ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಪ್ರಿಯಕರ!!

ಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮದ್ಯದ ಅಮಲಿನಲ್ಲಿದ್ದ ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪ್ರೇಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಬಳಿಕ ಆಸ್ಪತ್ರೆಗೆ ದಾಖಲಿಸಿ ಸುಳ್ಳು ವಿಳಾಸ ಕೊಟ್ಟು ಪರಾರಿಯಾಗಿದ್ದ ಪ್ರಿಯಕರ ಮಂಜುನಾಥ್ ಎಂಬಾತನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಜ.6ರಂದು ತನ್ನ ಪ್ರೀಯತಮೆ ಮಂಜುಳಾ ಎಂಬಾಕೆಯನ್ನು ಕೊಲೆಗೈದಿದ್ದ.  ಏಳು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಮಂಜುನಾಥ್‌ ಅವಿವಾಹಿತನಾಗಿದ್ದು, ಬಾರ್‌ ಬೆಡ್ಡಿಂಗ್‌ ಕೆಲಸ ಮಾಡುತ್ತಿದ್ದ. ಕೋಣನಕುಂಟೆಯ ಬೀರೇಶ್ವರನಗರದಲ್ಲಿ ವಾಸವಾಗಿದ್ದ. ಹಲವು ಮಹಿಳೆಯರ ಜತೆ ಸಂಬಂಧ ಬೆಳೆಸಿಕೊಂಡಿದ್ದ. ಈ ಮಧ್ಯೆ ವೇಶ್ಯಾವಾಟಿಕೆ ದಂಧೆ ನಡೆಸುವ ಲಕ್ಷ್ಮೀ ಎಂಬಾಕೆ ಮೂಲಕ ಮಂಜುಳಾ ಪರಿಚಯವಾಗಿತ್ತು. ವಿವಾಹಿತೆಯಾಗಿದ್ದ ಮಂಜುಳಾ, ಪತಿಯಿಂದ ದೂರವಾಗಿದ್ದಳು. ಇಬ್ಬರು ಮಕ್ಕಳು ಸಂಬಂಧಿಕರ ಮನೆಯಲ್ಲಿದ್ದರು. ದುರ್ನಡತೆಯಿಂದ ಸಂಬಂಧಿಕರು ಈಕೆಯನ್ನು ಮನೆಯಿಂದ ಹೊರ ಹಾಕಿದ್ದರು.

ಹೀಗಾಗಿ ಮಡಿವಾಳದಲ್ಲಿ ಬಾಡಿಗೆ ಮನೆಯಲ್ಲಿದ್ದು, ಹೌಸ್‌ಕೀಪಿಂಗ್‌ ಕೆಲಸಕ್ಕೆ ಹೋಗುತ್ತಿದ್ದಳು. ಲಕ್ಷ್ಮೀ ಮೂಲಕ ಪರಿಚಯವಾದ ಆರೋಪಿ ಮಂಜುನಾಥ್‌ ಜತೆ ಸಂಬಂಧ ಬೆಳೆಸಿಕೊಂಡು, ಕೋಣನಕುಂಟೆಯಲ್ಲಿರುವ ಆತನ ಮನೆಯಲ್ಲಿಯೇ ವಾಸವಾಗಿದ್ದಳು. ಸುಮಾರು 16 ವರ್ಷಗಳಿಂದ ಮದ್ಯದ ಚಟ ಅಂಟಿಸಿಕೊಂಡಿದ್ದ ಮಂಜುಳಾ ಪ್ರತಿ ನಿತ್ಯ ಕುಡಿಯುತ್ತಿದ್ದಳು. ಪ್ರಿಯಕರನೇ ಆಕೆಗೆ ಮದ್ಯ ತುಂದು ಕೊಡುತ್ತಿದ್ದ. ಈ ನಡುವೆ ಆಕೆ ಪರ ಪುರುಷರ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಗಲಾಟೆಯಾಗಿ ಗಲಾಟೆಯಿಂದ ಆಕ್ರೋಶಗೊಂಡ ಮಂಜುನಾಥ್ ಮಂಜಳಾಳನ್ನು ಹೊಡೆದು ಕೊಂದು ಹಾಕಿದ್ದಾನೆ. ತಲೆಯನ್ನು ಗೋಡೆಗೆ ಗುದ್ದಿಸಿ, ಬಳಿಕ ಬಾರ್‌ ಬೆಂಡಿಂಗ್ ಕೆಲಸಕ್ಕೆ ಬಳಸುವ ಸುತ್ತಿಗೆಯಿಂದ ಆಕೆಯ ತೊಡೆ, ಬೆನ್ನಿಗೆ ಹೊಡೆದು ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ …

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಂದದ ತುಟಿಯ ಸುಂದರಿ ನೀವಾಗಬೇಕಾ...?

Fri Jan 14 , 2022
ತುಟಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ತುಟಿಗಳ ಸಿಪ್ಪೆ ಏಳುವ ಸಮಸ್ಯೆ ಚಳಿಗಾಲದಲ್ಲಿ ಬಹಳ ಕಾಡುತ್ತದೆ. ಮನೆಮದ್ದಿನ ಮೂಲಕವೇ ಈ ಸಮಸ್ಯೆಯಿಂದ ಹೊರಬರಬಹುದು ಜೇನುತುಪ್ಪ ಮತ್ತು ಸಕ್ಕರೆಯ ಸ್ಕ್ರಬ್ ಮಾಡಿ ಹಚ್ಚುವುದರಿಂದ ತುಟಿಯ ಮೇಲ್ಪದರದ ಸಿಪ್ಪೆ ಏಳುವ ಸಮಸ್ಯೆ ಕಡಿಮೆಯಾಗುತ್ತದೆ. ಜೇನುತುಪ್ಪ ತುಟಿಯನ್ನು ನಯಗೊಳಿಸುವುದು ಈ ಮಿಶ್ರಣವನ್ನು ತುಟಿಗೆ ಹಚ್ಚಿ 5 ನಿಮಿಷ ಸ್ಕ್ರಬ್ ಮಾಡಿ. 10 ನಿಮಿಷದ ಬಳಿಕ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಮಾಡಿ ತೆಂಗಿನ ಎಣ್ಣೆಗೆ  ಟ್ರೀ […]

Advertisement

Wordpress Social Share Plugin powered by Ultimatelysocial