ಸೀಬರ್ಡ್ ನೌಕಾನೆಲೆಯಲ್ಲಿ 50ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆ

ನೌಕಾನೆಲೆಯಲ್ಲಿ  10 ಕೆಲಸಗಾರರ ಕ್ಯಾಂಪ್ ನಲ್ಲಿ ಅನೇಕ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. 60ಕ್ಕೂ ಹೆಚ್ಚು ಪ್ರಕರಣಗಳಿವೆ. ಅನೇಕ ನೌಕ ಸಿಬ್ಬಂದಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದಿರುವ ಕಾರ್ಮಿಕರನ್ನು ಐಸೋಲೇಷನ್ ಮಾಡಲಾಗಿದೆ. ಆದರೆ, ಅದನ್ನು ಅತ್ಯುತ್ತಮ ರೀತಿಯಲ್ಲಿ ಮಾಡಬೇಕಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶರದ್ ನಾಯಕ್ ತಿಳಿಸಿದರು.  ಪಾಲಿಟಿವ್ ಬಂದಿರುವ  ನೌಕಾ ಮತ್ತು ನಿರ್ಮಾಣ ಸಿಬ್ಬಂದಿಯ ನಿಖರ ಸಂಖ್ಯೆಯನ್ನು ಇಲಾಖೆ ನೀಡಲು ಸಾಧ್ಯವಾಗಲಿಲ್ಲ.ಸೀಬರ್ಡ್ ಯೋಜನೆಯ 2 ನೇ ಹಂತದ ಹಿಡನ್ ವ್ಯಾಲಿ ನಿರ್ಮಾಣ ಶಿಬಿರಕ್ಕೆ ಭೇಟಿ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ನೌಕಾ ಅಧಿಕಾರಿಗಳು ಮತ್ತು ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದರು ಮತ್ತು ಸರಿಯಾದ ರೀತಿಯಲ್ಲಿ ಐಸೋಲೇಷನ್ ಮಾಡಲು ಸೂಚನೆ ನೀಡಿದರು. ಪ್ರತಿ ಶಿಬಿರದಲ್ಲಿ ಸುಮಾರು 500 ಕಾರ್ಮಿಕರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

6 ವರ್ಷದ ಮಗನ ಜತೆ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ! ಡೆತ್​ನೋಟ್​ನಲ್ಲಿದೆ ಪತ್ನಿ ಮತ್ತು ಎಲ್​ಐಸಿ ಏಜೆಂಟ್​ ಹೇಸರು

Sat Jan 15 , 2022
6 ವರ್ಷದ ಮಗನ ಜತೆ ತಡರಾತ್ರಿ ಕೆರೆಗೆ ಬಿದ್ದು ತಂದೆ ಮಗು  ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ಬೆಳಗ್ಗೆ ಶವಗಳನ್ನು ಹೊರ ತೆಗೆಯುತ್ತಿದ್ದಂತೆ ಈತನ ಪತ್ನಿಯೂ ಕೆರೆಗೆ ಹಾರಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಪಿಟ್ಟೆಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ. ಸಾವಿಗೂ ಮುನ್ನ ಆತ ಬರೆದಿಟ್ಟಿದ್ದ ಡೆತ್​ನೋಟ್ನಲ್ಲಿ ಪತ್ನಿ ಮತ್ತು ಮತ್ತೊಬ್ಬ ಪುರುಷನ ಹೆಸರಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಪಿಟ್ಟೆಕೊಪ್ಪಲು ಗ್ರಾಮದ  ಗಂಗಾಧರಗೌಡ (36) ಮತ್ತು ಇವರ 6 […]

Advertisement

Wordpress Social Share Plugin powered by Ultimatelysocial