ಅನಸೂಯ ಜಹಗೀರದಾರ ಅವರು ಸಂಗೀತ ಮತ್ತು ಸಾಹಿತ್ಯಲೋಕದಲ್ಲಿ ಕ್ರಿಯಾಶೀಲರಾಗಿದ್ದಾರೆ.

ಆತ್ಮೀಯರಾದ ಅನಸೂಯ ಜಹಗೀರದಾರ ಅವರು ಸಂಗೀತ ಮತ್ತು ಸಾಹಿತ್ಯಲೋಕದಲ್ಲಿ ಕ್ರಿಯಾಶೀಲರಾಗಿದ್ದಾರೆ.ಅನಸೂಯ ಜಹಗೀರದಾರ ಅವರ ಜನ್ಮದಿನ ಡಿಸೆಂಬರ್ 19.
ಕೊಪ್ಪಳದವರಾದ ಅನಸೂಯ ಜಹಗೀರದಾರ ಎಂ.ಎ., ಬಿ. ಇಡಿ ಪದವಿ ಪಡೆದು ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲ್ಲೂಕಿನ ಬೇವೂರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ.
ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತರಾದ ಅನಸೂಯ ಜಹಗೀರದಾರ ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಸಾಧಿಸಿದ್ದಾರೆ. ಅವರು ಅನೇಕ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಬಂದಿದ್ದು ಆಕಾಶವಾಣಿಯಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಸ್ವಯಂ ಗಝಲ್ ರಚಿಸಿ ಹಾಡುವುದೂ ಅವರ ವಿಶೇಷ ಅಕ್ಕರೆಗಳಲ್ಲೊಂದು.
ಸಾಹಿತ್ಯ ಕೃಷಿಯಲ್ಲಿ ಅನಸೂಯ ಜಹಗೀರದಾರ ಅವರ ವೈವಿಧ್ಯಮುಖಿ ಬರಹಗಳು ಕವನ, ಕಥೆ, ಖಂಡಕಾವ್ಯ, ಲೇಖನ, ಪ್ರಬಂಧ, ಶಿಶುಗೀತೆ, ನಾಟಕಗಳು, ಹನಿಗವನ, ಗಝಲ್, ಶಾಯರಿ, ಹಾಯಿಕು ರೂಪಗಳಲ್ಲಿ ಮೂಡಿದ್ದು ಎಲ್ಲ ಪ್ರಸಿದ್ಧ ನಿಯತಕಾಲಿಕಗಳು ಮತ್ತು ಸಾರ್ವಜನಿಕ ಜಾಲತಾಣಗಳಲ್ಲಿ ನಿರಂತರವಾಗಿ ಮೂಡಿಬರುತ್ತಿವೆ.
ಅನಸೂಯ ಅವರ ‘ಒಡಲ ಬೆಂಕಿ’ ಕೃತಿ 2014ರಲ್ಲಿ ಪ್ರಕಟಗೊಂಡಿದ್ದು ‘ಬೆಂಕಿ ಬೆಳಕು’ ಎಂಬ ಕವನ ಸಂಕಲನ, ‘ಆತ್ಮಾನುಸಂಧಾನ’ ಎಂಬ ಗಝಲ್ ಸಂಕಲನ, ‘ನೀಹಾರಿಕೆ‌’ ಹನಿಗವನ ಸಂಕಲನ, ‘ಸತ್ಯವಾನರು’ ಕಥಾ ಸಂಕಲನ, ‘ಬಣ್ಣದ ಚುಕ್ಕಿ’ ಶಿಶುಗೀತೆ, ‘ದಮನಿತೆ’ ಖಂಡಕಾವ್ಯ, ‘ಯಾಮಿನಿ’ ಕಾದಂಬರಿ, ‘ವೃತ್ತಿವೃತ್ತಾಂತ’ ಲೇಖನಗಳು ಮುಂತಾದವು ಇವರ ಬರಹಗಳಲ್ಲಿ ಸೇರಿವೆ.
ಅನಸೂಯ ಜಹಗೀರದಾರ ಅವರ ‘ಒಡಲಬೆಂಕಿ’ ಕೃತಿಗೆ ಡಾ. ಡಿ. ಎಸ್. ಕರ್ಕಿ ರಾಜ್ಯಕಾವ್ಯ ಪುರಸ್ಕಾರ ಪ್ರಶಸ್ತಿ, ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶೇಷ ಶಿಕ್ಷಕಿ ರಾಜ್ಯಪ್ರಶಸ್ತಿ ( ಕರ್ನಾಟಕ ಸರಕಾರ 2007), ರಾಜ್ಯ ಕಾವ್ಯಶ್ರೀ ಪ್ರಶಸ್ತಿ ( ಮಂಡ್ಯ ಜಿಲ್ಲೆ ಕಸ್ತೂರಿ ಸಿರಿಗನ್ನಡ ವೇದಿಕೆ ) ಶಿವಮೊಗ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಘಟಕದ ಕುವೆಂಪು ಪುರಸ್ಕಾರಗಳಲ್ಲದೆ ಹಲವಾರು ಸಂಘ ಸಂಸ್ಥೆಗಳ ಸನ್ಮಾನಗಳೂ ಸಂದಿವೆ.
ಅನಸೂಯ ಜಹಗೀರದಾರ ಅವರು ಹಲವಾರು ಕನ್ನಡ ಪರ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕ ರಾ ಸ ನೌ ಸಂಘ ಜಿಲ್ಲಾ ಘಟಕ ಕೊಪ್ಪಳದಲ್ಲಿ ಕಳೆದ 6 ವರ್ಷದಿಂದ ನಾಮನಿರ್ದೇಶಿತ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿದ್ದಾರೆ. ತಿರುಳ್ಗನ್ನಡ ಸಹಕಾರಿ ಪತ್ತಿನ ಸಂಘ ಕೊಪ್ಪಳ ಮಹಿಳಾ ನಿರ್ದೇಶಕರೂ, ಕಾರ್ಯಕಾರಿ ಸಮಿತಿ ಸದಸ್ಯರುಊ ಆಗಿದ್ದಾರೆ. ಪ್ರಸ್ತುತ ಕೊಪ್ಪಳ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷರಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಗುಸ್ಟಾವ್ ಹರ್ಮನ್ ಕೃಂಬಿಗಲ್ ಮಹನೀಯ ವ್ಯಕ್ತಿ.

Thu Dec 22 , 2022
ಬೆಂಗಳೂರಿನ ಲಾಲ್ಬಾಗನ್ನು ನೋಡಿದ್ರೆ ಇದನ್ನು ನಮಗೆ ಈ ಊರಿನ ಮಧ್ಯೆ ಕೊಟ್ಟ ಪುಣ್ಯಾತ್ಮನಿಗೆ ಕೈಮುಗಿಯಬೇಕು ಅನಿಸುತ್ತೆ. ಕಾಲದಿಂದ ಕಾಲಕ್ಕೆ ಇದನ್ನು ಅಭಿವೃದ್ಧಿ ಪಡಿಸಿ, ಇಂದೂ ಅದು ನಮಗೆ ಉಳಿಯವಂತೆ ಮಾಡಿಕೊಟ್ಟಿರುವ ಮಹನೀಯರು ಅನೇಕರಿದ್ದಾರೆ. ಅವರಲ್ಲಿ ಗುಸ್ಟಾವ್ ಹರ್ಮನ್ ಕೃಂಬಿಗಲ್ ಪ್ರಮುಖರು. ತೋಟಗಾರಿಕಾ ನಿರ್ದೇಶಕ, ಸಸ್ಯಶಾಸ್ತ್ರಜ್ಞ, ಭೂದೃಶ್ಯ ಹಾಗೂ ನಗರದ ವಿನ್ಯಾಸಕಾರ, ವಾಸ್ತುಶಿಲ್ಪಿ, ಫಲೋದ್ಯಾನ ರೂಪಕ, ಸಸ್ಯ ಸಂರಕ್ಷಕ ಹೀಗೆ ಬಹುಮುಖಿಗಳಾದ ಕೃಂಬಿಗಲ್ ನಮ್ಮ ನಾಡಿಗೆ ಸಲ್ಲಿಸಿರುವ ಸೇವೆ ಅಪಾರ. ಗುಸ್ಟಾವ್ […]

Advertisement

Wordpress Social Share Plugin powered by Ultimatelysocial