ನೌಕಾನೆಲೆಯಲ್ಲಿ  10 ಕೆಲಸಗಾರರ ಕ್ಯಾಂಪ್ ನಲ್ಲಿ ಅನೇಕ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. 60ಕ್ಕೂ ಹೆಚ್ಚು ಪ್ರಕರಣಗಳಿವೆ. ಅನೇಕ ನೌಕ ಸಿಬ್ಬಂದಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದಿರುವ ಕಾರ್ಮಿಕರನ್ನು ಐಸೋಲೇಷನ್ ಮಾಡಲಾಗಿದೆ. ಆದರೆ, ಅದನ್ನು ಅತ್ಯುತ್ತಮ ರೀತಿಯಲ್ಲಿ ಮಾಡಬೇಕಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶರದ್ ನಾಯಕ್ ತಿಳಿಸಿದರು.  ಪಾಲಿಟಿವ್ ಬಂದಿರುವ  ನೌಕಾ ಮತ್ತು ನಿರ್ಮಾಣ ಸಿಬ್ಬಂದಿಯ ನಿಖರ ಸಂಖ್ಯೆಯನ್ನು ಇಲಾಖೆ ನೀಡಲು ಸಾಧ್ಯವಾಗಲಿಲ್ಲ.ಸೀಬರ್ಡ್ ಯೋಜನೆಯ 2 ನೇ […]

ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ   ಸಮಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 55 ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದಿದೆ. ಮೂಲಗಳ ಪ್ರಕಾರ, ಕೋಲಾರದ 110 ಪೊಲೀಸರ ಪೈಕಿ ಈ ವರೆಗೂ 43 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 25 ಮಂದಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಕೆಜಿಎಫ್‌ನಿಂದ ಕರ್ತವ್ಯದಲ್ಲಿದ್ದ 110 ಸಿಬ್ಬಂದಿಯಲ್ಲಿ 60 ಸಿಬ್ಬಂದಿಯನ್ನು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 20 ಮಂದಿಗೆ ಪಾಸಿಟಿವ್ ಬಂದಿದೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ಪರೀಕ್ಷೆಗೊಳಪಟ್ಟಿದ್ದ […]

ಉತ್ತರ ಪ್ರದೇಶದಲ್ಲಿ ‌ ಚುನಾವಣಾ ಮೈತ್ರಿಗಳು ಗಂಟೆ ಗಂಟೆಗೂ ಬದಲಾಗುತ್ತಿದ್ದು, ಅಖಿಲೇಶ್ ಯಾದವ್‌ಗೆ ಪೂರ್ಣ ಬೆಂಬಲ ಘೋಷಿಸಿದ್ದ ಭೀಮ್ ಆರ್ಮಿ ಕೇವಲ 24 ಗಂಟೆಗಳಲ್ಲಿಯೇ ವಾಪಾಸ್ ತೆಗೆದುಕೊಂಡಿದೆ. ದಲಿತರನ್ನು ಅಖಿಲೇಶ್ ಯಾದವ್‌ ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ, ಅವರನ್ನು ಚುನಾವಣಾ ಕಣದಲ್ಲಿಳಿಸಲು ಆಹ್ವಾನ ನೀಡುತ್ತಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಶನಿವಾರ ದೂರಿದ್ದಾರೆ.‌ ಇದಕ್ಕೂ ಮೋದಲು ಬಿಜೆಪಿ ಸೋಲಿಸಲು ಒಗ್ಗಟ್ಟು ಅತ್ಯಂತ ಮುಖ್ಯ ಎಂದು ಹೇಳಿ, […]

ಆಫ್ರಿಕಾ ವಿರುದ್ದದ   ಮೂರನೇ ಟೆಸ್ಟ್ ಮೂರನೇ ದಿನದಾಟದಲ್ಲಿ ಥರ್ಡ್ ಅಂಪೈರ್ ನಿರ್ಣಯದ ವಿರುದ್ದ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ ಮೇಲೆ ನಿಷೇಧ ವಿಧಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ದಕ್ಷಿಣಾ ಆಫ್ರಿಕಾದ ಎರಡನೇ ಇನ್ನಿಂಗ್ಸ್ ಸಂದರ್ಭದಲ್ಲಿ ಡೀನ್ ಎಲ್ಗರ್ ಎಲ್ ಬಿ ಡಬ್ಲ್ಯುಯು ಅಪೀಲ್ ಬಗ್ಗೆ ಥರ್ಡ್ ಅಂಪೈರ್ ನಿರ್ಣಯ ವಿವಾದಾಸ್ಪದವಾಗಿದೆ. ಫೀಲ್ಡ್ ಅಂಪೈರ್ ಔಟ್ ನೀಡಿದ್ದರೂ ಬಾಲ್ ಟ್ರಾಕಿಂಗ್ ನಲ್ಲಿ ಬಾಲ್ ವಿಕೆಟ್ ಮೇಲಿನಿಂದ ಹೋಗಿದೆ […]

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ಮೂರನೇ ಡೋಸ್  ಲಸಿಕೆ ತೆಗೆದುಕೊಂಡರು. ನಂತರ ಮಾತನಾಡಿದ ಅವರು ಕೊರೋನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳು ಅಗತ್ಯವಾಗಿ ಬೂಸ್ಟರ್ ಡೋಸ್ ಪಡೆಯುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಮನವಿಯನ್ನು ಮಾಡಿಕೊಂಡರು.ಈ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸಚಿವ  ಡಾ .ಕೆ. ಸುಧಾಕರ್‌ ಉಪಸ್ತಿತರಿದ್ದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

ಬೆಂಗಳೂರಿನ ಅರಕೆರೆ ಗೇಟ್ ಬಳಿಯಿರುವ   ಸೌಥ್ ಇಂಡಿಯನ್ ಮಾಲ್‌ನಲ್ಲಿ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ 6 ಅಗ್ನಿಶಾಮಕ ವಾಹನಗಳಿಂದ ಬೆಂಕಿಯನ್ನು ನಂದಿಸಿದ್ದಾರೆ. ಮಾಲ್‌ನ ಸೂಪರ್ ಮಾರ್ಕೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಮಾಲ್‌ನಲ್ಲಿ ಯಾರೂ ಇರಲಿಲ್ಲ. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸತತವಾಗಿ ಎರಡು ಗಂಟೆಗೂ ಹೆಚ್ಚು ಸಮಯದ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸಲಾಯಿತು. ಮಾಲ್ ನ ಗ್ರೌಂಡ್ ಫ್ಲೋರ್​ […]

ಧನಂಜಯ ಅವರ ಮುಂದಿನ ಚಿತ್ರಕ್ಕೆ ಶೀರ್ಷಿಕೆ ಅಂತಿಮ ಆಗಿದೆ. ಈ ಚಿತ್ರಕ್ಕೆ ‘ಹೊಯ್ಸಳ’ ಎಂದು ಹೆಸರಿಡಲಾಗಿದೆ. ಧನಂಜಯ ನಟನೆಯ ‘ರತ್ನನ್​ ಪ್ರಪಂಚ’ ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ರಿಲೀಸ್​ ಆಗಿತ್ತು. ಈ ಚಿತ್ರವನ್ನು ಕೆ.ಆರ್​.ಜಿ. ಸ್ಟುಡಿಯೋಸ್​  ನಿರ್ಮಾಣ ಮಾಡಿತ್ತು. ಈಗ ‘ಹೊಯ್ಸಳ’ ಚಿತ್ರವನ್ನೂ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಹೊಯ್ಸಳ’ ಚಿತ್ರಕ್ಕೆ ಧನಂಜಯ ನಾಯಕ. ಈ ಚಿತ್ರ ಧನಂಜಯ ಅವರ 25ನೇ […]

ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮದ್ಯದ ಅಮಲಿನಲ್ಲಿದ್ದ ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪ್ರೇಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಬಳಿಕ ಆಸ್ಪತ್ರೆಗೆ ದಾಖಲಿಸಿ ಸುಳ್ಳು ವಿಳಾಸ ಕೊಟ್ಟು ಪರಾರಿಯಾಗಿದ್ದ ಪ್ರಿಯಕರ ಮಂಜುನಾಥ್ ಎಂಬಾತನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜ.6ರಂದು ತನ್ನ ಪ್ರೀಯತಮೆ ಮಂಜುಳಾ ಎಂಬಾಕೆಯನ್ನು ಕೊಲೆಗೈದಿದ್ದ.  ಏಳು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಮಂಜುನಾಥ್‌ ಅವಿವಾಹಿತನಾಗಿದ್ದು, ಬಾರ್‌ ಬೆಡ್ಡಿಂಗ್‌ ಕೆಲಸ ಮಾಡುತ್ತಿದ್ದ. ಕೋಣನಕುಂಟೆಯ […]

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ನಿರ್ವಹಣೆ ಮತ್ತು ಇತರ ಕಾಮಗಾರಿಗಳಿಗೆ ಅನುವು ಮಾಡಿಕೊಡಲು ಇಂದು ಬೆಂಗಳುರಿನ ಹಲವಾರು  ಕಡೆ ವಿದ್ಯುತ್‌  ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ  ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ಜೆಪಿ ನಗರ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ತ್ಯಾಗರಾಜನಗರ, ಶ್ರೀನಗರ, ಕೊಡಿಗೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  ವಸಂತ ವಲ್ಲಬ ನಗರ, ಶಾರದ ನಗರ, ಜರಗನಹಳ್ಳಿ, ಎಲ್‌ಐಸಿ ಕಾಲೋನಿ, ಜೆಪಿ ನಗರ […]

  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟ ನಿಲುವು ತೆಗೆದುಕೊಂಡಿದ್ದಾರೆ. ಸಂಪೂರ್ಣವಾಗಿ ಪಾದಯಾತ್ರೆ ನಿಷೇಧಿಸಲಾಗಿದೆ. ಸಿಎಂ ನಾಯಕತ್ವದಲ್ಲಿ ಎಲ್ಲ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಅಲ್ಲದೇ ಮುಖ್ಯಮಂತ್ರಿ ಸಂಬಂಧಪಟ್ಟ ಸಚಿವರಿಗೆ, ಇಲಾಖೆಗೆ ಸೂಕ್ತ ನಿರ್ದೇಶನ ಕೊಟ್ಟಿದ್ದಾರೆ. ಅವರು ಕಾನೂನು ಉಲ್ಲಂಘನೆ ಮಾಡಲಿ ನೋಡೋಣ. ಏನು ಮಾಡಬೇಕೋ ಮಾಡ್ತೀವಿ. ಸರ್ಕಾರ ಈ ಬಗ್ಗೆ ಯಾವುದೇ ಮೀನಾಮೇಷ ಮಾಡುತ್ತಿಲ್ಲ ಎಂದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial