ಅಮ್ರೋಹಾ ನಿವಾಸಿ ಶಬ್ನಮ್ ಗೆ ಮರಣದಂಡನೆ

ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ಮಹಿಳಾ ಕೈದಿಯನ್ನು ಗಲ್ಲಿಗೇರಿಸಲಾಗ್ತಿದೆ. ಮಥುರಾದ ಅಮ್ರೋಹಾ ನಿವಾಸಿ ಶಬ್ನಮ್ ಗೆ ಮರಣದಂಡನೆ ಶಿಕ್ಷೆಯಾಗ್ತಿದೆ. ಗಲ್ಲಿಗೇರಿಸುವ ತಯಾರಿ ಶುರುವಾಗಿದೆ.ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ್ದ ಪವನ್ ಜಲ್ಲಾಡ್, ಈಗಾಗಲೇ ಎರಡು ಬಾರಿ ನೇಣು ಬಿಗಿಯುವ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಗಲ್ಲಿಗೇರಿಸುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಏಪ್ರಿಲ್ 2008ರಲ್ಲಿ ಶಬ್ನಮ್ ತನ್ನ ಪ್ರೇಮಿ ಜೊತೆ ಸೇರಿ ಕುಟುಂಬಸ್ಥರ ಹತ್ಯೆ ಮಾಡಿದ್ದಳು. ಕುಟುಂಬಸ್ಥರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು. ಶಬ್ನಮ್ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ರಾಷ್ಟ್ರಪತಿ ಕೂಡ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ.ಡೆತ್ ವಾರೆಂಟ್ ಬರ್ತಿದ್ದಂತೆ ಶಬ್ನಮ್ ಳನ್ನು ಗಲ್ಲಿಗೇರಿಸುವುದಾಗಿ ಜೈಲಿನ ಅಧಿಕಾರಿಗಳು ಹೇಳಿದ್ದಾರೆ.ಬಿಹಾರದ ಬಕ್ಸಾರ್ ನಿಂದ ನೇಣು ಹಗ್ಗವನ್ನು ತರಿಸಲಾಗ್ತಿದೆ.

ಇದನ್ನೂ ಓದಿ:ಕುಖ್ಯಾತ ರೌಡಿಶೀಟರ್ ಆರ್ಮುಗಂ ಜೈಲು ಪಾಲು.!

Please follow and like us:

Leave a Reply

Your email address will not be published. Required fields are marked *

Next Post

ಅಪರಿಚಿತ ಶವ ಪತ್ತೆ

Wed Feb 17 , 2021
ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.ನಂಗಲಿ ಗ್ರಾಮದ ಸ್ಮಶಾಣದದಲ್ಲಿ ಶವ ಪತ್ತೆಯಾಗಿದ್ದು, ವ್ಯಕ್ತಿ ಕೊಲೆ ಮಾಡಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯ ಎರಡು ಕೈಗಳು ಹಿಂದಕ್ಕೆ ಹಗ್ಗದಲ್ಲಿ ಕಟ್ಟಿರುವ ರೀತಿಯಲ್ಲಿ ಶವ ಪತ್ತೆಯಾಗಿದೆ. ಇನ್ನು ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು,ಪ್ರಕರಣ ನಂಗಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ:ಅಮ್ರೋಹಾ ನಿವಾಸಿ ಶಬ್ನಮ್ ಗೆ […]

Advertisement

Wordpress Social Share Plugin powered by Ultimatelysocial