಾಮದಿಂದಾಗಿ ಈಗಾಗಲೇ ಆಹಾರದ ಬೆಲೆಯು ಏರಿಕೆ ಆಗಿದೆ. ಮನೆ ಖರೀದಿಯು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಈಗ ಬಟ್ಟೆಯನ್ನು ಕೂಡಾ ಖರೀದಿಸಲು ಸಾಧ್ಯವಾಗದಂತೆ ಜಿಎಸ್‌ಟಿ ಕೌನ್ಸಿಲ್‌ ಮಾಡಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

RELIANCE:ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್,100 ಮಿಲಿಯನ್ ಜಿಬಿಪಿಗೆ ಖರೀದಿಸಿದೆ;

Fri Dec 31 , 2021
ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳಿಗೆ ಖರೀದಿಸಿದೆ. ಈ ಸಂಸ್ಥೆ ರಿಲಾಯನ್ಸ್ ನ ಬಹು-ಬಿಲಿಯನ್ ಡಾಲರ್ ಕ್ಲೀನ್ ಎನರ್ಜಿ ವಿಭಾಗವಾಗಿರುವ ರಿಲಾಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ ಎನ್‌ಇಎಸ್‌ಎಲ್) ನ ಭಾಗವಾಗಿರಲಿದೆ. ಫ್ಯಾರಡಿಯನ್ ಲಿಮಿಟೆಡ್ ನಲ್ಲಿ ಈ ಮೂಲಕ ಶೇ.100 ರಷ್ಟು ಪಾಲನ್ನು ಹೊಂದಿರುವ ರಿಲಾಯನ್ಸ್, ಹೆಚ್ಚುವರಿಯಾಗಿ […]

Advertisement

Wordpress Social Share Plugin powered by Ultimatelysocial