ಅಂತಿಮ ಟ್ವೆಂಟಿ-20: ಯುವ ಪ್ರತಿಭೆಗಳಿಗೆ ಮಿನುಗಲು ಅವಕಾಶ

ಕೋಲ್ಕತ್ತ (ಪಿಟಿಐ): ವೆಸ್ಟ್ ಇಂಡೀಸ್‌ ಎದುರಿನ ಚುಟುಕು ಕ್ರಿಕೆಟ್ ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿರುವ ಭಾರತ ತಂಡವು ಭಾನುವಾರೆ ನಡಯಲಿರುವ ಕೊನೆಯ ಪಂದ್ಯದಲ್ಲಿ ಯುವಪ್ರತಿಭೆಗಳಿಗೆ ಕಣಕ್ಕಿಳಿಸುವ ಯೋಚನೆಯಲ್ಲಿದೆ.

 

ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಆತಿಥೇಯ ತಂಡವು ಜಯಿಸಿದೆ.

ಬಯೋ ಬಬಲ್‌ ಬಳಲಿಕೆಯನ್ನು ನೀಗಲು ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ವಿಕೆಟ್‌ಕೀಪರ್ ರಿಷಭ್ ಪಂತ್ ಅವರಿಗೆ 10 ದಿನಗಳ ವಿಶ್ರಾಂತಿ ನೀಡಲಾಗಿದೆ. ಆದ್ದರಿಂದ ಅವರಿಬ್ಬರೂ ಮುಂದಿನ ವಾರ ನಡೆಯಲಿರುವ ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಆಡುವುದಿಲ್ಲ.

ವಿಂಡೀಸ್ ಎದುರಿನ ಕೊನೆ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಅನುಮಾನ. ರಿಷಭ್ ಕೂಡ ಆಡದಿದ್ದರೆ ವಿಕೆಟ್‌ಕೀಪಿಂಗ್ ಹೊಣೆ ಇಶಾನ್ ಕಿಶನ್ ಅವರಿಗೆ ಬೀಳುವುದು ಖಚಿತ.

ಕಳೆದೆರಡು ಪಂದ್ಯಗಳಲ್ಲಿ ಅವರು ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಇನಿಂಗ್ಸ್ ಆರಂಭಿಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ.

ಐಪಿಎಲ್‌ ನಲ್ಲಿ ದುಬಾರಿ ಆಟಗಾರನಾಗಿ ಹೊರ ಹೊಮ್ಮಿದ್ದ ಇಶಾನ್, ವಿಂಡೀಸ್ ಎದುರಿನ ಮೊದಲ ಪಂದ್ಯದಲ್ಲಿ 42 ಎಸೆತಗಳಲ್ಲಿ 35 ರನ್ ಮತ್ತು ಎರಡನೇ ಪಂದ್ಯದಲ್ಲಿ 10 ಎಸೆತಗಳಲ್ಲಿ ಎರಡು ರನ್ ಗಳಿಸಿದ್ದರು. ಇದರಿಂದಾಗಿ ಋತುರಾಜ್ ಆರಂಭಿಕನಾಗಿ ಕಣಕ್ಕಿಳಿ ದರೂ ಅಚ್ಚರಿಯೇನಿಲ್ಲ. ಆಗ ಇಶಾನ್ ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದು. ಕೊಹ್ಲಿ ಬದಲು ಶ್ರೇಯಸ್ ಅಯ್ಯರ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ.

ಎರಡನೇ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ ಮತ್ತೊಂದು ಅವಕಾಶ ಲಭಿಸಲಿದೆ.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಜೊತೆಗೆ ಇನಿಂಗ್ಸ್‌ಗೆ ಬಲ ಒದಗಿಸಿದರೆ ಉತ್ತಮ ಮೊತ್ತ ಪೇರಿಸುವುದು ಸುಲಭವಾಗಲಿದೆ.

ಬೌಲಿಂಗ್‌ ವಿಭಾಗದಲ್ಲಿ ತಮ್ಮ ತೋಳ್ಬಲ ಮೆರೆಯಲು ದೀಪಕ್ ಹೂಡಾ, ಆವೇಶ್ ಖಾನ್ ಮತ್ತು ಮೊಹಮ್ಮದ್ ಸಿರಾಜ್ ಕಾತುರದಿಂದ ಕಾದುಕುಳಿತಿದ್ದಾರೆ. ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಅವರು ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಬಾರಿಯ ಪ್ರವಾಸದಲ್ಲಿ ಸಾಲು ಸಾಲು ನಿರಾಶೆ ಅನುಭವಿಸಿರುವ ಕೀರನ್ ಪೊಲಾರ್ಡ್ ಪಡೆಗೆ ಭಾರತದ ನೆಲದಲ್ಲಿ ಸಮಾಧಾನದ ಗೆಲುವು ಸಾಧಿಸುವ ಕೊನೆಯ ಅವಕಾಶ ಇದಾಗಿದೆ. ಏಕದಿನದಲ್ಲಿ ಸಾರಾಸಗಟಾಗಿ ಸರಣಿ ಸೋತಿತ್ತು. ಚುಟುಕು ಸರಣಿಯ ಮೊದಲ ಪಂದ್ಯದಲ್ಲಿ ಕೀರನ್ ಬಳಗವು ವೈಫಲ್ಯ ಅನುಭವಿಸಿತ್ತು.

ಎರಡನೇ ಪಂದ್ಯದಲ್ಲಿ ರೋವ್ಮನ್ ಪೊವೆಲ್ ಮತ್ತು ನಿಕೊಲಸ್ ಪೂರನ್ ಅರ್ಧಶತಕ ಬಾರಿಸಿದ್ದರು. ಆಲ್‌ರೌಂಡರ್ ರಾಸ್ಟನ್ ಚೇಸ್ ಕೂಡ ಉತ್ತಮವಾಗಿ ಆಡಿದ್ದರು. ಇದರಿಂದಾಗಿ ಕೊನೆಯ ಪಂದ್ಯದಲ್ಲಿ ರೋಹಿತ್ ಬಳಗಕ್ಕೆ ದಿಟ್ಟ ಪೈಪೋಟಿಯೊಡ್ಡುವ ಸಾಧ್ಯತೆ ಹೆಚ್ಚಿದೆ.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯಿ, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಋತುರಾಜ್ ಗಾಯಕವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್, ಹರ್‌ಪ್ರೀತ್ ಬ್ರಾರ್.

ವೆಸ್ಟ್ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ), ನಿಕೊಲಸ್ ಪೂರನ್ (ಉಪ ನಾಯಕ), ಫ್ಯಾಬಿಯನ್ ಅಲೆನ್, ಡರೆನ್ ಬ್ರಾವೊ, ರೊಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡಾಮ್ನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹುಸೇನ್, ಬ್ರೆಂಡನ್ ಕಿಂಗ್, ರೋವ್ಮನ್ ಪೊವೆಲ್, ರೊಮಾರಿಯಾ ಶೇಫರ್ಡ್, ಒಡಿಯನ್ ಸ್ಮಿತ್, ಕೈಲ್ ಮೇಯರ್ಸ್, ಹೇಡನ್ ವಾಲ್ಶ್‌.

ಪಂದ್ಯ ಆರಂಭ: ರಾತ್ರಿ 7 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಪೆಟ್ರೋಲ್, ಡೀಸೆಲ್ ಬೆಲೆ: ಫೆಬ್ರವರಿ 20 ರಂದು ಇಂಧನ ದರಗಳು ಬದಲಾಗದೆ ಇರುತ್ತವೆ| ಇತ್ತೀಚಿನ ನಗರವಾರು ದರಗಳನ್ನು ಇಲ್ಲಿ ಪರಿಶೀಲಿಸಿ

Sun Feb 20 , 2022
  ಫೆಬ್ರವರಿ 20, 2022 ರ ಭಾನುವಾರದಂದು ಪ್ರಮುಖ ಭಾರತೀಯ ನಗರಗಳಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೂನ್ 2017 ರಲ್ಲಿ ಬೆಲೆಗಳ ದೈನಂದಿನ ಪರಿಷ್ಕರಣೆ ಪ್ರಾರಂಭವಾದಾಗಿನಿಂದ ಬೆಲೆಗಳು ಬದಲಾಗದೆ ಇರುವ ದೀರ್ಘ ಅವಧಿಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 95.41 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 86.67 ರೂ. ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ ಲೀಟರ್‌ಗೆ 109.98 […]

Advertisement

Wordpress Social Share Plugin powered by Ultimatelysocial