ದೇಶದ ನಂ 1 ಸೀರಿಯಲ್ ‘ಅನುಪಮಾ’ ಕನ್ನಡದಲ್ಲಿ ಪ್ರಸಾರ.

 

ಕನ್ನಡದ ಜನಪ್ರಿಯ ವಾಹಿನಿ ‘ಸ್ಟಾರ್ ಸುವರ್ಣ’ ಪ್ರೇಕ್ಷಕರಿಗಾಗಿ ಹೊತ್ತು ತರ್ತಿದೆ ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆ ‘ಅನುಪಮಾ’. ವಿಭಿನ್ನ ಕಥಾ ಹಂದರವುಳ್ಳ ‘ನಮ್ಮ ಲಚ್ಚಿ’, ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’, ‘ಜೇನುಗೂಡು’, ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ ಸ್ಟಾರ್ ಸುವರ್ಣ ವಾಹಿನಿ, ಇದೀಗ ಇಡೀ ದೇಶದ ಹೃದಯ ಗೆದ್ದ ಗೃಹಿಣಿಯ ಕಥೆಯನ್ನು ಹೇಳಲು ಮುಂದಾಗಿದೆ.ಮಧ್ಯ ವಯಸ್ಕ ಮಹಿಳೆ ಅನುಪಮ. ಸದಾ ಮನೆಯವರ ಬಗ್ಗೆ ಕಾಳಜಿ, ಕುಟುಂಬದವರ ಇಷ್ಟ-ಕಷ್ಟ, ಬೇಕು-ಬೇಡಗಳನ್ನು ಅರ್ಥ ಮಾಡಿಕೊಂಡು ಮನೆಯ ಗೃಹಲಕ್ಷ್ಮಿಯಂತಿರುವ ಈಕೆಗೆ ಮದುವೆಯಾಗಿ ಎರಡು ದಶಕಗಳ ಮೇಲಾಗಿದೆ. ತಾಯಿ, ಹೆಂಡತಿ. ಮಗಳು, ಸೊಸೆ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸುವ ಈಕೆಗೆ 3 ಮಕ್ಕಳು, ಗಂಡನಿಗೆ ಈಕೆ ಓದಿಲ್ಲ, ಹಳೆಯ ಕಾಲದವಳು ಎಂಬ ತಾತ್ಸಾರ. ಮನೆಯಲ್ಲಿ ಏನೇ ತಪ್ಪುಗಳಾದರು ಅತ್ತೆ ದೂಷಿಸುವುದು ಈಕೆಯನ್ನೇ. ಶರವೇಗದಲ್ಲಿ ಬದಲಾಗುತ್ತಿರುವ ಕಾಲ, ಆಧುನಿಕ ಯುಗಕ್ಕೆ ಹೊಂದಿಕೊಂಡಿರುವ ಕುಟುಂಬದಲ್ಲಿ ಅನುಪಮ ಯಾವ ರೀತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು, ಸಂತೋಷ ಕಂಡುಕೊಳ್ಳುತ್ತಾಳೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.ದೇಶದ ನಂ.1 ಧಾರವಾಹಿ ಎಂಬ ಪಟ್ಟವನ್ನು ಅಲಂಕರಿಸಿರುವ ‘ಅನುಪಮ’ ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡದಲ್ಲಿ ಬರ್ತಿರೋದಕ್ಕೆ ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ.
ಹೊಚ್ಚ ಹೊಸ ಧಾರಾವಾಹಿ ‘ಅನುಪಮ’ ಮಾರ್ಚ್ 6 ರಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. ಇನ್ನು ಬದಲಾದ ಸಮಯದಲ್ಲಿ ಬರ್ತಿದೆ ‘ಅನುರಾಗ ಅರಳಿತು’ ಮಾರ್ಚ್ 6 ರಿಂದ ಮಧ್ಯಾಹ್ನ 2 ಗಂಟೆಗೆ ಪ್ರಸಾರ ಆಗಲಿದೆ.
ರೂಪಾ ಗಂಗೂಲಿ, ಗೌರವ್ ಖನ್ನಾ, ಸುಧಂಶು ಪಾಂಡೆ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದೆ. ಇನ್ನು ಮಧ್ಯ ವಯಸ್ಕದವರ ಲವ್ ಸ್ಟೋರಿ ಜೊತೆಯಲ್ಲಿ ಮಕ್ಕಳನ್ನು ಬೆಳೆಸುವ ಪರಿ, ಸಂಕಷ್ಟಗಳನ್ನು ಎದುರಿಸಿ ಬದುಕುವ ಕಥೆ ಈ ಧಾರಾವಾಹಿಯಲ್ಲಿದೆ. ಬೆಂಗಾಳಿಯ ‘ಶ್ರೀಮೋಯಿ’ ಕಥೆಯನ್ನು ಈ ಧಾರಾವಾಹಿ ಆಧರಿಸಿ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೀರಿಗೆ ನೀರಿನಲ್ಲಿದೆ ಈ ಆರೋಗ್ಯ ಲಾಭ.

Mon Feb 27 , 2023
ಎಲ್ಲಾ ರೀತಿಯ ರೋಗಗಳಿಗೂ ವೈದ್ಯರ ಬಳಿ ಓಡಬೇಕಿಲ್ಲ. ಕೆಲವೊಂದಕ್ಕೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು.ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ದತೆ, ಬಾಯಿ ಹುಣ್ಣು, ಪಿತ್ತ ಸಂಬಂಧಿ ತಲೆನೋವು, ವಾಂತಿ- ಇದಕ್ಕೆಲ್ಲಾ ಮನೆಮದ್ದನ್ನೇ ಪ್ರಯತ್ನಿಸಬಹುದು.ಮನೆಯಲ್ಲಿ ಜೀರಿಗೆ ಇದ್ದರೆ ಸಾಕು.ಬಿಸಿಬಿಸಿ ನೀರಿಗೆ ಜೀರಿಗೆ ಹಾಕಿ, ಅದನ್ನು ಕುದಿಸಿ ಕುಡಿದರೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಶಮನವಾಗುತ್ತವೆ. ಜೀರ್ಣಕ್ರಿಯೆ ವೇಗವಾಗಿ ಆಗುತ್ತದೆ. ಆಗ ಯಾವ ಕಾಯಿಲೆಗಳೂ ಬರುವುದಿಲ್ಲ.ಜೀರಿಗೆಗೆ ರಕ್ತ ಶುದ್ದಿ ಮಾಡುವ ಶಕ್ತಿ ಇದೆ. ಬಾಯಿ ರುಚಿ ಕಳೆದುಕೊಂಡರೆ ಜೀರಿಗೆ […]

Advertisement

Wordpress Social Share Plugin powered by Ultimatelysocial